ವಿಜಯನಗರ ತುಳುವ ವೀರ ನರಸಿಂಹರಾಯ

Author : ಗುರುಮೂರ್ತಿ ಪೆಂಡಕೂರು

Pages 138

₹ 150.00




Year of Publication: 2015

Synopsys

ವೀರ ನರಸಿಂಹರಾಯ ವಿಜಯನಗರ ಸಾಮ್ರಾಜ್ಯ ಚರಿತ್ರೆಯಲ್ಲಿ ಬರುವ ತುಳುವ ವಂಶದ ಸ್ಥಾಪಕ. ಈತ ವಿಜಯನಗರದ ಅರಸ ಕೃಷ್ಣದೇವರಾಯನಿಗೆ ಸ್ಫೂರ್ತಿ ಒದಗಿಸಿದಾತ. ಕೃಷ್ಣದೇವರಾಯನಿಗಿಂತ ಮೊದಲೇ ತನ್ನ ಆಸ್ಥಾನದಲ್ಲಿ ಅಷ್ಟ ದಿಗ್ಗಜರೆಂಬ ಕವಿ ಶೇಖರರನ್ನು ಪೋಷಿಸಿದವನು.

ಈತನ ಬಗ್ಗೆ ಅನೇಕ ಕಟ್ಟುಕತೆಗಳು ಬಂದಿದ್ದು ಅದರಲ್ಲಿ ಒಂದು ಕೃಷ್ಣದೇವರಾಯನ ಕಣ್ಣು ಕೀಳಿಸಲು ಯತ್ನಿಸಿದ ಎಂಬುದು. ಆದರೆ ಇವೆಲ್ಲವು ಸುಳ್ಳು ಎಂಬುದನ್ನು ಸರ್ವಮಾನ್ಯವಾದ ಆಧಾರಗಳಿಂದ ದೃಢಪಡಿಸುತ್ತದೆ ಕೃತಿ. ವೀರನರಸಿಂಹರಾಯನ ಆಳ್ವಿಕೆಯ ಕಾಲದ ಆರ್ಥಿಕ, ಸೈನಿಕ ವ್ಯವಸ್ಥೆಗಳು, ವಿದೇಶಿಗರೊಂದಿಗಿನ ವ್ಯಾಪಾರ ಸಂಬಂಧ, ಶಾಂತಿ ಸುವ್ಯವಸ್ಥೆ, ಗುಪ್ತಚರ ವಿಭಾಗ, ಆಡಳಿತ ಪದ್ಧತಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ವಿವರಗಳನ್ನು ಹಾಗೂ ತುಳುವ ವಂಶದ ಮೂಲ, ಬೆಳವಣಿಗೆ ಕುರಿತ ಮುಖ್ಯ ಮಾಹಿತಿಗಳನ್ನು ಕೃತಿ ನೀಡುತ್ತದೆ. 

About the Author

ಗುರುಮೂರ್ತಿ ಪೆಂಡಕೂರು
(09 June 1938)

ಬರಹಗಾರ ಗುರುಮೂರ್ತಿ ಪೆಂಡಕೂರು ಅವರು ಜನಿಸಿದ್ದು 1938 ಜೂನ್ 9ರಂದು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಬರಹಗಾರರು. ಸಾಹಿತ್ಯ ಪ್ರಿಯರಾಗಿದ್ದ ಇವರ ಹುಟ್ಟೂರು ಬಳ್ಳಾರಿ ಜಿಲ್ಲೆ ದೇವರಕೆರೆ. ತಾಯಿ ರಾಮಕ್ಕ, ತಂದೆ ವಿರೂಪಣ್ಣ. ಬಳ್ಳಾರಿಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರವಾಸಿ ಪ್ರಿಯರಾಗಿರುವ ಇವರು ವಿಶ್ವದ ಹಲವಾರು ದೇಶಗಳನ್ನು ಸುತ್ತಿದ್ದಾರೆ.  ಗುರುಮೂರ್ತಿ ಅವರ ಪ್ರಮುಖ ಕೃತಿಗಳೆಂದರೆ ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ...

READ MORE

Related Books