ವಿಜ್ಞಾನ ಹೊತ್ತಿಗೆ

Author : ಚನ್ನಪ್ಪ ಕೆ. ಎಂ

₹ 100.00




Year of Publication: 2021
Published by: ಯಾಜಿ ಪ್ರಕಾಶನ
Address: ಭೂಮಿ. ಎಂ.ಪಿ ಪ್ರಕಾಶ ನಗರ, ನೆಹರೂ ಕಾಲೋನಿ, ಹೊಸಪೇಟೆ
Phone: 9449922800

Synopsys

’ವಿಜ್ಞಾನ ಹೊತ್ತಿಗೆ’ ಕೃತಿಯು ಚನ್ನಪ್ಪ ಕೆ.ಎಂ ಅವರ ಪಠ್ಯ ಆಧಾರಿತ ವಿಜ್ಞಾನ ಕೃತಿಯಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ರಚಿತವಾದ ಈ ಕೃತಿಯು ಜ್ಞಾನಕ್ಕಾಗಿ ವಿಜ್ಞಾನ ಅನ್ನುವ ವಿಚಾರವನ್ನು ಒಳಗೊಂಡಿದೆ. ಗುಣಾತ್ಮಕ ಶಿಕ್ಷಣಕ್ಕೆ ಮತ್ತು ವಿಜ್ಞಾನ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಡಿಮೆ ಖರ್ಚಿನ ಕಲಿಕೋಪಕರಣಗಳನ್ನು ತಯಾರಿಸಿ ಹಾಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸಲಾಗಿದೆ. ಲೇಖಕ ಚನ್ನಪ್ಪ ಅವರು ಪರೀಕ್ಷಾ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ಕಾರ್ಯಗಾರರಾಗಿ. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದು, ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಹೇಳುತ್ತಾರೆ. ’ವಿಜ್ಞಾನ ಹೊತ್ತಿಗೆ’ ಕೃತಿಯು ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿಯನ್ನು ನೀಡುತ್ತದೆ. 

About the Author

ಚನ್ನಪ್ಪ ಕೆ. ಎಂ

ಲೇಖಕ ಚನ್ನಪ್ಪ ಕೆ. ಎಂ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ಬಿ.ಎಸ್ಸಿ. ಬಿ.ಇಡಿ ಪದವೀಧರು. ಆಕಾಶವಾಣಿ, ಜಿನಶ್ರೀ ಟಿವಿ ಹಾಗೂ ಇಂಚರ ಟಿವಿ ವಾಹಿನಿಯಲ್ಲಿ ಪರೀಕ್ಷಾ ತಯಾರಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕೃತಿಗಳು: ವಿಜ್ಞಾನ ಹೊತ್ತಿಗೆ ಪ್ರಶಸ್ತಿ-ಪುರಸ್ಕಾರಗಳು: ಸೃಜನಶೀಲ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಉತ್ತಮ ಶೀಕ್ಷಕ ಪ್ರಶಸ್ತಿ, ವಿವೇಕ ರತ್ನ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಜವಹರಲಾಲ್ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಿಂದ ಪ್ರಶಸ್ತಿ, ಭಾರತ ರತ್ನ ಪ್ರೊ. ಸಿಎನ್. ...

READ MORE

Related Books