ವಿಜ್ಞಾನಿಗಳೊಡನೆ ರಸನಿಮಿಷಗಳು

Author : ಜೆ.ಆರ್. ಲಕ್ಷ್ಮಣರಾವ್

Pages 140

₹ 68.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001

Synopsys

ಲೇಖಕ ಡಾ. ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ- ವಿಜ್ಞಾನಿಗಳೊಡನೆ ರಸ ನಿಮಿಷಗಳು. ವಿಜ್ಞಾನಿಗಳೆಂದರೆ ವಿಚಿತ್ರ ಮನೋಧರ್ಮದವರು. ಅಸಾಮಾನ್ಯರು. ವಿಜಾತೀಯ ಜನ ಎಂಬ ಭಾವನೆ ಬೇಡ. ಅವರೂ ಎಲ್ಲರಂತೆ ಮನುಷ್ಯರೇ. ಅವರಿಗೂ ಹಸಿವು ನೀರಡಿಕೆಗಳಾಗುತ್ತವೆ. ನಿತ್ಯಜೀವನದಲ್ಲಿ ನೇರ ಅನುಭವಕ್ಕೆ ಬರದಿರುವ ಯಾವುದೋ ಆಕಾಶಕಾಯಗಳ ಚಲನವಲನಗಳಲ್ಲಿ, ಅಣುಪರಮಾಣುಗಳ ವ್ಯವಹಾರಗಳಲ್ಲಿ, ಜೀವಕೋಶದ ಅಂತರಾಳದಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಅವರಿಗೆ ಗಾಢವಾದ ಆಸಕ್ತಿ. ಅನೇಕ ವೇಳೆ ಅವರ ವರ್ತನೆ ಅವರಿಗೇನೋ ಸಹಜವಾಗಿ ಕಂಡರೂ, ಅದು ಸಾಮಾನ್ಯ ನಡವಳಿಕೆಯ ಎಲ್ಲೆಯನ್ನು ಮೀರಿದ್ದು, ಇತರರ ದೃಷ್ಟಿಯಲ್ಲಿ ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದೆ. ಈ ಸಂಕಲನದಲ್ಲಿ ಬಗೆಬಗೆಯ ಕಥೆಗಳಿವೆ. ಕೆಲವು ನಿಜವಾಗಿಯೂ ನಡೆದ ಘಟನೆಗಳು; ಇನ್ನು ಕೆಲವು ವಾಸ್ತವ ಘಟನೆಗಳ ಉತ್ಪ್ರೇಕ್ಷಿತ ರೂಪಗಳು. ಇವಲ್ಲದೆ, ಬೇಕೆಂದೇ ಹುಟ್ಟುಹಾಕಿದ ಕಥೆಗಳೂ ಕೆಲವಿರಬಹುದು. ಈ ಕೃತಿಯಲ್ಲಿ ವಿಜ್ಞಾನಿಗಳ ಹಸುಳೆ ಸ್ವಭಾವ, ವಿನೋದಪ್ರಿಯತೆ, ಮಾನವೀಯತೆ ಮತ್ತು ಮರೆಗುಳಿತನದ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೀ ಮೂರ್ತಿ ಅವರ ಚಿತ್ರಗಳು ಪುಸ್ತಕದ ಮೆರುಗು ಹೆಚ್ಚಿಸಿವೆ.

About the Author

ಜೆ.ಆರ್. ಲಕ್ಷ್ಮಣರಾವ್
(21 January 1921 - 29 December 2017)

ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್‌. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು  ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ...

READ MORE

Related Books