ವಿಜ್ಞಾನ-ಸಂಸ್ಕೃತಿ

Author : ಕೆ.ವಿ. ಅಕ್ಷರ

Pages 104

₹ 110.00




Year of Publication: 2005
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741 ಅಕ್ಷರ ಪ್ರಕಾಶನ Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401

Synopsys

ಲೇಖಕ ಕೆ. ವಿ. ಅಕ್ಷರ ಅವರು ಅನುವಾದಿಸಿರುವ ಕೃತಿ ʼವಿಜ್ಞಾನ- ಸಂಸ್ಕೃತಿʼ. ವಿಜ್ಞಾನಿ, ಲೇಖಕ ರೊದ್ದಂ ನರಸಿಂಹ ಅವರ ಆಯ್ದ ಮೂರು ಬರಹಗಳನ್ನು ಅನುವಾದ ಮಾಡಲಾಗಿದೆ. ವಿಜ್ಞಾನದೊಳಗೆ ಅಂತರ್ಗತವಾಗಿರುವ ‘ಸಂಸ್ಕೃತಿ’ ವಿಜ್ಞಾನ-ನಾಗರಿಕತೆ-ಇತಿಹಾಸ-ಸಂಸ್ಕೃತಿ ಹಾಗೂ ಅವುಗಳ ಹಿಂದಿರುವ ವಿಶಾಲ ವಿಚಾರಗಳು ಈ ಬರಹಗಳಲ್ಲಿ ಅನಾವರಣಗೊಂಡಿವೆ. ಜೊತೆಗೆ ವಿಜ್ಞಾನ ಹಾಗೂ ಸಂಸ್ಕೃತಿಯ ಬಗೆಗಿನ ಕುತೂಹಲಕಾರಿ ಪ್ರಶ್ನೆಗಳಿಗೆ ಸಾಂಪ್ರದಾಯಿಕವಾಗಿ ಉತ್ತರ ಕೊಡುವ ಬದಲು ಶಾಸ್ರ್ತೀಯವಾದ ಪುರಾವೆಗಳ ಮೂಲಕ ಓದುಗರಿಗೆ ಕೃತಿ ಉತ್ತರ ಕೊಡುತ್ತದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books