ವಿಕಟಕವಿ ವಿಜಯ

Author : ಪು.ತಿ.ನ. (ಪು.ತಿ. ನರಸಿಂಹಾಚಾರ್ )

Pages 177

₹ 3.00




Year of Publication: 1949
Published by: ಕಾವ್ಯಾಲಯ ಪ್ರಕಾಶನ
Address: ಮೈಸೂರು

Synopsys

ಹಿರಿಯ ಲೇಖಕ ಹಾಗೂ ಚಿಂತಕ ಪು.ತಿ. ನರಸಿಂಹಚಾರ್ ಅವರು ಬರೆದ ರಾಜಕೀಯ ವಸ್ತು ಹೊಂದಿದ ನಾಟಕ-ವಿಕಟಕವಿ ವಿಜಯ. ಈ ಕೃತಿಗೆ ಹಿರಿಯ ಸಾಹಿತಿ ಡಿ.ವಿ.ಜಿ ಅವರು ಮುನ್ನುಡಿ ಬರೆದು ‘1942 ರಿಂದ 1947ರವರೆಗಿನ ರಾಜಕೀಯ ಕೋಲಾಹಲವೇ ಇಲ್ಲಿಯ ನಾಟಕದ ವಸ್ತು. ದೇಶದಲ್ಲಿದ್ದ ಸಂಸ್ಥಾನಿಕ ಅರಸರು ಬ್ರಿಟಿಷ್ ಆಡಳಿತದೆಡೆಗಿನ ಪ್ರತಿಕ್ರಿಯೆ ಹೇಗೆ? ವಿಕಟ ಕವಿ ವಿಜಯನಂತವರ ಮಂತ್ರಿಗಳ ಸಲಹೆ ಏನು? ಹೀಗೆ ರಾಜಕೀಯ ವಸ್ತುವಿನಿಂದ ಸಾಹಿತ್ಯದ ರಸಪಾಕ ಹೊರಡಿಸುವ ಸಿದ್ಧಿಯನ್ನು ಪು.ತಿ. ನರಸಿಂಹಾಚಾರ್ ಅವರಿಗೆ ಸಿದ್ಧಿಸಿದೆ. ಆದರೆ, ಜನರಿಗೆ ಇಂತಹ ಸಾಹಿತ್ಯ ಎಷ್ಟು ಹಿಡಿಸುತ್ತದೆ? ದಿನೇದಿನೇ ವಾಸ್ತವಿಕ ಪ್ರಪಂಚದ ಮೇಲೆ ಕಟ್ಟಿದ ಕಾಲ್ಪನಿಕ ಸ್ವರ್ಗದ ಗತಿ ಇಷ್ಟೆ. ರಾಜಕೀಯ ಒರಟು ವ್ಯಾಪಾರ, ಕಾವ್ಯದ್ದು ನವಿರು ಸಂಸ್ಕಾರ, ರಾಜಕೀಯ ನಾಯಿಯ ಬಾಲ. ಕಾವ್ಯ ಆನೆಯ ಸೊಂಡಿಲು’ ಎನ್ನುವ ಮೂಲಕ ರಾಜಕೀಯ ವಸ್ತುವಿನ ಈ ನಾಟಕದಲ್ಲಿ ಇರುವ ಸಾಹಿತ್ಯಕ ಗುಣವನ್ನು ಪ್ರಶಂಸಿಸಿದ್ದಾರೆ.

About the Author

ಪು.ತಿ.ನ. (ಪು.ತಿ. ನರಸಿಂಹಾಚಾರ್ )
(17 March 1905 - 13 October 1998)

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ.  ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...

READ MORE

Related Books