ವಿಮಾನ ವಿಜ್ಞಾನ

Author : ಜಿ. ಶ್ರೀನಿವಾಸಮೂರ್ತಿ

Pages 100

₹ 75.00




Published by: ನವಕರ್ನಾಟಕ ಪ್ರಕಾಶನ

Synopsys

ಆರೆಸ್ಸೆಸ್‌ನ ಚಿಂತನೆ ದೇಶದಲ್ಲಿ ಗಟ್ಟಿಯಾಗುತ್ತಿರುವಂತೆಯೇ ವಿಜ್ಞಾನ ಪುರಾಣಗಳ ನಡುವೆ ಕಲಬೆರಕೆ ಆರಂಭವಾಗುತ್ತಿದೆ. ಪುರಾಣದ ರೂಪಕಗಳನ್ನೆಲ್ಲ ವಾಸ್ತವಕ್ಕಿಳಿಸಿ, ಅದನ್ನೇ ವಿಜ್ಞಾನ ಎಂದು ಕಲಿಸಿಕೊಡುವ ಹೊಸತೊಂದು ಶಿಕ್ಷಣ ದೇಶಾದ್ಯಂತ ಬೆಳೆಯುತ್ತಿದೆ. ಭಾರತದ ಪ್ರಾಚೀನತೆಯ ವೈಭವವನ್ನು ಸಾರುವ ನೆಪದಲ್ಲಿ ವಿಜ್ಞಾನಕ್ಕೆ ಅಪಮಾನ ಮಾಡುವ ಕೆಲಸಗಳು  ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಇತ್ತೀಚೆಗೆ, ಪುರಾತನ ಕಾಲದಲ್ಲೇ ಭಾರತದಲ್ಲಿ ವಿಮಾನಗಳಿದ್ದವು ಎನ್ನುವುದನ್ನು ಕೆಲವರು ವಾದಿಸುತ್ತಿದ್ದಾರೆ. ಅದಕ್ಕೆ ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ ಕಲ್ಪನೆಯನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿ. ಶ್ರೀನಿವಾಸ ಮೂರ್ತಿ ಅವರು ಬರೆದಿ ರುವ ವಿಮಾನ ವಿಜ್ಞಾನ ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತದೆ ಮಾತ್ರವಲ್ಲ, ವಿಮಾನ ಹಾರಿದ ಕೌತುಕ ಹಂತಗಳನ್ನು ವಿವರಿಸುತ್ತದೆ. ಮುನ್ನುಡಿಯಲ್ಲಿ ಹೇಳುವಂತೆ ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು, ಅತ್ಯಂತ ಸೂಕ್ತ ವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಚೆನ್ನಾಗಿ ಮನನವಾಗುವಂತೆ ಸರಳವಾಗಿ ಈ  ಪುಸ್ತಕದಲ್ಲಿ ತಿಳಿಸಿಕೊಡಲಾಗಿದೆ.

About the Author

ಜಿ. ಶ್ರೀನಿವಾಸಮೂರ್ತಿ

ಜಿ. ಶ್ರೀನಿವಾಸಮೂರ್ತಿ ಹಿರಿಯ ಲೇಖಕರು. ಪ್ರೊ. ರಾಮ್ ಶರಣ್ ಶರ್ಮ (ಆರ್.ಎಸ್.ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯನ್ನು ‘ಪ್ರಾಚೀನ ಭಾರತದಲ್ಲಿ ಶೂದ್ರರು’ ಶೀರ್ಷಿಕೆಯಡಿ ಹಾಗೂ ರಾಜ ಮಹೇಂದ್ರ ವಿಕ್ರಮ ವರ್ಮ ಅವರ ‘ಮತ್ತವಿಲಾಸ ಪ್ರಹಸನ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಮಾನ ವಿಜ್ಞಾನ ವೈಜ್ಞಾನಿಕ ಮಾಹಿತಿಪೂರ್ಣ ಕೃತಿ), ಗೋಪಾಲಕೃಷ್ಣ ನಾಯರಿ (ಜೀವನ ಚಿತ್ರ) ಅವರ ಮತ್ತೊಂದು ಕೃತಿ-ಪಕ್ಷಿಗಳ ಹಾರಾಟ.  ...

READ MORE

Reviews

(ಹೊಸತು, ಫೆಬ್ರವರಿ 2015, ಪುಸ್ತಕದ ಪರಿಚಯ)

ಇದು ವಿಮಾನದ ತಂತ್ರಜ್ಞಾನವನ್ನು ಮಕ್ಕಳಿಗೆ - ಮುಖ್ಯವಾಗಿ ಪ್ರೌಢಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಚಿತ್ರ ಸರಳ ಪುಸ್ತಕ. ಆಗಸದಲ್ಲಿ ಹಾರುವ ಹಕ್ಕಿಗಳನ್ನು ನೋಡಿ ಪುಳಕಿತನಾಗಿ ತನಗೆ ರೆಕ್ಕೆಗಳಿಲ್ಲವಲ್ಲಾ ಎಂದು ಪರಿತಪಿಸಿದರೂ ಮಾನವ ಸುಮ್ಮನೆ ಕೂರಲಿಲ್ಲ. ಭೂಮಿಯ ಗುರುತ್ವಾಕರ್ಷಣೆಯನ್ನು ಎದುರಿಸಿ ಹಗುರವಾಗಿ ಗಾಳಿಯಲ್ಲಿ ತೇಲುವುದು ಹೇಗೆಂದು ಯೋಚಿಸಿ ಪತ್ತೆ ಮಾಡಿದ. ಹಾರಲು ಪ್ರಾಥಮಿಕ ಪ್ರಕೃತಿಸಹಜ ಅಗತ್ಯಗಳೇನೆಂದು ಕಂಡುಹಿಡಿದು ಹಾರಾಟದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ. ಮುಂದೆ ರೈಟ್ ಸಹೋದರರು ಪ್ರಪ್ರಥಮ ಯಶಸ್ವಿ ಹಾರಾಟ ನಡೆಸಿದರು. ನಂತರ ಸಾಕಷ್ಟು ಪರಿಷ್ಕರಣೆಗಳೊಂದಿಗೆ ವಿಮಾನಗಳು ಮಾನವನ ಹಲವು ಅಗತ್ಯಗಳನ್ನು ಪೂರೈಸಿವೆ. ಹಾರಾಟದ ಹಲವು ತತ್ವಗಳನ್ನೊಳಗೊಂಡಂತೆ ವಿವಿಧ ವಿನ್ಯಾಸದ ಮಾದರಿಗಳು ಜಗತ್ತಿನಾದ್ಯಂತ ಇಂದು ಬಳಕೆಯಲ್ಲಿದ್ದು ಬಹೂಪಯೋಗಿಯಾಗಿ ಮಾನವನಿಗೆ ಉಪಕಾರಿಯಾಗಿವೆ. ವೈಮಾನಿಕ ಕ್ಷೇತ್ರ ವಿಸ್ತಾರವಾಗಿದ್ದು ಸುಖಪ್ರಯಾಣ - ಸರಕುಸಾಗಣೆ - ಯುದ್ಧವಿಮಾನಗಳೇ ಮುಂತಾಗಿ ಗೂಢಚರ್ಯೆಯನ್ನೂ ಒಳಗೊಂಡಂತೆ ಮಿಲಿಟರಿ ಕ್ಷೇತ್ರಗಳಲ್ಲೂ ಮಿಂಚಿವೆ. ಅವೆಲ್ಲವುಗಳ ಕಾರ್ಯವೈಖರಿ, ವಿನ್ಯಾಸ ಅದರ ವೈಜ್ಞಾನಿಕ ತಳಹದಿ ಹೇಗೆಂದು ಚಿತ್ರಗಳ ಸಹಿತ ವಿವರಣೆಯೊಂದಿಗೆ ಆಕರ್ಷಕ ಶೈಲಿಯಲ್ಲಿ ಈ ಪುಸ್ತಕ ರಚಿತವಾಗಿದೆ.

Related Books