
ʻವಿಮರ್ಶೆ ಓದುʼ ರವಿ ಎಂ ಅವರ ವಿಮರ್ಶಾ ಕೃತಿಯಾಗಿದೆ. ವಿಮರ್ಶೆಯ ತತ್ವಗಳನ್ನು ಸಮಗ್ರವಾಗಿ ಓದುಗರಿಗೆ ಮನನ ಮಾಡಿಸುವ ಗುಣವೇ ಈ ಕೃತಿಯ ಮಹತ್ವವಾಗಿದೆ. ಪಾಶ್ಚಾತ್ಯ, ಭಾರತೀಯ ಮತ್ತು ಕನ್ನಡ ವಿಮರ್ಶೆಯ ತತ್ವಗಳನ್ನು ವಸ್ತುನಿಷ್ಠವಾಗಿ ಇಲ್ಲಿ ನಿರೂಪಿಸಲಾಗಿದೆ. ‘ಓದು’ ಕೃತಿಯಲ್ಲಿ ಐದು ವಿಭಾಗಗಳಿವೆ. ಮೊದಲನೆಯ ವಿಭಾಗದಲ್ಲಿ ವಿಮರ್ಶೆಯ ಪ್ರಾಥಮಿಕ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳ ಮನಸ್ಸಿಗೆ ಮನಮುಟ್ಟುವಂತೆ ಚರ್ಚಿಸಲಾಗಿದೆ. ವಿಮರ್ಶೆಯ ಸ್ವರೂಪವನ್ನು ವಿವರಿಸುತ್ತಾ ಪಾಶ್ಚಾತ್ಯ ಮೀಮಾಂಸಕರ ಚಿಂತನೆಗಳನ್ನು ವಿವರಿಸಿದ್ದಾರೆ. ಎರಡನೆಯ ಭಾಗವು ಮುಖ್ಯವಾಗಿದ್ದು ಇದರಲ್ಲಿ ಅಭಿಜಾತ ಯುಗದ ವಿಮರ್ಶೆಯ ತತ್ವಗಳನ್ನು ಸಮಗ್ರವಾಗಿ ವಿವೇಚಿಸಲಾಗಿದೆ. ಮೂರನೆಯ ಭಾಗದಲ್ಲಿ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಮುಖ್ಯವಾದ ಘಟ್ಟಗಳನ್ನು ಒದುಗರಿಗೆ ಮನನವಾಗುವ ರೀತಿಯಲ್ಲಿ ನಿರೂಪಿಸಿರುವುದು ಕಂಡುಬರುತ್ತದೆ. ನಾಲ್ಕನೆಯ ಭಾಗದಲ್ಲಿ ಪಾಶ್ಚಾತ್ಯ ವಿಮರ್ಶಕರ ಪರಿಚಯವಿದೆ. ಐದನೇ ಭಾಗದಲ್ಲಿ ಕನ್ನಡ ವಿಮರ್ಶೆಯ ಸಮಗ್ರ ಸಂಗತಿಗಳನ್ನು ವಿಸ್ತಾರವಾಗಿ ತರಲು ಪ್ರಯತ್ನಿಸಿದ್ದಾರೆ. ಕೃತಿಯಲ್ಲಿ ವಾದ ಸಿದ್ಧಾಂತಗಳನ್ನು ಹಲವು ವಿಮರ್ಶಾ ಕೃತಿಗಳ ಸಹಾಯದಿಂದ ಸಂಗ್ರಹಿಸಿ ಒಂದೆಡೆ ನೀಡಿದ್ದಾರೆ. ಇದರಿಂದಾಗಿ ಕನ್ನಡ ಸಾಹಿತ್ಯ ಓದುಗರಿಗೆ ‘ವಿಮರ್ಶಾ ಕೈಪಿಡಿ’ ಒಂದು ದೊರೆತಂತಾಗುತ್ತದೆ.

ಡಾ. ರವಿ ಎಂ. ಸಿದ್ಲಿಪುರ- ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ವಿಷಯವಾಗಿ ಪಿಹೆಚ್.ಡಿ ಪದವೀಧರರು. ವಿವಿಧ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’ ಎಂಬ ವಿಮರ್ಶಾ ಸಂಕಲನ, ’ಪಿ. ಲಂಕೇಶ’ಎಂಬ ಕಿರು ಹೊತ್ತಿಗೆ, ’ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ...
READ MORE