ವಿಮರ್ಶೆಯ ದಾರಿ-1

Author : ಕೆ.ಎಲ್. ಗೋಪಾಲಕೃಷ್ಣಯ್ಯ

Pages 216

₹ 4.00




Year of Publication: 1982
Published by: ಪ್ರಸಾರಂಗ
Address: ಪ್ರಸಾರಂಗ , ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056

Synopsys

ವಿಮರ್ಶೆಯ ದಾರಿ-1- ಕನ್ನಡ ವಿಮರ್ಶೆ ಕಳೆದ ಅರವತ್ತು ವರ್ಷಗಳಿಗೂ ಮೀರಿದ ಅವಧಿಯಲ್ಲಿ ನಡೆದು ಬಂದ ದಾರಿಯ ಹೆಜ್ಜೆಯ ಗುರುತುಗಳನ್ನು ಪರಿಚಯ ಮಾಡಿಕೊಡುವ ಹದಿನಾಲ್ಕು  ವಿಮರ್ಶಾತ್ಮಕ ಲೇಖನಗಳ ಒಂದು ಸಂಗ್ರಹ. ಹೊಸಗನ್ನಡ ವಿಮರ್ಶೆಯ ಒಲವು-ನಿಲುವುಗಳನ್ನು, ದೃಷ್ಟಿ-ಧೋರಣೆಗಳನ್ನು ಈ ಸಂಕಲನ ಐತಿಹಾಸಿಕವಾಗಿ ಗುರುತಿಸಲು ನೆರವಾಗುವುದರ ಜೊತೆಗೆ, ಇದು ಬಹುಮಟ್ಟಿಗೆ  ಕನ್ನಡ ವಿಮರ್ಶಾ ಸಾಹಿತ್ಯದ ಪ್ರಾತಿನಿಧಿಕ ಸಂಕಲನವಾಗಿದೆ. 

About the Author

ಕೆ.ಎಲ್. ಗೋಪಾಲಕೃಷ್ಣಯ್ಯ

ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಮೂಲತಃ (ಜನನ: 18-07-1938) ಕಳಸಪುರದವರು. ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಕಾಲೇಜು ಅಧ್ಯಾಪಕರಾಗಿ ನಿವೃತ್ತರು. ಚಿಂತಕರು. ಹೊಸತು ಮಾಸಪತ್ರಿಕೆಯ ಸಹ ಸಂಪಾದಕರು. ಕೃತಿಗಳು: ತಿರುವುಗಳು (ಕಾದಂಬರಿ), ಸಮಾಜವಾದ ಪರಿಚಯ; ಶತಮಾನದ ಅಂಚಿನಲ್ಲಿ ಶಿಕ್ಷಣ; ಧರ್ಮ ನಿರಪೇಕ್ಷತೆ ಮತ್ತು ಅಲ್ಪಸಂಖ್ಯಾತರು, ಭಾರತೀಯ ಇತಿಹಾಸದ ವೈಲಕ್ಷಣಗಳು (ಅನುವಾದಿತ ಕೃತಿಗಳು), ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ(ಪಿಎಚ್ ಡಿ ಮಹಾಪ್ರಬಂಧ)  ಸಾಹಿತ್ಯ ಸಂವಾದ, ಇತಿಹಾಸದ ರಾಜಕೀಯ (ವಿಮರ್ಶೆ/ಸಂಶೋಧನೆ),  ಪುರಾಣ (ವಿಮರ್ಶೆ)  ಭೌತವಾದೀಯ ಚಿಂತನೆಗಳು, ಯಶವಂತ ಚಿತ್ತಾಲ (ಜೀವನ ಚಿತ್ರಣ), ವಿಮರ್ಶೆಯ ದಾರಿ-1, ಪ್ರೌಢಶಾಲಾ ಕನ್ನಡ ಕೈಪಿಡಿ,ಭಾಷೆಯ ಬೆಳಕು, ...

READ MORE

Related Books