ವಿನೋದ ಸೌಧದ ಸಾಹಿತಿ ಡುಂಡಿರಾಜ್‍

Author : ಜಿ.ಎನ್. ಉಪಾಧ್ಯ

Pages 140

₹ 120.00




Published by: ಅಂಕಿತ ಪುಸ್ತಕ
Address: # 53, ಶ್ಯಾಮಸಿಂಗ್ ಸಂಕೀರ್ಣ, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 0802661 7100

Synopsys

ಡುಂಡಿರಾಜ್‍ ತಮ್ಮ ಹನಿಗವನ ಮತ್ತು ಲಘುಪ್ರಬಂಧಗಳ ಮೂಲಕ ಅತ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಲು ಸಫಲರಾಗಿದ್ದಾರೆ. ತಮ್ಮ ಪ್ರತಿಯೊಂದು ಪುಸ್ತಕದಲ್ಲಿಯೂ ಕೂಡ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಓದುಗರನ್ನು ಕೇವಲ ನಗೆಗಡಲಲ್ಲಿ ತೇಲಿಸುವುದಲ್ಲದೇ ಸಾಮಾಜಿಕ ಜವಾಬ್ದಾರಿಯ ಕುರಿತಾದ ಚಿಂತನೆಗಳನ್ನು ಮೂಡಿಸುವಲಲ್ಲಿ ಸಫಲರಾಗಿದ್ದಾರೆ. ಇಂತಹ ಒಬ್ಬ ಕವಿಯ/ಲೇಖಕನ ಕುರಿತಾಗಿ, ಅವರ ಬರೆವಣಿಗೆಯ ಶೈಲಿಯ ಕುರಿತಾಗಿ ವಿಶ್ಲೇಷಿಸಿ ಬರೆದಂತಹ ಪುಸ್ತಕ ವಿನೋದ ಸಾಹಿತ್ಯದ ಸಾಹಿತಿ ಡುಂಡಿರಾಜ್.

ಕನ್ನಡದ ಓರ್ವ ಹೆಸರಾಂತ ಲೇಖಕರಾದ ಜಿ ಎನ್‍ ಉಪಾಧ್ಯ  ಡುಂಡಿರಾಜರ ಸಾಹಿತ್ಯದ ಕುರಿತಾದ ಸವಿವರ ವಿಶ್ಲೇಷಣೆ ಹಾಗೂ ಅವರ ಬರೆವಣಿಗೆ ಶೈಲಿಯ ಪ್ರಾಮುಖ್ಯತೆಯ ಕುರಿತಾದ ವಸ್ತು ವಿಷಯಗಳನ್ನು ಡುಂಡಿರಾಜ್‍ರವರ ಅಭಿಮಾನಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡುಂಡಿರಾಜರ ಹನಿಗವನಗಳಿಂದ ಪ್ರಭಾವಿತರಾಗಿ ಅದೇ ಮಾದರಿಯಲ್ಲಿ ಕಿರು ಕವಿತೆಗಳನ್ನು ರಚಿಸುತ್ತಾ ಬಂದವರ ಸಂಖ್ಯೆ ಬಹಳ ದೊಡ್ಡದು.

ಕಾವ್ಯದ ಸಿದ್ಧ ಮಾದರಿಯನ್ನು ಬಿಟ್ಟುಕೊಟ್ಟು, ಹೊಸ ಮಾದರಿಯ ಕವಿತೆಗಳನ್ನು ರಚಿಸಿ ಅಪಾರ ಓದುಗ ವರ್ಗವನ್ನು ಖುಷಿಪಡಿಸಿದ ಅಪರೂಪದ ಸಾಹಿತಿ ಡುಂಡಿರಾಜ್. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರು ಮಾಡಿರುವ ವಿವಿಧ ಪ್ರಯೋಗಗಳು ಗಮನಿಸುವಂಥದ್ದಾಗಿವೆ. ಹೀಗಾಗಿ ಪುಸ್ತಕ ಡುಂಡಿರಾಜರ ಕುರಿತಾಗಿ ಅರಿಯಲು ಇರುವ ಕೈಗನ್ನಡಿ.

About the Author

ಜಿ.ಎನ್. ಉಪಾಧ್ಯ
(07 February 1967)

ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್‍ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ  ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...

READ MORE

Related Books