ವಿರಕ್ತ ರಾಷ್ಟ್ರಕ ಡಿವಿಜಿ

Author : ಡಿ. ಆರ್. ವೆಂಕಟರಮಣನ್

Pages 344

₹ 200.00




Year of Publication: 1988
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು - 560001

Synopsys

‘ವಿರಕ್ತ ರಾಷ್ಟ್ರಕ ಡಿವಿಜಿ’ ಹಿರಿಯ ಲೇಖಕ, ಡಿವಿಜಿ ಅವರ ಆಪ್ತ ವಲಯದಲ್ಲಿದ್ದ ಡಿ.ಆರ್. ವೆಂಕಟರಮಣನ್ ಅವರು ರಚಿಸಿರುವ ಕೃತಿ. ಇಲ್ಲಿ ಡಿವಿಜಿ ಅವರ ಬಾಲ್ಯದಿಂದ ಅಂತ್ಯದವರೆಗಿನ ಬದುಕಿನ ವಿಸ್ತಾರತೆ ಅನಾವರಣಗೊಂಡಿದೆ. ಸಾಹಿತ್ಯ ರಚನೆ ಸೇರಿದಂತೆ ಸಾರ್ವಜನಿಕ ಸಂಘ-ಸಂಸ್ಥೆಗಳಲ್ಲಿ ಅವರು ಮಾಡಿದ ಸಾಧನೆಯ ಕುರಿತು ಲೇಖನಗಳಿವೆ. ಜೊತೆಗೆ ಅಂದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಡಿವಿಜಿ ಅವರ ಭಾಷಣಗಳು, ಲೇಖನಗಳ ಮೇಲು ಬೆಳಕು ಚೆಲ್ಲಲಾಗಿದೆ. ಅವರ ಪ್ರಾರ್ಥನಾಗೀತ ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಎಂಬ ಹಾಡಿಗೆ ಅನುಗುಣವಾಗಿ ತಾನು ಎಲೆಯ ಮರೆಯಲ್ಲಿದ್ದು ಬದುಕಿಬಾಳಿ, ಇತರರಿಗೂ ಮಾರ್ಗದರ್ಶನ, ಅಮೂಲ್ಯ ಸಂದೇಶ ನೀಡಿದ್ದಾರೆ. ಇದು ಡಿವಿಜಿಯವರನ್ನು ನೆನೆಪಿಸುವ ಕೃತಿ ಮಾತ್ರವಲ್ಲದೆ ಶತಮಾನದ ಹಿಂದಿನ ಸಾಮಾಜಿಕ ಚಿತ್ರಣವನ್ನೂ ಒಳಗೊಂಡಿದೆ.

About the Author

ಡಿ. ಆರ್. ವೆಂಕಟರಮಣನ್

ಡಿ. ಆರ್. ವೆಂಕಟರಮಣನ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಆಚಾರ್ಯರಾದ ಡಿ.ವಿ.ಜಿ ಅವರಿಗೆ ಆಪ್ತರಾಗಿದ್ದವರು. ಡಿವಿಜಿ ಅವರ ಸಾಹಿತ್ಯ ಸ್ವಾದವನ್ನು ಲೋಕಕ್ಕೆ ನೀಡಿದ ಅವರ 'ಕಗ್ಗಕ್ಕೊಂದು ಕೈಪಿಡಿ' ಪ್ರಖ್ಯಾತ ಕೃತಿ.  1931ರ ಫೆಬ್ರವರಿ 21ರಂದು ಕೊಳ್ಳೇಗಾಲದ ಬಳಿ ಇರುವ ಹನೂರು ಗ್ರಾಮದಲ್ಲಿ ಜನಿಸಿದರು. ತಂದೆ ರಾಮಚಂದ್ರ ಅಯ್ಯರ್ ಮೂಲತಃ ದಾರಾಪುರಂ ಎಂಬ ಸ್ಥಳಕ್ಕೆ ಸೇರಿದವರಾಗಿದ್ದು ಸರ್ಕಾರಿ ಕೆಲಸದ ನಿಮಿತ್ತ ಕರ್ನಾಟಕದಲ್ಲಿ ನೆಲೆಸಿದರು. ತಾಯಿ ಸುಬ್ಬಲಕ್ಷ್ಮಿ. ಇವರಿಗೆ ಇಬ್ಬರು ತಮ್ಮಂದಿರು.  ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪಡೆದ ಅವರು ಬಿ.ಎ. ಪದವಿಯನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪಡೆದರು. ನಂತರ ಬನಾರಸ್ ...

READ MORE

Reviews

ಪುಸ್ತಕ ಪರಿಚಯ - ಕೃಪೆ: ಹೊಸತು 

ಬಾಲ್ಯದಿಂದ ಅಂತ್ಯದವರೆಗೆ ಸವಿಸ್ತಾರವಾಗಿ ಡಿವಿಜಿಯವರ ಬದುಕು ಇಲ್ಲಿ ಅನಾವರಣಗೊಂಡಿದೆ. ಸಾಹಿತ್ಯರಚನೆಯಲ್ಲಿ, ಸಾರ್ವಜನಿಕ ಸಂಘ-ಸಂಸ್ಥೆಗಳಲ್ಲಿ ಅವರು ಮಾಡಿದ ಸಾಧನೆ ಅಪಾರ. ಅವರ ಭಾಷಣಗಳು ಲೇಖನಗಳು ಅ೦ದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ಆಕಾಶವಾಣಿಯಲ್ಲಿಯೂ ಬಿತ್ತರಗೊಳ್ಳುತ್ತಿದ್ದವು. ಅವರ ಪ್ರಾರ್ಥನಾಗೀತ 'ವನಸುಮದೊಲೆನ್ನ ಜೀವನವು ವಿಕಸಿಸುವಂತೆ' ಎಂಬ ಹಾಡಿಗೆ ಅನುಗುಣವಾಗಿ ತಾನು ಎಲೆಯ ಮರೆಯಲ್ಲಿದ್ದು ಬದುಕಿಬಾಳಿ, ಇತರರಿಗೂ ಮಾರ್ಗದರ್ಶನ, ಅಮೂಲ್ಯ ಸಂದೇಶ ನೀಡಿದ್ದಾರೆ. ಇದು ಅವರನ್ನು ಕುರಿತ ಕೃತಿ ಮಾತ್ರವಲ್ಲದೆ ಶತಮಾನದ ಹಿಂದಿನ ಸಾಮಾಜಿಕ ಚಿತ್ರಣವೂ ಹೌದು.

Related Books