ವಿಷ್ಣುವಿನ 7 ರಹಸ್ಯಗಳು

Author : ಜಿ.ಬಿ. ಹರೀಶ

Pages 219

₹ 225.00




Year of Publication: 2015
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಲೇಖಕ ಜಿ.ಬಿ. ಹರೀಶ ಅವರ ಅನುವಾದಿತ ಕೃತಿ-ವಿಷ್ಣುವಿನ 7 ರಹಸ್ಯಗಳು. ದೇವರ ಹಲವು ಅವತಾರಗಳ ಪೈಕಿ ವಿಷ್ಣು ಅವತಾರವೂ ಒಂದು. ಪುರಾಣದ ಮಹತ್ವದ ಪಾತ್ರವಾಗಿರುವ ವಿಷ್ಣುವಿನ 7 ರಹಸ್ಯಗಳನ್ನು ಹಿರಿಯ ಲೇಖಕ ದೇವದತ್ತ ಪಟ್ನಾಯಕ್ ಅವರು ಮೂಲ ಇಂಗ್ಲಿಷಿನಲ್ಲಿ ಬರೆದಿದ್ದನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಷ್ಣುವಿನ ಪಾತ್ರ, ಪುರಾಣಗಳಲ್ಲಿ ಈ ಪಾತ್ರದ ಮಹತ್ವ ಇತ್ಯಾದಿ ವಿವರಣೆಯನ್ನು ಈ ಕೃತಿ ಒಳಗೊಂಡಿದೆ.

About the Author

ಜಿ.ಬಿ. ಹರೀಶ

ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...

READ MORE

Related Books