ವಿಸ್ಮಯಗಳ ನಾಡಿನಲ್ಲಿ

Author : ಟಿ. ಆರ್. ಅನಂತರಾಮು

Pages 112

₹ 70.00
Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560 001
Phone: 08022161913

Synopsys

‘ವಿಸ್ಮಯಗಳ ನಾಡಿನಲ್ಲಿ’ ವಿ.ಜಿ. ಕುಲಕರ್ಣಿ, ಆರ್. ವಿ.ಜಿ. ಗಂಭೀರ, ಆರ್. ಎಂ. .ಭಾಗವತ್ ಅವರ ಮೂಲ ಕೃತಿಯಲ್ಲಿ ಲೇಖಕ ಟಿ.ಆರ್. ಅನಂತರಾಮು ಅವರು ಕನ್ನಡೀಕರಿಸಿದ್ದಾರೆ. ಗಡಿಬಿಡಿಯ ಇಂದಿನ ಜೀವನದಲ್ಲಿ ವಿಜ್ಞಾನವು ವಾಸ್ತವದಲ್ಲಿ ಅನ್ವೇಷಣೆಯ ವಿನೋದಭರಿತವಾದ, ಆನಂದದಾಯಕವಾದ ಪ್ರವಾಸವಾಗಿದೆ ಎಂಬ ನಿಜಸಂಗತಿ ಮರೆಯಾಗುತ್ತದೆ.

ವಿಜ್ಞಾನ ಕಲಿಕೆಯ ಹಳೆಯ ನೀರಸ ವಿಧಾನಕ್ಕೆ ಬದಲು ಕಿರಿಯ ಓದುಗರನ್ನು ವಿಜ್ಞಾನದ ವಿಸ್ಮಯಗಳ ನಾಡಿಗೆ ಕರೆದೊಯ್ಯಲು ಮತ್ತು ಕುತೂಹಲ ಹಾಗೂ ತೀವ್ರವಾದ ಆಸಕ್ತಿ ಹೇಗೆ ಸಂಪೂರ್ಣ ಹೊಸದಾದ ಜಗತ್ತೊಂದರ ದಿಡ್ಡಿ ಬಾಗಿಲನ್ನು ತೆರೆಯಬಲ್ಲವು ಎಂಬುದನ್ನು ತೋರಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ.

ಕಿರಿಯರು ಮಾಡಬಹುದಾದ ಎಲ್ಲ ಪ್ರಯೋಗಗಳನ್ನೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗುವ ಚಿತ್ರಗಳಿವೆ. ಇಲ್ಲಿ ಕೊಟ್ಟಿರುವ ಪ್ರಯೋಗಗಳು ಭೌತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ ಕ್ಷೇತ್ರಗಳ ಕೃತಕ ಅಡ್ಡ ಗೋಡೆಗಳನ್ನು ಭೇದಿಸಿ ನಿಲ್ಲುತ್ತವೆ. ನಿತ್ಯ ನಾವು ಎದುರಿಸುವ ಸಮಸ್ಯೆಗಳತ್ತಲೇ ಇವು ಮುಖಮಾಡಿವೆ. ಎಂದೇ ದಿನನಿತ್ಯ ನಾವು ನಮ್ಮ ಸುತ್ತಮುತ್ತ ವೀಕ್ಷಿಸುವ ಅಂಶಗಳ ಹಿನ್ನೆಲೆಯಲ್ಲಿ ಮೂಡುವ ಕುತೂಹಲವೇ ಇಲ್ಲಿಯ ಪ್ರಯೋಗಗಳ ಕೇಂದ್ರ ವಸ್ತು. ಇದರ ಉದ್ದೇಶ ಕೇವಲ ಮಾಹಿತಿ ಕೊಡುವುದಷ್ಟೇ ಅಲ್ಲ, ಮಕ್ಕಳ ಮನಸ್ಸು ತಾನೇ ತಾನಾಗಿ ಅನ್ವೇಷಕವಾಗುವಂತೆ ಮಾಡುವುದು.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books