ವ್ಯಾಘ್ರನ ಕರೆ

Author : ನಡಹಳ್ಳಿ ವಸಂತ್‌

Pages 104

₹ 90.00




Year of Publication: 2017
Published by: ಸಿರಿಗನ್ನಡ ಪುಸ್ತಕ ಮನೆ ಶಿವಮೊಗ್ಗ
Phone: 9341068242

Synopsys

ಪಾಶ್ಚಿಮಾತ್ಯ ಬೇಟೆಗಾರರನ್ನು ಆಫ್ರಿಕಾ ಮತ್ತು ಭಾರತದ ಕಾಡುಗಳು ಯಾವಾಗಲೂ ಆಕರ್ಷಿಸಿವೆ. ಬ್ರಿಟಿಷರ ಆಡಳಿತಕ್ಕೊಳಗಾದಾಗಿನಿಂದ ಭಾರತದ ವನ್ಯಮೃಗಗಳು ಬೇಟೆಗಾರರಿಂದ ನಿರಂತರ ಅಪಾಯಕ್ಕೆ ಸಿಕ್ಕಿಕೊಂಡವು. ಅಂತವರಲ್ಲಿ ಕೆಲವರು ತಮ್ಮ ಅನುಭವಗಳನ್ನು ದಾಖಲಿಸಿದರು. ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಕನ್ನಡದ ಓದುಗರಿಗೆ ಪರಿಚಿತರು. ಇಲ್ಲಿ ಆರ್ಥರ್ ನ್ಯೂಜೆಂಟ್ ವಾಲ್ಡೆಮೆರ್ ಪೋವೆಲ್ ಎನ್ನುವ ಮತ್ತೊಬ್ಬನನ್ನು ಪರಿಚಯಿಸಲಾಗಿದೆ. ಪೋವೆಲ್ ಬಗೆಗೆ ಹೆಚ್ಚಿನ ವೈಯುಕ್ತಿಕ ವಿವರಗಳು ಸಿಗುವುದಿಲ್ಲ. ಆತ ಬರೆದಿದ್ದು “ವ್ಯಾಘ್ರನ ಕರೆ” (ಕಾಲ್ ಆಫ್ ದಿ ಟೈಗರ್) ಎನ್ನುವ ಒಂದೇ ಪುಸ್ತಕವಿರಬೇಕು. ಮಿಲಿಟರಿಯಲ್ಲಿ ಅಧಿಕಾರಿಯಾಗಿದ್ದ ಪೋವೆಲ್ 20ನೇ ಶತಮಾನದ ಪ್ರಾರಂಭದಲ್ಲಿ ಭಾರತದ ಉದ್ದಗಲಕ್ಕೂ ತಿರುಗಾಡಿ ಸಾಕಷ್ಟು ಹುಲಿ ಚಿರತೆಗಳನ್ನು ಬೇಟೆಯಾಡಿದ್ದ. ಕಾಡು ಮತ್ತು ಕಾಡುಪ್ರಾಣಿಗಳ ಬಗೆಗೆ ಅಗಾಧವಾದ ಜ್ಞಾನವನ್ನು ಹೊಂದಿದ್ದ ಪೋವೆಲ್ ಮೋಜಿನ ಬೇಟೆಯಾಡುತ್ತಿದ್ದುದೇ ಹೆಚ್ಚು ಎನ್ನಿಸುತ್ತದೆ. ಹಾಗಿದ್ದರೂ ವನ್ಯಮೃಗಗಳ ಮತ್ತು ಆಗಿನ ಕಾಲದ ಜನಜೀವನದ ಬಗೆಗೆ ತಿಳಿಯುವ ದೃಷ್ಟಿಯಿಂದ ಈತನ ಪುಸ್ತಕ ಉಪಯುಕ್ತವಾಗಿದೆ. ಇಂತಹ ಬರಹಗಳನ್ನು ಓದಿದರೆ ನಾವು ಕಳೆದುಕೊಂಡ ವನ್ಯಸಂಪತ್ತು ಎಷ್ಟು ಅಗಾಧವಾದದ್ದು ಎನ್ನುವುದರ ಅರಿವಾಗುತ್ತದೆ.

About the Author

ನಡಹಳ್ಳಿ ವಸಂತ್‌

ನಡಹಳ್ಳಿ ವಸಂತ್‌ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್‌ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್‌ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್‌ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...

READ MORE

Related Books