ವ್ಯಂಗ್ಯಚಿತ್ರ ರಚಿಸುವುದು ಹೇಗೆ?

Author : ಜಿ.ವಿ. ಗಣೇಶಯ್ಯ

Pages 112

₹ 125.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 08022161900

Synopsys

ಲೇಖಕ ಹಾಗೂ ವ್ಯಂಗ್ಯಚಿತ್ರ ಕಲಾವಿದ ಜಿ.ವಿ. ಗಣೇಶಯ್ಯ ಅವರ ಕೃತಿ-ವ್ಯಂಗ್ಯಚಿತ್ರ ರಚಿಸುವುದು ಹೇಗೆ?. ಮಕ್ಕಳು ಗೋಡೆಯ ಮೇಲೆ ಅಡ್ಡಾದಿಡ್ಡಿಯಾಗಿ ರೇಖೆಗಳನ್ನು ಬರೆಯುತ್ತಾರೆ. ಗೋಡೆ ಹಾಳು ಮಾಡುತ್ತಾನೆ ಎಂದು ಪಾಲಕರು ಚಿಂತಿಸುತ್ತಾರೆ. ಆದರೆ, ಮಗುವಿನ ಪ್ರತಿಭೆಗೆ ಒಂದು ಮಾರ್ಗ ಕಂಡುಕೊಳ್ಳುವ ಸಮಯವದು. ಇಂತಹ ಗೆರೆಗಳನ್ನು ನೋಟ್ ಬುಕ್ ನಲ್ಲಿ ಬರೆಯಲು ಪ್ರೇರೇಪಿಸಬೇಕು. ಅವರ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ. ಬರೆಯುವ ರೇಖೆಗಳನ್ನು ಹೇಗೆ ಬರೆಯಬೇಕು ಎಂಬ ಮಾರ್ಗದರ್ಶನ ಸಿಕ್ಕರೆ ಮಗುವಿನಲ್ಲಿ ಪ್ರತಿಭೆ ಮತ್ತಷ್ಟು ಅರಳುತ್ತದೆ. ಈ ಹಿನ್ನೆಲೆಯಲ್ಲಿ, ವ್ಯಂಗ್ಯಚಿತ್ರಗಳನ್ನು ಹೇಗೆ ಬರೆಯಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಲೇಖಕರು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ವ್ಯಂಗ್ಯಚಿತ್ರ ಬರೆಯುವ ಆಸಕ್ತ ಮಕ್ಕಳಿಗೂ, ಪಾಲಕರಿಗೂ ಈ ಕೃತಿ ಪ್ರಯೋಜಕಾರಿ.

About the Author

ಜಿ.ವಿ. ಗಣೇಶಯ್ಯ

ಲೇಖಕ, ವ್ಯಂಗ್ಯಚಿತ್ರಕಾರ  ಜಿ.ವಿ. ಗಣೇಶಯ್ಯ ಸದ್ಯ ಮೈಸೂರು ನಿವಾಸಿಗಳು. ಆದರೆ, ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮೀಪದ ಅಗಳಗಂಡಿ ಗ್ರಾಮದವರು. (ಜನನ: 1947ರಲ್ಲಿ)  ಹುಟ್ಟೂರಿನಲ್ಲಿ ಹತ್ತನೇ ತರಗತಿ ಮುಗಿಸಿದ ನಂತರ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರಕಲಾ ವ್ಯಾಸಂಗ ಹಾಗೂ ಸರ್ಕಾರಿ ಡಿಪ್ಲೊಮಾ ಪಡೆದರು. ಫೋಟೋಗ್ರಫಿ, ವ್ಯಂಗ್ಯ ಚಿತ್ರ ಕಲೆ,ಕರ್ನಾಟಕ ಸಂಗೀತ ಕಲಿತರು. ಮೈಸೂರಿನ ‘ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿ, 2007 ರಲ್ಲಿ ನಿವೃತ್ತರಾದರು. ವೈಚಾರಿಕ, ವೈಜ್ಞಾನಿಕ, ಆಧ್ಯಾತ್ಮ, ಯೋಗ,ಸಂಗೀತ, ಭಾಷೆ,  ಲಿಪಿ,ಚಿತ್ರಕಲೆ,ವ್ಯಕ್ತಿ ಚಿತ್ರ,ಪ್ರವಾಸ,ಚಾರಣ,ಯಕ್ಷಗಾನ- ಇತ್ಯಾದಿ  ವಿಚಾರಗಳಿಗೆ ಸಂಬಂಧಿಸಿ 300ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದಾರೆ. ಇವರು ಉತ್ತಮ ಛಾಯಾಗ್ರಾಹಕರೂ ಹೌದು.  ಕೃತಿಗಳು:  ‘ಶಿಲ್ಪಿ ಸಿಂಗಣ್ಣಾಚಾರ್ಯ’, ...

READ MORE

Related Books