ವ್ಯಾಸರಾಯ ಬಲ್ಲಾಳ

Author : ಡಿ. ವಿಜಯಲಕ್ಷ್ಮಿ

Pages 132

₹ 75.00




Year of Publication: 2006
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ವ್ಯಾಸರಾಯ ಬಲ್ಲಾಳರು ಪ್ರಮುಖವಾಗಿ ತಮ್ಮ ಕಥೆ, ಕಾದಂಬರಿ, ಲೇಖನಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದವರು. ತಮ್ಮ ಕೌಟುಂಬಿಕ ಜೀವನದ ಹಿನ್ನೆಲೆಯನ್ನು ಒಳಗೊಂಡಂತೆ ಅಥವಾ ಸ್ವಾತಂತ್ರ್ಯ ಸಂಗ್ರಾಮದ ಧ್ಯೇಯಾದರ್ಶಗಳ ತಾಕಲಾಟವನ್ನು ಅಥವಾ ಸಾಮಾಜಿಕ ವಿಚಾರಧಾರೆಯನ್ನು ಅಥವಾ ಕಾರ್ಮಿಕರ ಬದುಕು-ಬವಣೆಗಳನ್ನು ಕೇಂದ್ರವಾಗಿಸಿಕೊಂಡು ಅವರು ಕೃತಿಗಳನ್ನು ರಚಿಸಿದ್ದಾರೆ. ಬಹುತೇಕ ಕೃತಿಗಳಲ್ಲಿ ವಸ್ತು, ಚಿಂತನೆಗಳು ಸಮರಸವಾಗಿ ಬೆರೆತು ಸಾಗಿವೆ. ವ್ಯಾಸರಾಯರು ತಮ್ಮ ’ಬಂಡಾಯ’ ಕಾದಂಬರಿಗಾಗಿ 1986ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ್ದಾರೆ.

ವ್ಯಾಸರಾಯ ಬಲ್ಲಾಳರ ಕೃತಿಗಳ ಮೇಲೆ ಸಂಶೋಧನೆ ನಡೆಸಿರುವ ಡಿ. ವಿಜಯಲಕ್ಷ್ಮಿಅವರು ನವಕರ್ನಾಟಕ ಪ್ರಕಾಶನಕ್ಕಾಗಿ ಬಲ್ಲಾಳರನ್ನು ಪರಿಚಯಿಸಿದ್ದಾರೆ. 

Related Books