ವ್ಯಾಸರಾಯ ಬಲ್ಲಾಳರ ಸಮಗ್ರ ಕಥೆಗಳು

Author : ವ್ಯಾಸರಾಯ ಬಲ್ಲಾಳ

Pages 776

₹ 395.00




Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌, ಬೆಂಗಳೂರು

Synopsys

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತಿ ವಿಧಾನದಲ್ಲಿ ಕನ್ನಡ ಕಥಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ.   ಪ್ರಗತಿಶೀಲ ಚಳವಳಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ.  ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ’ಅನನ್ಯ’ವೆಂಬಂತೆ ಬರೆಯುತ್ತ ಬಂದಿದ್ದಾರೆ. ಕನ್ನಡ ವಿಮರ್ಶೆ ಈಗ ಬಲ್ಲಾಳರ ಕಥಾಸಾಹಿತ್ಯವನ್ನು ಸಮಗ್ರವಾಗಿ ಪರಿಶೀಲಿಸಬಹುದು. ಪ್ರಮುಖಧಾರೆಗಳಿಗಿಂತ ಭಿನ್ನವಾಗಿ ಬರೆದ ಬಲ್ಲಾಳರ ಬರವಣಿಗೆ ಕಥಾಸಾಹಿತ್ಯದ ವಿಭಿನ್ನ ಸಾಧ್ಯತೆಗಳನ್ನು ನಮಗೆ ಪರಿಚಯ ಮಾಡಿಕೊಡುತ್ತದೆ. ಕನ್ನಡ ಕಥಾ ಪರಂಪರೆಗೆ ವಿಶಿಷ್ಟಕೊಡುಗೆಯಾಗುವ ಶಕ್ತಿ ಪಡೆದಿದೆ. ದೈನಿಕಗಳ ಮೂಲಕವೇ ದಟ್ಟ ಅನುಭವ ಕಟ್ಟಿಕೊಡುವ ಇವರ ಕಥನಕ್ರಮ-ಕನ್ನಡ ಪರಂಪರೆಯಲ್ಲಿ ವಿಶಿಷ್ಟವಾದುದು. ಪ್ರಧಾನ ಧಾರೆಯ ಬರವಣಿಗೆಯಿಂದ ನಾವು ಪಡೆಯಬೇಕಾಗಿದ್ದನ್ನು ಗುರ್ತಿಸಿಕೊಂಡದ್ದಾಗಿದೆ. ಈಗ ಬಲ್ಲಾಳರಂತಹ ಭಿನ್ನಧಾರೆಯ ಲೇಖಕರ ಸಾಹಿತ್ಯದ ಅಧ್ಯಯನ ಅನೇಕ ಹೊಸ ಸಾಧ್ಯತೆಗಳನ್ನು ಕಾಣಿಸುತ್ತದೆ.

About the Author

ವ್ಯಾಸರಾಯ ಬಲ್ಲಾಳ
(01 December 1923 - 30 January 2008)

ಆರು ದಶಕಗಳ ಕಾಲ ಸಣ್ಣಕತೆಯ ಪ್ರಕಾರದಲ್ಲಿ ನಿರಂತರವಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡು ಬಂದಿರುವ ಬಲ್ಲಾಳರು ವಸ್ತುವೈವಿಧ್ಯದಲ್ಲಿ, ಅಭಿವ್ಯಕ್ತ ವಿಧಾನದಲ್ಲಿ ಕನ್ನಡ ಕತಾ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಪ್ರಗತಿಶೀಲ ಚಳುವಳಿಯಿರಬಹುದು, ನವೋದಯ ಸಂಪ್ರದಾಯದ ರೀತಿಯಿರಬಹುದು, ನವ್ಯ ಪ್ರಜ್ಞೆಯ ಪ್ರಭಾವವಿರಬಹುದು- ಈ ಎಲ್ಲವನ್ನೂ ತಮ್ಮ ಸೃಜನಶೀಲ ಪಯಣದಲ್ಲಿ ಬಲ್ಲಾಳರು ಮುಖಾಮುಖಿಯಾಗಿದ್ದಾರೆ. ಆದರೆ ಯಾವ ಪಂಥದ ಜೊತೆಗೂ ತಮ್ಮನ್ನು ಅವರು ಸಮೀಕರಿಸಿಕೊಳ್ಳದೆ ಅನನ್ಯವೆಂಬಂತೆ ಬರೆಯುತ್ತಾ ಬಂದಿದ್ದಾರೆ. ಅವರು 1923 ಡಿಸೆಂಬರ್‌ 01ರಂದು ಉಡುಪಿಯಲ್ಲಿ ಜನಿಸಿದರು. ತಂದೆ ರಾಮದಾಸ, ತಾಯಿ ಕಲ್ಯಾಣಿ. ಮುಂಬಯಿ ಮಹಾನಗರದಲ್ಲಿ ಉದ್ಯೋಗವನ್ನರಿಸದ ಅವರು ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ...

READ MORE

Related Books