ಯಾಕೆ ಹೀಗಾಡ್ತಾರೋ?

Author : ಆರ್. ಶ್ರೀನಾಗೇಶ್

Pages 111

₹ 90.00




Year of Publication: 2015
Published by: ಸಾವಣ್ಣ ಎಂಟರ್ ಪ್ರೈಸೆಸ್
Address: ನಂ57,1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ,.ಬೆಂಗಳೂರು

Synopsys

ಯಾಕೆ ಹೀಗಾಡ್ತಾರೋ?-ಈ ಕೃತಿಯನ್ನು ಲೇಖಕ ಆರ್. ಶ್ರೀನಾಗೇಶ್ ಅವರು ರಚಿಸಿದ್ದು, ಮನಬಂದಂತೆ ವರ್ತಿಸುವುದು ಮಾತನಾಡುವುದು ಜನರ ಮನೋ ದೌರ್ಬಲ್ಯ.. ನಾವು ನಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬಾರದು. ಅದನ್ನು ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ ಎಂಬ ಎಚ್ಚರಿಕೆಯ ಸಂದೇಶವು ಈ ಕೃತಿ ನೀಡುತ್ತದೆ. ಈ ಕೃತಿಯು ಪ್ರೇರಣಾತ್ಮಕ ಅಂಶಗಳನ್ನು ಹೊಂದಿದೆ.

About the Author

ಆರ್. ಶ್ರೀನಾಗೇಶ್

ವಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಆರ್‌ ಶ್ರೀನಾಗೇಶ್‌ ಅವರಿಗೆ ಬರವಣಿಗೆ ಹವ್ಯಾಸ. ೧೯೬೯ರಿಂದ ಅವರ ಬರವಣಿಗೆಯ ಸಾಹಸ ಮುಂದುವರಿದಿದೆ. ವಿದ್ಯಾರ್ಥಿಗಳ ಗಣಿತ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಅವರು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು.  ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರರಾದ ನಾಗೇಶ್‌ ವಿಮೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮ ಮತ್ತು ಆಪ್ತ ಸಲಹಾ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1995 ರಿಂದ ನಾಡಿನ ಹಲವೆಡೆ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿರ್ವಹಣಾ ...

READ MORE

Related Books