ಯಕ್ಷಕವಿ ಕೆಂಪಣ್ಣಗೌಡ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

₹ 100.00




Year of Publication: 2022
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಧ್ಯಯನ ಕೃತಿ ʻಯಕ್ಷಕವಿ ಕೆಂಪಣ್ಣಗೌಡ- ಸಮಗ್ರ ಸಾಹಿತ್ಯ ಶೋಧʼ. ಸಾಹಿತ್ಯ ಚರಿತ್ರೆಯಲ್ಲಿ ಸೇರದೆ ಉಳಿದುಹೋದ ಹಲವಾರು ಕವಿಗಳು, ಕೃತಿಗಳು, ಸಾಹಿತಿಗಳು ನಮ್ಮಲ್ಲಿದ್ದಾರೆ. ಇಂದಿಗೂ ಜನಪದ ಮತ್ತು ಮೌಖಿಕ ಪರಂಪರೆಯ ಅನೇಕ ಕೃತಿಗಳು ಮರೆವಿನಲ್ಲಿಯೇ ಇವೆ. ಕೆಂಪಣ್ಣಗೌಡ ಅಂತಹ ನೂರಾರು ಆಲಕ್ಷಿತ ಕವಿಗಳಲ್ಲಿ ಒಬ್ಬರಾಗಿ ಕಾಣಿಸುತ್ತಾರೆ. ಹದಿನೈದನೆಯ ಶತಮಾನದ ಕೊನೆಯಲ್ಲಿ ಜೀವಿಸಿದ್ದ ಕೆಂಪಣ್ಣಗೌಡನನ್ನು ಕನ್ನಡದ ಮೊದಲ ಯಕ್ಷಗಾನ ಕವಿ ಎಂದು ಕರೆಯಲಾಗುತ್ತಿತ್ತು. ಇವರು ಕರಿರಾಯಚರಿತ್ರೆ, ಯಕ್ಷಗಾನ ಕರೀಬಂಟನ ಕತೆ, ನಳಚರಿತ್ರೆ ಹಾಗೂ ಶನಿಮಾಹಾತ್ಮೆ ಕೃತಿಗಳನ್ನು ಆಗಿನ ಕಾಲದಲ್ಲೇ ರಚಿಸಿದ್ದರು. ಈ ಕುರಿತಾದ ಎಲ್ಲಾ ವಿಚಾರಗಳನ್ನು ಸಾಕ್ಷಾಧಾರಗಳ ಮೂಲಕ ಇವರನ್ನು ನರಹಳ್ಳಿಯವರು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿಸಿದ್ದಾರೆ. ಕೆಂಪಣ್ಣಗೌಡರ ಕೃತಿಗಳ ಕುರಿತು ಹಾಗೂ ಇವುಗಳ ಅನನ್ಯತೆಯನ್ನು ಇಲ್ಲಿ ವಿವರವಾಗಿ ವಿವರಿಸಲಾಗಿದೆ. ಅಲ್ಲದೆ ಈ ಕೃತಿಗಳು ಕಾಲಾಂತರದಲ್ಲಿ ಪಡೆದುಕೊಂಡ ಬದಲಾವಣೆಗಳು, ಬೆಳೆದ ಕಥಾರೂಪಾಂತರಗಳನ್ನು ಕೆಂಪಣ್ಣಗೌಡನ ಕೃತಿಗಳ ಜೊತೆ ತೌಲನಿಕವಾಗಿ ವಿಶ್ಲೇಷಿಸಿದ್ದಾರೆ.

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Related Books