ಯಕ್ಷಗಾನ ರಾಮಾಯಣ ಪ್ರಸಂಗಗಳು

Author : ಆನಂದರಾಮ್ ಉಪಾಧ್ಯ

Pages 104

₹ 100.00




Year of Publication: 2015
Published by: ಬರಹ ಪಬ್ಲಿಷಿಂಗ್ ಹೌಸ್
Address: #119 ಎ, 3ನೇ ತಿರುವು, 8ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು -560104
Phone: 080-2340 9515

Synopsys

ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿದ್ದ ಆನಂದರಾಮ್ ಉಪಾಧ್ಯಯರು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಪಿಎಚ್ಡಿ ಪಡೆದಿದ್ದಾರೆ. ಯಕ್ಷಗಾನ ರಾಮಾಯಣ ಪ್ರಸಂಗಗಳು 68ಕ್ಕೂ ಅಧಿಕವಿದ್ದರೂ ಕರಾವಳಿಯಲ್ಲಿ ಪ್ರಚಲಿತವಿರುವ ಪ್ರಸಂಗಗಳನ್ನು ಅಧ್ಯಯನಕ್ಕೆ ಸೀಮಿತಗೊಳಿಸಲಾಗಿದೆ. ಅಧ್ಯಯನವನ್ನು ಒಂದು ನಿರ್ದಿಷ್ಟವಾದ ಸಾಂಸ್ಕೃತಿಕ,  ಪ್ರಾದೇಶಿಕ ಭಾಷಿಕ ನೆಲೆಯಲ್ಲಿ ನಡೆಸಬೇಕೆಂಬುದು ಲೇಖಕರ ಉದ್ದೇಶ. ಆ ನೆಲೆಗಟ್ಟಿನಲ್ಲಿ ಸಂಶೋಧನೆ ಕೈಗೊಂಡ ಅವರು ಡಾ. ಕೆ. ಎಂ. ಕೃಷ್ಣರಾವ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿ ಪಿಎಚ್ಡಿ ಪದವಿಗಳಿಸಿದ್ದಾರೆ. ಅವರ ಪ್ರಬಂಧವನ್ನೇ ಪುಸ್ತಕರೂಪಕ್ಕೆ ಅವಳವಡಿಸಲಾಗಿದೆ

About the Author

ಆನಂದರಾಮ್ ಉಪಾಧ್ಯ

ಡಾ. ಸಿ. ಆನಂದರಾಮ ಉಪಾಧ್ಯ ಅವರು ಕರ್ಣಾಟಕ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಮುಖ್ಯಸ್ಥರು ಹಾಗೂ ಸಹಾಯಕ ಮಹಾಪ್ರಬಂಧಕರು ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಬ್ಯಾಂಕ್ ಉದ್ಯೋಗಕ್ಕೂ ಮುನ್ನ ಮಳವಳ್ಳಿಯ ಶಾಂತಿ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು ಹಾಗೂ ಶೇಷಾದ್ರಿಪುರಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ಇವರ ಪ್ರೌಢ ಪ್ರಬಂಧ “ಯಕ್ಷಗಾನ ಮಹಾಭಾರತ ಪ್ರಸಂಗಗಳು” ಎಂಬ ಈ ಕೃತಿಗೆ, ಉಸ್ಮಾನಿಯ ವಿಶ್ವವಿದ್ಯಾಲಯದ ಪಿ.ಹೆಚ್.ಡಿ. ಪದವಿ ಲಭಿಸಿದೆ. 1990ರಲ್ಲಿ ಈ ಕೃತಿ ಪ್ರಕಟಗೊಂಡಿದೆ. ಇದಲ್ಲದೆ, “ಯಕ್ಷ ದರ್ಶನ” ಹಾಗೂ “ಯಕ್ಷಗಾನ ರಾಮಾಯಣ ಪ್ರಸಂಗಗಳು” ಇವರ ಪ್ರಕಟಿತ ...

READ MORE

Related Books