ಯಕ್ಷಕವಿ, ಅರ್ಥಧಾರಿ, ಸಾಹಿತಿ, ಅಧ್ಯಾಪಕ ಶ್ರೀಧರ್ ಡಿ.ಎಸ್

Author : ರವಿ ಮಡೋಡಿ

Pages 56

₹ 60.00




Year of Publication: 2022
Published by: ಕನ್ನಡ ಸಂಘ ಕಾಂತಾವರ

Synopsys

ಲೇಖಕ ರವಿ ಮಡೋಡಿ ಅವರು ಬರೆದಿರುವ ಕೃತಿ ಯಕ್ಷಕವಿ, ಅರ್ಥಧಾರಿ, ಸಾಹಿತಿ, ಅಧ್ಯಾಪಕ ಶ್ರೀಧರ್ ಡಿ.ಎಸ್. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ‘ಪಾರ್ತಿ ಸುಬ್ಬ’ ಪ್ರಶಸ್ತಿಗೆ ಭಾಜನರಾಗಿರುವ ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಯಕ್ಷಗಾನ ವಿಮರ್ಶಕ, ಕಥೆಗಾರ, ಕಾದಂಬರಿಕಾರರಾದ ಶ್ರೀಧರ ಡಿ.ಎಸ್. ಅವರ ಜೀವನ ಚಿತ್ರಣವಿರುವ ಕೃತಿ ‘ಕಾಂತಾವರ ಕನ್ನಡ ಸಂಘ’ದಿಂದ ಬಿಡುಗಡೆ ಆಗುತ್ತಿದೆ. ಈ ಕೃತಿಯನ್ನು ರಚಿಸಿದವರು ಸ್ವತಃ ಯಕ್ಷಗಾನ ಕಲಾವಿದರಾದ ರವಿ ಮಡೋಡಿ. ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸರಣಿಯಲ್ಲಿ ಈ ಕೃತಿ 325ನೆಯದು. ಶ್ರೀಧರ ಡಿ.ಎಸ್ ಅವರ ಜೀವನ ಪಯಣದ ಜೊತೆಗೆ ಮಲೆನಾಡಿನ ಯಕ್ಷಗಾನ ನಡೆದು ಬಂದ ಹಾದಿಯ ಸ್ಥೂಲ ಚಿತ್ರಣವೂ ಈ ಕೃತಿಯಲ್ಲಿದೆ. ಹನ್ನಾರ ಸೀಮೆಯ ಯಕ್ಷಗಾನದ ಉತ್ಥಾನ-ಅವಸಾನಗಳೂ ಇಲ್ಲಿವೆ. ಲಿಂಗನಮಕ್ಕಿ ಜಲಾಶಯ ರೂಪುಗೊಳ್ಳುವ ಹೊತ್ತಲ್ಲಿ ಹೇಗೆ ಮುಳುಗಡೆ ಎನ್ನುವುದು ಮಲೆನಾಡಿನ ಕಲಾವಿದರ ಬದುಕನ್ನು ಛಿದ್ರ ಮಾಡಿತು ಎಂಬ ವಿವರಗಳು ಸಾಕಷ್ಟು ಲಭಿಸುತ್ತವೆ. ಆಗ ಸರ್ವೇಸಾಮಾನ್ಯವಾಗಿದ್ದ ಹೂವಿನಕೋಲು ಕಲಾಪ್ರಕಾರದಿಂದ ತೊಡಗಿದ ಯಕ್ಷಗಾನದ ಆಸಕ್ತಿ ಪ್ರಸಿದ್ಧ ಯಕ್ಷ ಕಲಾವಿದರನ್ನು ರಂಗಕ್ಕೆ ಹೇಗೆ ತಯಾರು ಮಾಡಿ ಕೊಟ್ಟಿತು ಎಂಬ ವಿವರಗಳು ಮಲೆನಾಡಿನ ಯಕ್ಷ ಇತಿಹಾಸವನ್ನೇ ಕಣ್ಣೆದುರು ತೆರೆದಿಡುತ್ತಾ ಸಾಗುತ್ತದೆ. ಕಳೆದ ಮೂರು ದಶಕಗಳಲ್ಲಿ ತಾಳಮದ್ದಲೆಯ ಸ್ವರೂಪ ಬದಲಾಗುತ್ತಾ ಬಂದ ಪರಿಯೂ ಜೀವನ ಚಿತ್ರಣದಲ್ಲಿ ದಾಖಲಾಗುತ್ತಾ ಹೋಗುತ್ತದೆ. ಅಹೋರಾತ್ರಿ ತಾಳಮದ್ದಲೆಗಳಿಂದ ಸಮಯಮಿತಿ ತಾಳಮದ್ದಲೆಗಳು ಹುಟ್ಟಿಕೊಳ್ಳುವ ಮೂಲಕ ತಾಳಮದ್ದಲೆಯ ಬೆಳವಣಿಗೆಯ ಹಂತದಲ್ಲಿ ಬಹುದೊಡ್ಡ ಬದಲಾವಣೆ ಹೇಗಾಯಿತು ಎಂಬಿತ್ಯಾದಿ ವಿಚಾರಗಳು ಇಲ್ಲಿವೆ. ಹೀಗೆ ಶ್ರೀಧರ ಡಿ.ಎಸ್. ಅವರ ಬದುಕಿನ ಮಜಲುಗಳನ್ನು ದಾಖಲಿಸುವ ಜೊತೆಗೆ ಯಕ್ಷಗಾನದ ಮೂರು ದಶಕಗಳ ಏರಿಳಿತವೂ ಇಲ್ಲಿವೆ ಎನ್ನಬಹುದು

About the Author

ರವಿ ಮಡೋಡಿ

ಲೇಖಕ ರವಿ ಮಡೋಡಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ . ಪ್ರವೃತ್ತಿಯಿಂದ ಯಕ್ಷಗಾನ ಪ್ರೇಮಿ. ಯಕ್ಷಗಾನ ನೃತ್ಯ, ಅರ್ಥಗಾರಿಕೆ ಬಲ್ಲವರು. ಮೊಬೈಲ್ ಆಪ್ ಮೂಲಕ ಯಕ್ಷಗಾನ ಪ್ರಸಂಗಗಳನ್ನ ಡಿಜಿಟಲೀಕರಣ ಮಾಡುವುದು ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಕೃತಿಗಳು : ಮಲೆನಾಡಿನ ಯಕ್ಷ ಚೇತನಗಳು (ವ್ಯಕ್ತಿಚಿತ್ರಣಗಳು) ...

READ MORE

Related Books