ಯಶಸ್ಸಿನ ರಹಸ್ಯ...

Author : ಸ್ವಾಮಿ ಪುರುಷೋತ್ತಮಾನಂದ

Pages 147

₹ 50.00




Year of Publication: 2018
Published by: ಶ್ರೀ ರಾಮಕೃಷ್ಣಾಶ್ರಮ
Address: ಯಾದವಗಿರಿ, ಮೈಸೂರು

Synopsys

ಯುವ ಜನತೆಯ ವ್ಯಕ್ತಿತ್ವ ನಿರ್ಮಾಣಕ್ಕೊಂದು ಕೈಪಿಡಿ ಎಂಬ ಉಪಶೀರ್ಷಿಕೆಯಡಿ ಸ್ವಾಮಿ ಪುರುಷೋತ್ತಮಾನಂದರು ‘ಯಶಸ್ಸಿನ ರಹಸ್ಯ’ ಎಂಬ ಕೃತಿ ರಚಿಸಿದ್ದು, ಯುವ ಜನತೆಗೆ ಮಾರ್ಗದರ್ಶಿಯಂತಿದೆ. ಯುವಕರು ತಮ್ಮ ವಯಸ್ಸಿನ ಹುಚ್ಚುಹೊಳೆಯಲ್ಲಿ ದಾರಿ ತಪ್ಪುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿರುತ್ತದೆ. ಅದನ್ನು ಪಾಲಕ-ಪೋಷಕರು-ಶಿಕ್ಷಕರು ಅಗತ್ಯವಾಗಿ ನೀಡಬೇಕು. ತಪ್ಪಿದರೆ, ಅವರ ಜೀವನವೇ ವ್ಯರ್ಥ ದಾರಿ ತುಳಿದು ಹಾಳಾಗುತ್ತದೆ. ಆದ್ದರಿಂದ, ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ಅನುಸರಿಸಿ, ಜೀವನ ಯಶಸ್ಸು ಗಳಿಸಬೇಕು ಎಂಬ ಸಂದೇಶ ನೀಡುವ ಕೃತಿ ಇದು.

About the Author

ಸ್ವಾಮಿ ಪುರುಷೋತ್ತಮಾನಂದ
(14 June 1931 - 25 February 2005)

ಖ್ಯಾತ ಚಿಂತಕ ಸ್ವಾಮಿ ಪುರುಷೋತ್ತಮಾನಂದರುದ.ಕ. ಜಿಲ್ಲೆಯ ಸಾಲಿಗ್ರಾಮ ಬಳಿಯ ಮೂಡಹಾಡು ಗ್ರಾಮದವರು. ಮೂಲ ಹೆಸರು ರಾಮಚಂದ್ರ ಬಾಯಿರಿ. ಮಲ್ಪೆಯಲ್ಲಿ ಮೆಟ್ರಿಕುಲೇಷನ್ ಮುಗಿಸಿದರು. ನಂತರ ಬೆಂಗಳೂರಿನ ರಾಮಕೃಷ್ಣಾಶ್ರಮ ಪ್ರವೇಶಿಸಿದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು. ನಂತರ ಪ್ರವಚನಕಾರರಾಗಿ ಮುಂದುವರಿದರು.  “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.ಎನ್ನುವುದು ಅವರ ಪ್ರವಚನದ ಜೀವಾಳವಾಗಿತ್ತು. ಕೊಡಗು, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ಶ್ರೀರಾಮಕೃಷ್ಣಾಶ್ರಮದ ಶಾಖೆಗಳನ್ನು ಆರಂಭಿಸಿದರು. ಅವರು ಉತ್ತಮ ಹಾಡುಗಾರರೂ ಆಗಿದ್ದು, ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.  ಕೃತಿಗಳು : ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ...

READ MORE

Related Books