ಯಶಸ್ವೀ ಶಿಕ್ಷಕರಾಗುವುದು ಹೇಗೆ ?

Author : ಅರವಿಂದ ಚೊಕ್ಕಾಡಿ

Pages 92

₹ 50.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು.

Synopsys

ಶಿಕ್ಷಕರು ಎಂದರೆ ಹಿಂದೆ ಒಂದು ಘನತೆ, ಗೌರವವಿತ್ತು. ಮಕ್ಕಳ ಭವಿಷ್ಯ ಕುರಿತು ಚಿಂತಿಸುವಾಗ ಅಲ್ಲಿ ಶಿಕ್ಷಕ ಭರವಸೆಯ ಬೆಳಕಾಗುತ್ತಾನೆ. ಆದರೆ  ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಕಾಲದಲ್ಲಿ ಶಿಕ್ಷಕನೂ ವ್ಯಾಪಾರದ ಭಾಗವಾಗುತ್ತಿದ್ದಾನೆ.ಹಾಗಿದ್ದರೂ ನಮ್ಮ ಸಮಾಜ ಶಿಕ್ಷಕನ ಜವಾಬ್ದಾರಿಗಳನ್ನು, ಮೌಲ್ಯಗಳನ್ನು ಮರೆತಿಲ್ಲ. ಏಕೆಂದರೆ ಆತ ‘ನಾಳಿನ ಯಶಸ್ವೀ ಪ್ರಜೆಗಳ ರೂವಾರಿ’. ಮಕ್ಕಳ ಬದುಕನ್ನು ಮೌಲ್ಯಯುತವಾಗಿ ಕಟ್ಟಿಕೊಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕನದ್ದಾಗಿರುತ್ತದೆ. ಹಾಗಾದರೆ ಯಶಸ್ವೀ ಶಿಕ್ಷಕರಾಗಲು ಏನು ಮಾಡಬೇಕು ಎಂಬುದನ್ನು  ಶಿಕ್ಷಕ, ಚಿಂತಕ  ಅರವಿಂದ ಚೊಕ್ಕಾಡಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books