ಯಶವಂತ ಚಿತ್ತಾಲರ ಸಾಹಿತ್ಯಲೋಕ

Author : ರಾಜೇಂದ್ರ ಚೆನ್ನಿ

Pages 556

₹ 350.00




Year of Publication: 2013
Published by: ಪ್ರಿಸಮ್ ಬುಕ್ಸ್ ಪ್ರೈ ಲಿ
Address: ನಂ.1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70

Synopsys

‘ಯಶವಂತ ಚಿತ್ತಾಲರ ಸಾಹಿತ್ಯಲೋಕ’ ಕನ್ನಡ ಸಾಹಿತ್ಯಲೋಕ ಕಂಡ ಅದ್ಭುತ ಕತೆಗಾರರಲ್ಲಿ ಒಬ್ಬರಾದ ಯಶವಂತ ಚಿತ್ತಾಲರ ಸಾಹಿತ್ಯಿಕ ಕೃಷಿಯ ಮೇಲೆ ಬೆಳಕು ಚೆಲ್ಲುವ ಕೃತಿ. ಹಿರಿಯ ಲೇಖಕ ರಾಜೇಂದ್ರ ಚೆನ್ನಿ ಅವರು ಸಂಪಾದಿಸಿದ್ದಾರೆ. ಯಶವಂತ ಚಿತ್ತಾಲರು ಹೊಸ ಬಗೆಯ ವಸ್ತುವನ್ನು, ಹೊಸ ಚಿಂತನೆ ಹಾಗೂ ಹೊಸ ಶೈಲಿಯೊಂದಿಗೆ ಬರೆಯುವ ಪ್ರಯೋಗಶೀಲರು. ಚಿತ್ತಾಲರ ಈ ವಿನೂತನ ಸಾಹಿತ್ಯಕ ಕಾಣ್ಕೆಯನ್ನು ಲೇಖಕರು ವಿಶ್ಲೇಷಿಸಿದ್ದಾರೆ. 

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books