ಯಾವ ಜನ್ಮದ ಮೈತ್ರಿ

Author : ಚಿರಂಜೀವಿ ಸಿಂಘ್‌

Pages 264

₹ 275.00

Buy Now


Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 7353530805 / 080 - 20161913

Synopsys

ಲೇಖಕ ಚಿರಂಜೀವಿ ಸಿಂಘ್ ಅವರ ಅಂಕಣ ಬರಹಗಳ ಸಂಗ್ರಹ ‘ಯಾವ ಜನ್ಮದ ಮೈತ್ರಿ’ . ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಸಿಂಘ್ ಅವರು ಸಂದರ್ಭಾನುಸಾರವಾಗಿ ಬರೆದ ಲೇಖನಗಳು ಈ ಕೃತಿಯಲ್ಲಿವೆ. ಇದರಲ್ಲಿ ಹಲವು ಲೇಖನಗಳು ಆಯಾ ಸಂದರ್ಭದ ಬೆಳವಣಿಗೆಗೆ ನೀಡಿದ ಪ್ರತಿಕ್ರಿಯೆಗೆ ಸೀಮಿತಗೊಂಡಿವೆ ಎನಿಸಿದರೂ ಅವುಗಳಲ್ಲಿ ಪ್ರಸ್ತಾಪಿಸಿರುವ ಚಾರಿತ್ರಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳಿಂದಾಗಿ ಎಲ್ಲಾ ಕಾಲಕ್ಕೂ ಪ್ರಸ್ತುತ ಎನಿಸುತ್ತವೆ.

ಈ ಕೃತಿಯಲ್ಲಿ ಸಿಂಘ್ ಅವರ ಆತ್ಮಚರಿತ್ರೆಯ ಝಲಕುಗಳು, ಸಾರ್ವಜನಿಕ ಬದುಕಿನಲ್ಲಿ ಅವರಿಗೆ ಇದ್ದ ಅನೇಕರ ಜೊತೆಗಿನ ಒಡನಾಟ, ಸಂವಾದ, ಸ್ನೇಹಸಂಬಂಧಗಳು ಅನಾವರಣಗೊಂಡಿವೆ. ನಾಡಿನ ಸಾಂಸ್ಕೃತಿಕ ಕಥನಗಳು ಹಾಗೂ ಅಭಿವೃದ್ಧಿಯ ಸಂಕಥನಗಳಿಗೆ ಲೇಖಕರು ಪ್ರತಿಸ್ಪಂದಿಸಿರುವುದನ್ನು ಲೇಖನಗಳು ಸಾದರಪಡಿಸುತ್ತಿವೆ. 

About the Author

ಚಿರಂಜೀವಿ ಸಿಂಘ್‌

ಲೇಖಕ ಚಿರಂಜೀವಿ ಸಿಂಘ್ ಅವರು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಂಘ್ ಮೂಲತಃ ಪಂಜಾಬಿನವರು. ಪಂಜಾಬಿನ ರಹೋನ್ ಅವರ ಹುಟ್ಟೂರು. 1971ರಲ್ಲಿ ಕರ್ನಾಟಕದ ತರೀಕೆರೆಗೆ ಕಾರ್ಯ ನಿಮಿತ್ತ ಬಂದ ಚಿರಂಜೀವಿ ಸಿಂಘ್ ಅವರು ಆಗಿನಿಂದ ಕನ್ನಡ ಭಾಷೆಯನ್ನು ಕಲಿಯಲು ಆರಂಭಿಸಿದರು.  ಪ್ರೊಬೇಶನರ್ ಆಗಿ ಕರ್ನಾಕಟದ ಬಳ್ಳಾರಿಯಲ್ಲಿ ಕಾರ್ಯ ಆರಂಭಿಸಿದ ಸಿಂಘ್ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ದುಡಿದಿದ್ದಾರೆ. ಸಿನಿಮಾ, ಪತ್ರಿಕೆಗಳ ಮೂಲಕ ಸ್ಪಷ್ಟವಾಗಿ ಕನ್ನಡವನ್ನು ಕಲಿತ ಚಿರಂಜೀವಿ ಸಿಂಘ್ ಅವರು ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆಗಳಾದ ಲಂಕೇಶ್, ...

READ MORE

Related Books