ಏರ್ಯ ಲಕ್ಷ್ಮೀನಾರಾಯಣ ಆಳ್ವ

Author : ಎಂ. ರಾಮಚಂದ್ರ

Pages 72

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಏರ್ಯ ಲಕ್ಮೀನಾರಾಯಣ ಆಳ್ವ ಅವರು ಸಾಹಿತಿ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜಸೇವಕ, ತುಳು ಬರಹಗಾರರು. ಬಂಟ್ವಾಳದಲ್ಲಿ `ಹರಿಜನ ಸೇವಾ ಸಂಘ'ವನ್ನು ಪ್ರಾರಂಭಿಸಿ, ಹರಿಜನರ ಸೇವೆಗೆ ನಿಂತವರು.  ಗಾಂಧೀಜಿಯವರ ದಲಿತೋದ್ಧಾರ ತತ್ವವನ್ನು ತಮ್ಮಲ್ಲಿ ಮೈಗೂಡಿಸಿಕೊಂಡ ಆಳ್ವರು ತಾವು ಸ್ಥಾಪಿಸಿದ ಹರಿಜನಸೇವಾ ಸಂಘವನ್ನು  ಸುಮಾರು 15 ವರ್ಷಗಳ ಕಾಲ ಹರಿಜನ ಮಕ್ಕಳಿಗೆ ಉಚಿತ ವಸ್ತ್ರ, ಪುಸ್ತಕ, ದೂರದವರಿಗೆ ಮಧ್ಯಾಹ್ನದ ಊಟ ಕೊಟ್ಟು ವಿದ್ಯಾಭ್ಯಾಸ ನೀಡುವ ಕೆಲಸ ನಡೆಸುವಲ್ಲಿ ಯಶಸ್ವಿಯಾಯಿತು. ಭಾರತವು ಜಾತ್ಯತೀತ ದೇಶವಾಗಿರುವುದರಿಂದ ಎಲ್ಲಾ ಧರ್ಮಗಳ ಮುಕ್ತವಾದ ಅಧ್ಯಯನದ ಅಗತ್ಯತೆ ಇದೆ ಎಂದು ಜನತೆಗೆ ತಮ್ಮ ಭಾಷಣದ ಮೂಲಕ ಸಾರಿದವರು. ಇಂತಹ ಘನ ವ್ಯಕ್ತಿತ್ವದ ಬಗ್ಗೆ ಪುಸ್ತಕವನ್ನು ಪ್ರಕಟ ಮಾಡಿದ ಉದಯಭಾನು ಸುವರ್ಣ ಪುಸ್ತಕಮಾಲೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. 

About the Author

ಎಂ. ರಾಮಚಂದ್ರ

ಎಮ್. ರಾಮಚಂದ್ರ ಅವರು 30 ವರ್ಷಕ್ಕಿಂತಲೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ , ಕಾಲೇಜಿನ ಸಾಹಿತ್ಯ ಸಂಘದ ಅಧ್ಯಕ್ಷರಾಗಿ , ವಿಚಾರ ಸಂಕಿರಣ, ಕವಿಗೋಷ್ಠಿ, ಹೀಗೆ ಹಲವಾರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ಧಾರೆ. ಕಾರ್ಕಳದಲ್ಲಿ 1997ರಲ್ಲಿ ಸಾಹಿತ್ಯ ಸಂಘ ಸ್ಥಾಪಿಸಿದ್ದಾರೆ. ಬಾಡದ ಹೂಗಳು, ನೆನಪಿನ ಸುರಗಿ, ಚಿತ್ರ ಚರಿತ್ರೆ, ಇವರ ಪ್ರಮುಖ ಪುಸ್ತಕಗಳು. ’ಸೇಡಿಯಾಪು ಕೃಷ್ಣಭಟ್ಟರ ಪತ್ರಾವಳಿ’ ಇವರ ಸಂಪಾದಿತ ಕೃತಿಯಾಗಿದೆ.  ...

READ MORE

Related Books