ಯೋಗ ಮತ್ತು ಅನುಭಾವ

Author : ಎನ್.ಎಂ. ಗಿರಿಜಾಪತಿ

₹ 50.00




Published by: ಚೈತನ್ಯ ಚಾರಿಟೇಬಲ್‌ ಟ್ರಸ್ಟ್‌ (ರಿ.)

Synopsys

ಲೇಖಕ ಡಾ. ಎನ್. ಎಂ. ಗಿರಿಜಾಪತಿ ಅವರ ಕೃತಿ ʻಯೋಗ ಮತ್ತು ಅನುಭಾವʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ಪ್ರಸ್ತುತ ಕೃತಿಯಲ್ಲಿ ನಾನು ಈ ಯೋಗಕ್ಕೆ ಸಂಬಂಧಿಸಿದ ವಿಚಾರಗಳಲ್ಲಿನ ಆಯ್ದ ಸಂಗತಿಗಳನ್ನು ಕುರಿತಂತೆ ಪ್ರಸ್ತಾಪಿಸಿದ್ದೇನೆ. ಈ ಯೋಗವೆಂದರೆ ಆಸನಗಳು ಮಾತ್ರವಲ್ಲ ತದ ನಂತರದ ಯೋಗದ ವ್ಯಾಪ್ತಿಯಲ್ಲಿರುವ ಮುಂದಿನ ಹಂತಗಳು ಯಾವುವು ಎನ್ನುವ ಪ್ರಶ್ನೆ ನನಗೆ ಆಗಾಗ ಕಾಡುತ್ತಿತ್ತು. ಈ ಕುರಿತಂತೆ ಅಷ್ಟಿಷ್ಟು ತಿಳಿದುಕೊಂಡಿದ್ದ ನನಗೆ ಈ ಬಗ್ಗೆ ಚಿಕ್ಕದಾದ ಕೃತಿ ರಚಿಸಬೇಕೆಂಬ ಹಂಬಲ ಮೊಳೆಯತೊಡಗಿತು. ಆ ಹಂಬಲದ ಪ್ರಯತ್ನವಾಗಿ ಈ ಕೃತಿ ರೂಪಗೊಂಡಿದೆ. ಇಲ್ಲಿ ನನಗೆ ಯೋಗ, ಯೋಗಸಾಧಕ, ಯೋಗದ ಪರಿಭಾಷೆಯಲ್ಲಿ ದೇಹ, ಆತ್ಮ ಮತ್ತು ಆಧ್ಯಾತ್ಮ, ಯೋಗ, ಯೋಗಾಸನ ಪ್ರಾರ್ಥನೆ, ಧ್ಯಾನ ಮತ್ತು ಭಜನೆ, ಯೋಗ ಮತ್ತು ಸಮಾಧಿ ಸ್ಥಿತಿ ಹಾಗೂ ಅಧಿಕಾರ ಲಕ್ಷಣಗಳು, ಯೋಗ ಮತ್ತು ಅನುಭಾವ ಕುರಿತ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಯೋಗಾಭ್ಯಾಸಿಗಳು ಮತ್ತು ಇತರರೂ ಸಹ ತಮ್ಮ ಆನಂದಮಯ ಜೀವನ ನಿರ್ವಹಣೆಯ ಮಾರ್ಗವನ್ನು ಅರ್ಥೈಸಿಕೊಳ್ಳುವಲ್ಲಿ, ಅನುಸರಿಸುವಲ್ಲಿ ಈ ರೀತಿಯ ವಿಚಾರಗಳ ಚಿಂತನ, ಮಂಥನ ಅಗತ್ಯವೆಂಬುದು ನನ್ನ ಅನಿಸಿಕೆ”.

About the Author

ಎನ್.ಎಂ. ಗಿರಿಜಾಪತಿ
(17 December 1966)

ಡಾ. ಎನ್.ಎಂ. ಗಿರಿಜಾಪತಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಡಿಸೆಂಬರ್‌ 17, 1966ರಲ್ಲಿ ಜನಿಸಿದರು. ತಂದೆ ದಿ. ಎನ್. ಎಂ. ಸೋಮಶೇಖರಯ್ಯ ಶಾಸ್ತ್ರಿ, ತಾಯಿ ಶ್ರೀಮತಿ. ವಿಶಾಲಾಕ್ಷಮ್ಮ. ಇವರು ಕನ್ನಡದಲ್ಲಿ ಎಂ.ಎ, ಬಿ.ಈಡಿ ಮತ್ತು ಪಿ.ಹೆಚ್‌.ಡಿ ವ್ಯಾಸಂಗ ಮಾಡಿದ್ದಾರೆ. ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಗಿರಿಜಾಪತಿ ಅವರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಗುಂಡ್ಲುಪೇಟೆಯಲ್ಲಿರುವ ಜೆ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಪಿಹೆಚ್‌ಡಿ ...

READ MORE

Related Books