ಯೋಗರತ್ನ

Author : ನಾಗರಾಜ ಆರ್. ಸಾಲೋಳ್ಳಿ

Pages 400

₹ 350.00




Year of Publication: 2022
Published by: ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು ಕಲಬುರಗಿ-585101
Phone: 9448124431

Synopsys

'ಯೋಗರತ್ನ' ಇದುವರೆಗೆ ಪ್ರಕಟಗೊಂಡ ಯೋಗಾಸನಗಳ ಕೃತಿಗಳಲ್ಲಿ ಸರ್ವಶ್ರೇಷ್ಠವಾದ ಮತ್ತು ಹೆಚ್ಚು ವೈಚಾರಿಕವಾಗಿ, ವೈಜ್ಞಾನಿಕವಾಗಿ ರಚಿಸಲ್ಪಟ್ಟ ಮಹತ್ವದ ಕೃತಿಯಾಗಿದೆ. 'ಯೋಗವೆಂದರೆ ಚಿತ್ತ ವೃತ್ತಿಗಳ ನಿರೋಧ ವಾಗಿದೆಯೆಂಬ ಮಾತು ಈ ಕೃತಿಗೆ ಹೆಚ್ಚು ಅನ್ವಯಿಸುತ್ತದೆ. ಯೋಗ ಮತ್ತು ಯೋಗಾಸನಗಳಿಂದ ಮನಸ್ಸಿನ ವಿವಿಧ ವೃತ್ತಿಗಳನ್ನು ಹತೋಟಿಯಲ್ಲಿ ಇಡುವುದೆಂದೂ, ಚಿತ್ರದ ಅಥವಾ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸುವುದೆಂದು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಸಾಧನೆಗೆ ಅಷ್ಟಾಂಗ ಯೋಗ ಮುಖ್ಯವಾಗಿದೆಯೆಂಬ ತಿಳುವಳಿಕೆ ಕೊಡಲಾಗಿದೆ. ಪತಂಜಲಿ ಯೋಗ-ಯೋಗಾಸನಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಬರೆದಿದ್ದಾರೆ. ಸಮಗ್ರ ಯೋಗದರ್ಶನವನ್ನು ಮಾಡಿಸಿದ್ದಾರೆ. ಯೋಗದ ಪರಿಚಯ, ವ್ಯಾಖ್ಯಾನಗಳ ತಿಳುವಳಿಕೆ ನೀಡುವುದರೊಂದಿಗೆ, ಒಬ್ಬ ಸಾಧಕನು ವಿನಮ್ರವಾಗಿ ಯೋಗ ಸಾಧನೆಗೆ ಹೊರಟರೆ ಯಾವ ನಿಯಮಗಳನ್ನು ಪಾಲಿಸಬೇಕೆಂಬುದನ್ನು ಬಹಳ ಸ್ಪಷ್ಟವಾಗಿ, ನಿಖರವಾಗಿ ತಿಳಿಸಿದ್ದಾರೆ. ನಾಗರಾಜ ಆರ್. ಸಾಲೊಳ್ಳಿಯವರು ಕೇವಲ ಪುಸ್ತಕಗಳನ್ನು ಓದಿ, ವಿಷಯ ಸಂಗ್ರಹಿಸಿದ್ದಾರೆನ್ನುವುದಕ್ಕಿಂತ ಹೆಚ್ಚಾಗಿ ಸ್ವತಃ ಓದಿ ಅನುಭವಿಸಿ ಅದರ ಫಲಪ್ರಾಪ್ತಿ ರೂಪದಲ್ಲಿ ಇತರರಿಗೂ ಉಪಯುಕ್ತವಾಗಲಿಯೆಂಬ ಕಳಕಳಿ ಅವರಲ್ಲಿದೆ. ಈ ಕೃತಿ ಓದುಗರಿಗೆ ಫಲಪ್ರದ ವಾಗಲಿಯೆಂಬುದು ನನ್ನಿಚ್ಛೆಯಾಗಿದೆ ಎಂದು ಪ್ರೊ. ಶಿವರಾಜ ಪಾಟೀಲ ಬೆನ್ನುಡಿಯಲ್ಲಿ ಬರೆದಿದ್ದಾರೆ. 
 

About the Author

ನಾಗರಾಜ ಆರ್. ಸಾಲೋಳ್ಳಿ

ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ನ ಯೋಗ ಶಿಕ್ಷಕರಾದ ನಾಗರಾಜ ಆರ್. ಸಾಲೋಳ್ಳಿಯವರು ಕಲಬುರಗಿಯ ಶಹಬಾದ ತಾಲೂಕಿನ ಮಾಲಗತ್ತಿ ಗ್ರಾಮದವರು. ಅಂತರಾಷ್ಟ್ರೀಯ ಯೋಗ ವಿಜೇತರಾದ ಇವರು ಯೋಗ ಸಾಧನೆಯಿಂದ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ೨೦೦೨ ರಿಂದ ಯೋಗಾಭ್ಯಾಸದಲ್ಲಿ ತೊಡಗಿ ಮುಂದೆ ಎಮ್. ಎಸ್ಸಿ. ಸ್ನಾತಕ ಪದವಿಯನ್ನು ಯೋಗದಲ್ಲಿಯೆ ಪಡೆದು, ನಂತರ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಹಾಗೂ ಸಾರ್ವಜನಿಕರಿಗಾಗಿ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ದತಿ ವಿಷಯಗಳ ಮೇಲೆ ೧೦೦ ಕ್ಕೂ ಹೆಚ್ಚಿನ ಉಚಿತ ತರಬೇತಿ ಶಿಬಿರಗಳನ್ನು, ಉಪನ್ಯಾಸಗಳನ್ನು ಹಾಗೂ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ, ಕಲಬುರಗಿಯ ...

READ MORE

Related Books