ಯುಗ ಪ್ರವರ್ತಕ

Author : ಲಕ್ಷ್ಮೀ ಮಚ್ಚಿನ

Pages 152

₹ 50.00




Year of Publication: 2008
Published by: ಯುಗಪುರುಷ ಪ್ರಕಟನಾಲಯ
Address: ಕಿನ್ನಿಗೋಳಿ

Synopsys

ಲಕ್ಷ್ಮೀ ಮಚ್ಚಿನ (ಲಕ್ಷ್ಮೀನರಸಿಂಹ ಶಾಸ್ತ್ರಿ, ಮಚ್ಚಿನ) ತಮ್ಮ ಪತ್ರಿಕೋದ್ಯೋಗದ ಸಂದರ್ಭದಲ್ಲಿ ಧರ್ಮಸ್ಥಳದ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖ ಸಾಧನೆಯನ್ನು ಪರಿಚಯಿಸಿ ಬರೆದ ಲೇಖನಗಳು ಮತ್ತು ಸಂದರ್ಶನಗಳು ಸಂಗ್ರಹವಾಗಿ ಇಲ್ಲಿವೆ. ಡಾ|ಹೆಗ್ಗಡೆಯವರದು ಬಹುಮುಖಿ ಮಹೋನ್ನತ ವ್ಯಕ್ತಿತ್ವ, ಆ ಧಿಮಂತ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸುಲಭದ ಕೆಲಸವಲ್ಲ. ಅಂಥ ಒಂದು ಕಿರುಪ್ರಯತ್ನ . ಅಭಿವೃದ್ಧಿಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಬಂಡವಾಳಗಳಷ್ಟೇ ಆಧ್ಯಾತ್ಮಿಕ ಬಂಡವಾಳವೂ ಮುಖ್ಯ ಎಂಬ ನೂತನ ತತ್ವವನ್ನು ಅಳವಡಿಸಿಕೊಂಡು, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಮೂಲಕ ಸಾಮು ದಾಯಿಕ ಅಭಿವೃದ್ಧಿಯನ್ನು ಸಾಕಾರಗೊಳಿಸಿ ದೇಶಕ್ಕೆ ಮಾದರಿಯೊಂದನ್ನು ನಿರ್ಮಿಸಿಕೊಟ್ಟಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಾಧನೆಗಳನ್ನು ದಾಖಲಿಸುವ ಕೆಲಸ ಹೆಚ್ಚುಹೆಚ್ಚಾಗಿ ನಡೆಯಬೇಕಾಗಿದೆ. ಈ ದೃಷ್ಟಿಯಲ್ಲಿ ಲಕ್ಷ್ಮೀ ಮಚ್ಚಿನ ಅವರ ಈ ಪುಸ್ತಕ ಮಹತ್ವದ್ದಾಗುತ್ತದೆ ಮತ್ತು ಆಪ್ತವಾಗುತ್ತದೆ.

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books