ಜೆನ್ ಮಹಾಯಾನ

Author : ಆರ್.ಡಿ. ಹೆಗಡೆ

Pages 124

₹ 95.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ ಆರ್.ಡಿ. ಹೆಗಡೆ ಆಲ್ಮನೆ ಅವರ ಕೃತಿ-ಜೆನ್ ಮಹಾಯಾನ. ಜೆನ್ ಪದ ಸಂಸ್ಕೃತದ ‘ಧ್ಯಾನ’ ಪದಕ್ಕೆ ಸಂವಾದಿಯಾಗಿದೆ. ಚಾನ, ತಿಯೆನ್, ಸಿಯಾನ್, ಝಾನ - ಇವು ಪ್ರಾದೇಶಿಕ ಭಾಷಾರೂಪಗಳು. ಜೆನ್ ಬೌದ್ಧಮತದ ಒಂದು ಶಾಖೆ. ಶಾಕ್ಯಮುನಿ ಬುದ್ಧಗುರುವಿನಿಂದ ಬೋಧಿಧರ್ಮನವರೆಗೂ ಸಾವಿರಾರು ವರ್ಷಗಳಿಂದ ಕವಲೊಡೆಯುತ್ತ ವಿಸ್ತರಿಸಿಕೊಂಡು ವಿಕಾಸಗೊಳ್ಳುತ್ತ ಸಾಗಿದ ಈ ಪಂಥದ ಸುದೀರ್ಘ ಪಯಣವೇ ಮಹಾಯಾನ. ‘ಧರ್ಮವಲ್ಲದ ಧರ್ಮ - ಉಪದೇಶವಿಲ್ಲದ ಮೌನ’ ಎಂಬುದೇ ಇದರ ಹಿರಿಮೆ. ಜೆನ್ ಇತರ ಧರ್ಮಗಳಂತೆ ನಿಂತ ನೀರಾಗದೆ ಸದಾ ಹರಿಯುತ್ತ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ಅದು ಏನನ್ನು ಹೇರುವುದಿಲ್ಲ. ಇದು ಒಂದು ಧರ್ಮವಲ್ಲ, ಬದುಕುವ ವಿಧಾನ ಅಷ್ಟೆ. ಆಳುವ ಚಕ್ರವರ್ತಿಗಳನ್ನೂ ಸೆಳೆದುಕೊಂಡಿದ್ದು ಜೆನ್ ಸಾಧನೆ. ಉಪನಿಷತ್ತುಗಳು ಹೇಳಿದ ಅರಳುವ ವೈಭವ, ನಶಿಸುವ ನಶ್ವರತೆ ಜೆನ್ ಕಂಡುಕೊಂಡಿದೆ. ಬೌದ್ಧಮತದ ಮೂಲ ಭಾರತವೇ ಆದರೂ ಇಲ್ಲಿನ ವೈದಿಕರ ಕೆಂಗಣ್ಣಿಗೆ ಬಲಿಯಾಗಿ ಗಡಿದಾಟಿ ನೆರೆರಾಜ್ಯಗಳಲ್ಲಿ ನೆಲೆನಿಂತು ಇಂದಿಗೂ ವಿಕಾಸದ ಪಥದಲ್ಲಿದೆ. ಯಾವ ಕೆಲಸವೇ ಆಗಲಿ, ಸಂಪೂರ್ಣ ಸಮರ್ಪಣಾಭಾವದಿಂದ ಮಾಡಿದಾಗ ಅದುವೇ ಜೆನ್. ಮೊದಲು ಬೌದ್ಧಮತದಲ್ಲಿ ಧರ್ಮಗ್ರಂಥಗಳು ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದ್ದಲ್ಲವೆ? ಜೆನ್ ನವರು ಹೇಳುವ ಶಾಸ್ತ್ರಗಳ ನಿರವಲಂಬನ ಎಂದರೇನು? ಬೌದ್ಧಮತದಲ್ಲಿ ಬುದ್ಧನೇ ಹೇಳಿದ “ಧರ್ಮ ಎನ್ನುವ ವಸ್ತುವೊಂದಿತ್ತೆ?” ಎಂದು ಮಹಾಕಶ್ಯಪನಿಗೆ ಕೇಳಿದನೆನ್ನುವ ಮಾತು ಇಲ್ಲಿ ಬಂದಿದೆ. ಪುಷ್ಪ ಪ್ರವಚನ - ಮೌನ ಸಂಕೇತ ಎನ್ನುತ್ತಾರೆ. ಮೌನ ಸಂಭಾಷಣೆ ಶ್ರೇಷ್ಠ ಎನ್ನುತ್ತದೆ ಈ ಧರ್ಮ.

About the Author

ಆರ್.ಡಿ. ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿರುವ ಆರ್‌.ಡಿ. ಹೆಗಡೆ ಅವರು ಜನಿಸಿದ್ದು  1964ರ ಡಿಸೆಂಬರ್‌ 3ರಂದು. ಶಿರಸಿ, ಉತ್ತರ ಕನ್ನಡ  ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ. ಅವರು ಭಾರತದಲ್ಲಿ ಶಿಕ್ಷಣ ಸಾಧ್ಯತೆ ಮತ್ತು ಸವಾಲು ಎಂಬ ಪುಸ್ತಕ್ಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಭಾಸನಾಟಕಗಳ ಕಥೆ (ಸಂಸ್ಕೃತದಲ್ಲಿ), ವಾಲ್ಮಿಕಿರಾಮಾಯಣದ ಸುಭಾಷಿತಗಳು (ಸಂಗ್ರಹ), ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ಮೂರು ಬಾರಿ ಮುದ್ರಿತ),  ಉಪನಿಷತ್ತುಗಳ ಅರ್ಥಲೋಕ(ಮೂರು ಬಾರಿ ಮುದ್ರಿತ),  ಪುಟ್ಟ ಗುಲಾಬಿ ಹೂವೇ, (ಕಥಾಸಂಕಲನ), ದಾರಿ(ಕಿರು ಕಾದಂಬರಿ), ಭಾರತದಲ್ಲಿ ಉನ್ನತ ಶಿಕ್ಷಣ:ಸವಾಲು ಮತ್ತು ಸಾಧ್ಯತೆ(ಅನುವಾದ),   ಮಾನವತ್ವದ ಸಾರ(ಅನುವಾದ),  ಕೃತಿಚಿತ್ತ, ಸಂಕಥನ, ಜೆನ್‌ಮಹಾಯಾನ,  ಕವಿ ವಿ ಜಿ ಭಟ್ಟರ ...

READ MORE

Reviews

(ಹೊಸತು, ಜುಲೈ 2015, ಪುಸ್ತಕದ ಪರಿಚಯ)

ಬೌದ್ಧಮತದ ಒಂದು ಶಾಖೆ ಜೆನ್ - ಇತ್ತೀಚೆಗೆ ಎಲ್ಲರನ್ನೂ ಆಕರ್ಷಿಸುತ್ತಿರುವ ಒಂದು ವಿಚಾರಧಾರೆ. ಬುದ್ಧಗುರುವಿನಿಂದ ಬೋಧಿಧರ್ಮನವರೆಗೆ ಸಾವಿರಾರು ವರ್ಷಗಳಿಂದ ಕ್ರಮಿಸಿ ಇನ್ನೂ ವಿಕಾಸಗೊಳ್ಳುತ್ತಲೇ ಇರುವ ಒಂದು ಸುದೀರ್ಘ ಪಯಣ ಜೆನ್‌ನ ಮಹಾಯಾನ. ಮಾತಿನ ಹಂಗಿಲ್ಲದ ಮೌನ ಸಂಭಾಷಣೆ ಇದರ ತತ್ವ ನಮ್ಮಲ್ಲಿ ಮಾತು ಕಡಿಮೆ ಹೆಚ್ಚು ದುಡಿಮೆ ಎನ್ನುವಂತೆ. ಧರ್ಮವಲ್ಲದ ಧರ್ಮ – ಉಪದೇಶವಿಲ್ಲದ ಮೌನ ಎಂಬುದು ಇದರ ಮರ್ಮ, ಯಾವುದೇ ಪುರಾಣ ಶಾಸ್ತ್ರಗ್ರಂಥಗಳ ನಿರವಲಂಬನ ಇದರ ಹೆಚ್ಚುಗಾರಿಕೆ. ದ್ವಂದ್ವಾತೀತ – ಅಚಲ - ಉದ್ವೇಗರಹಿತ ಬುದ್ಧತತ್ವವನ್ನು ಜೆನ್ ಕಂಡುಕೊಂಡಿದೆ. ಭಾರತದಲ್ಲೇ ಹುಟ್ಟಿ ಬೆಳೆದರೂ ತವರನ್ನು ತೊರೆದು ಗಡಿದಾಟಿ ಇತರ ದೇಶಗಳಲ್ಲಿ ನೆಲೆ ಕಂಡುಕೊಂಡದ್ದು ಬೌದ್ಧಮತದ ಒಂದು ವಿಪರ್ಯಾಸ. ಇಂದು ಎಲ್ಲೆಡೆ ಜೆನ್ ಸುದ್ದಿ ಮಾಡಿದೆ. ಎಲ್ಲೆಲ್ಲೂ ಕೇಂದ್ರಗಳು ತಲೆಯೆತ್ತಿವೆ. ಉಪದೇಶವಿಲ್ಲದ ಮೌನ ದಾಟಿ ಸಾವಿರಾರು ಉಪನ್ಯಾಸಗಳು ಏರ್ಪಡುತ್ತವೆ. ಗ್ರಂಥಗಳ ನಿರವಲಂಬನ ಮೀರಿ ಅದರ ಬಗೆಗೇ ಅಸಂಖ್ಯ ಗ್ರಂಥಗಳೇ ಬಂದಿವೆ. ಒಂದು ಸರಕಾಗಿ ಮಾರ್ಪಡುವ ಅಪಾಯವನ್ನು ಜೆನ್ ಇಂದು ಎದುರಿಸುತ್ತಿದೆ. ಬುದ್ಧನ ಮುಖದ ಮೇಲಿನ ಪ್ರಸನ್ನತೆ - ಆನಂದವನ್ನು ನೆನಪಿಸುವ ಈ ಕೃತಿ ಜೆನ್ ನಡೆದುಬಂದ ದಾರಿಯನ್ನು ವಿವರವಾಗಿ ತಿಳಿಸುತ್ತದೆ.

Related Books