ಬುಕ್‌ ಬ್ರಹ್ಮ ನನ್ನ ನೆಚ್ಚಿನ ಪುಸ್ತಕ

ಸ್ಪರ್ಧೆಯ ನಿಯಮಗಳು:

 • ಪ್ರತಿ ತಿಂಗಳೂ ಈ ಸ್ಪರ್ಧೆಯನ್ನು ನಡೆಸಲಾಗುವುದು.
 • ಪ್ರತಿ ತಿಂಗಳ 20ನೇ ತಾರೀಕು ಮುಂದಿನ ತಿಂಗಳ ಸ್ಪರ್ಧೆಯನ್ನು ಘೋಷಿಸಲಾಗುವುದು.
 • ಪ್ರತಿ ತಿಂಗಳ 20ರಿಂದ 30ನೇ ತಾರೀಕಿನೊಳಗೆ ಕತೆಗಾರರು ತಮ್ಮ ತಮ್ಮ ಕತೆಯನ್ನು ’ಬುಕ್ ಬ್ರಹ್ಮ’ಕ್ಕೆ ಸಲ್ಲಿಸಬಹುದು.
 • ನಂತರ ಬರುವ ತಿಂಗಳ 5ನೇ ತಾರೀಕು ಸ್ಪರ್ಧೆಗೆ ಬಂದಿರುವ ಕತೆಗಳ ಪೈಕಿ ಪ್ರಕಟಣೆಗೆ ಸೂಕ್ತ ಎನ್ನುವ ಕತೆಗಳನ್ನು ಆಯ್ಕೆ ಮಾಡಿ ’ಬುಕ್ ಬ್ರಹ್ಮ’ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಾಗುವುದು.
 • ಪ್ರತಿ ತಿಂಗಳ 5ನೇ ತಾರೀಕಿನಿಂದ 25ನೇ ತಾರೀಕಿನವರೆಗೆ ಪ್ರಕಟವಾದ ಎಲ್ಲ ಕವಿತೆಗಳನ್ನು ಓದಿ, ಓದುಗರು ಅವರ ಅನಿಸಿಕೆ ತಿಳಿಸಿಬಹುದು. ಅವರವರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಹುದು. ಲೈಕ್ ಕೂಡ ಮಾಡಬಹುದು.
 • ಹಾಗೆ ಬಂದ ತಲಾ ಒಂದು ಅನಿಸಿಕೆಗೆ 9 ಅಂಕ ಹಾಗೂ ಲೈಕ್‌ಗೆ 3 ಅಂಕಗಳನ್ನು ನಿಗದಿ ಮಾಡಲಾಗಿದೆ.
 • ಈ ಹಿನ್ನೆಲೆಯಲ್ಲಿ ಆಯಾ ಲೇಖಕರು ಅವರವರ ಕತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವೈಯಕ್ತಿಕ ನೆಲೆಯಲ್ಲಿ ಪ್ರಚಾರ ಮಾಡಲು ಅವಕಾಶವಿದೆ.
 • ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಫಲಿತಾಂಶವನ್ನು ಪ್ರತಿ ತಿಂಗಳು 30ನೇ ತಾರೀಕಿನಂದು ಪ್ರಕಟಿಸಲಾಗುವುದು.
 • ಕತೆ ಸ್ಪರ್ಧೆಯಲ್ಲಿ ಗೆದ್ದ ಕತೆಗಾರರಿಗೆ ಪ್ರತಿ ತಿಂಗಳೂ ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಸರ್ಟಿಫಿಕೇಟ್ ಮತ್ತು ’ಅಂಕಿತ ಪುಸ್ತಕ’ ಪಬ್ಲಿಕೇಶನ್ಸ್‌ ವತಿಯಿಂದ ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ಕಳುಹಿಸಲಾಗುವುದು.
 • ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಸ್ಪರ್ಧೆಯಲ್ಲಿ ಒಮ್ಮೆ ಬಹುಮಾನ ಗೆದ್ದ ಕತೆಗಾರರು ಮುಂದಿನ 36 ತಿಂಗಳವರೆಗೆ (ಮೂರು ವರ್ಷಗಳ ಕಾಲ) ಕತಾ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಗಿಲ್ಲ.
 • ಆದರೆ ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ ಸ್ಪರ್ಧೆ’ಯಲ್ಲಿ ಒಮ್ಮೆ ಬಹುಮಾನ ಗೆದ್ದ ಕತೆಗಾರ, ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ’, ’ಬುಕ್ ಬ್ರಹ್ಮ ಜನ ಮೆಚ್ಚಿದ ಪ್ರಬಂಧ-ಲೇಖನ’ ಮತ್ತು ’ಬುಕ್ ಬ್ರಹ್ಮ ನಾನು ಮೆಚ್ಚಿದ ಪುಸ್ತಕ’ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಬಹುದು
 • .
 • ಸ್ಪರ್ಧೆಯ ನಿರ್ವಹಣೆ ಮತ್ತು ಅಂತಿಮ ತೀರ್ಪು ನೀಡುವ ವಿಚಾರದಲ್ಲಿ ಎಲ್ಲ ಸ್ವಾಮ್ಯವೂ ’ಬುಕ್ ಬ್ರಹ್ಮ’ ಸಂಸ್ಥೆಯದ್ದಾಗಿರುತ್ತದೆ. ಆ ತೀರ್ಪು ಅಂತಿಮವಾಗಿರುತ್ತದೆ.
 • ’ಬುಕ್ ಬ್ರಹ್ಮ’ ಸ್ಪರ್ಧೆಗಳಲ್ಲಿ ಪ್ರಕಟಣೆಗೆ ಮತ್ತು ಬಹುಮಾನಿತ ಕತೆಯಾಗಿ ಆಯ್ಕೆಯಾಗುವ ಕತೆಗಳ ಹಕ್ಕುಸ್ವಾಮ್ಯ ಆಯಾ ಕತೆಗಾರರಿಗೆ ಸೇರಿರುತ್ತದೆ. ’ಬುಕ್ ಬ್ರಹ್ಮ’ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ’ಬುಕ್ ಬ್ರಹ್ಮ’ ವೆಬ್ ಸೈಟ್ ಗೆ https://www.bookbrahma.com/ಸಬ್ ಸ್ಕ್ರೈಬ್ ಮಾಡಿರಬೇಕು. ’ಬುಕ್ ಬ್ರಹ್ಮ’ ಫೇಸ್ ಬುಕ್ https://www.facebook.com/BookBrahma ಪುಟವನ್ನು ’ಲೈಕ್’ ಮಾಡಿರಬೇಕು ಮತ್ತು ’ಫಾಲೋ’ ಮಾಡಿರಬೇಕು. ’ಬುಕ್ ಬ್ರಹ್ಮ’ ಯೂಟ್ಯೂಬ್ ಚಾನೆಲ್ ಗೆhttps://www.youtube.com/channel/UC1351MdsUEHkG0BJYKD6hKA ಸಬ್ ಸ್ಕ್ರೈಬ್ ಮಾಡಿರಬೇಕು.