‘ಬಹುತ್ವ ರೂಪಗಳು’ ಮೂರು ದಿನಗಳ ರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣ

Start Date: 04-05-2021 10:00 AM

End Date: 06-05-2021 06:00 PM

Venue: ಅಂತರ್ಜಾಲ: ಮೈಕ್ರೋಸಾಫ್ಟ್ ಟೀಂ- https://forms.gle/vP85ny78KDSFZELXA


ಸುರಾನಾ ಕಾಲೇಜಿನ ವತಿಯಿಂದ ‘ಬಹುತ್ವ ರೂಪಗಳು’ ಕನ್ನಡ ನಾಡು, ನುಡಿ, ಸಂಸ್ಕೃತಿ ಹೆಸರಿನಲ್ಲಿ ಮೂರುದಿನಗಳ ರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ದಿನಾಂಕ- 04-05-2021 ರಿಂದ 06-05-2021ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಸುರಾನಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್. ರಮ್ಯಾ ಉದ್ಘಾಟಿಸಲಿದ್ದಾರೆ. ಸುರಾನಾ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಪ್ರಾಧ್ಯಾಪಕ ಸೂರ್ಯಕೀರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. 

ಮೊದಲ ಗೋಷ್ಠಿ: 04-05-2021, ಮಂಗಳವಾರ ಬೆಳಗ್ಗೆ 10ರಿಂದ 11ರವರೆಗೆ ನಡೆಯಲಿದ್ದು ‘ಪ್ರಾಚೀನ ಸಾಹಿತ್ಯ ಮತ್ತು ನಿರ್ವಚನೆ’ ಎಂಬ ವಿಚಾರದಡಿ ಪ್ರೊ.ಎಸ್.ಪಿ. ಅಜಿತ್ ಪ್ರಸಾದ್ ಮಾತನಾಡಲಿದ್ದಾರೆ. 
ಎರಡನೇ ಗೋಷ್ಠಿ: 11:00 ರಿಂದ12:00 ವರೆಗೆ ನಡೆಯಲಿದ್ದು ‘ಮಹಿಳಾ ಸಾಹಿತ್ಯ ಮತ್ತು ಕ್ರಿಯಾಶೀಲತೆ’ ವಿಚಾರದ ಕುರಿತು ಲೇಖಕಿ, ಪ್ರಾಧ್ಯಾಪಕಿ ಡಾ. ಗೀತಾ ವಸಂತ ಮಾತನಾಡಲಿದ್ದಾರೆ. 
ಮೂರನೇ ಗೋಷ್ಠಿ: 12:00ರಿಂದ 1:00 ವರೆಗೆ ನಡೆಯಲಿದ್ದು, ‘ಕನ್ನಡ ಸಾಹಿತ್ಯ ಮತ್ತು ಶಾಸನಗಳು’ ವಿಚಾರದಡಿ ಶಾಸನತಜ್ಞರಾದ ಡಾ.ಸ್ಮಿತಾರೆಡ್ಡಿ ಮಾತನಾಡಲಿದ್ದಾರೆ. 

ಎರಡನೆ ದಿನ: 05-05-2021 ಬುಧವಾರ ಬೆಳಗ್ಗೆ 10 ರಿಂದ ಆರಂಭಗೊಳ್ಳುವ ಮೊದಲ ಗೋಷ್ಠಿ: 11ರ ವರೆಗೆ ನಡೆಯಲಿದ್ದು, ಈ ಗೋಷ್ಠಿಯಲ್ಲಿ ‘ಮಧ್ಯಕಾಲೀನ ಸಾಹಿತ್ಯದ ವೈಶಿಷ್ಟ್ಯ ಮತ್ತು ಸ್ವರೂಪಗಳು’ ಎಂಬ ವಿಚಾರದಡಿ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಲಿದ್ದಾರೆ. 

ಎರಡನೆ ಗೋಷ್ಠಿ: 11ರಿಂದ ಆರಂಭಗೊಳ್ಳಲಿದ್ದು, ‘ಪ್ರಕೃತಿಯ ಬುನಾದಿಯ ಮೇಲೆ ಕನ್ನಡ ಕಲೆ, ಸಂಗೀತ ಮತ್ತು ಸಾಹಿತ್ಯ’ ಎಂಬ ವಿಚಾರದಡಿ ಹಿರಿಯ ಪತ್ರಕರ್ತ ಡಾ. ನಾಗೇಶ ಹೆಗಡೆ ಮಾತನಾಡಲಿದ್ದಾರೆ. 
ಮೂರನೇ ಗೋಷ್ಠಿ: 12ರಿಂದ 1ರವರೆಗೆ ನಡೆಯಲಿದ್ದು, ಕನ್ನಡ ಭಾಷೆ ಮತ್ತು ಭಾಷಾ ವಿಜ್ಞಾನ ವಿಚಾರದ ಕುರಿತು ಪ್ರಾಧ್ಯಾಪಕರಾದ ಡಾ.ಬಿ. ಪ್ರಹ್ಲಾದ ರೆಡ್ಡಿ ಮಾತನಾಡಲಿದ್ದಾರೆ. ಇದೇ ದಿನದ ನಾಲ್ಕನೇ ಗೋಷ್ಠಿ: ಮಧ್ಯಾಹ್ನ 2ರಿಂದ 3ರವರೆಗೆ ನಡೆಯಲಿದ್ದು, ‘ಕನ್ನಡ ಸಮಕಾಲೀನ ಸಾಹಿತ್ಯ’ ಎಂಬ ವಿಚಾರದ ಮೇಲೆ ಕವಿ ಹೆಚ್.ಆರ್. ಸುಜಾತ ಮಾತನಾಡಲಿದ್ದಾರೆ.

ಮೂರನೇ ದಿನ: 06-05-2021 ಗುರವಾರ ಮೊದಲ ಗೋಷ್ಠಿ: ಬೆಳಗ್ಗೆ 10ರಿಂದ 11ರವರೆಗೆ ನಡೆಯಲಿದ್ದು, ‘ಆಫ್ರಿಕನ್ ಸಂಕಥನ ಒಂದು ಅನುಸಂಧಾನ’ ವಿಚಾರದಡಿ ಕಥೆಗಾರ, ಅನುವಾದಕ ಕೇಶವ ಮಳಗಿ ಮಾತನಾಡಲಿದ್ದಾರೆ. 
ಎರಡನೇ ಗೋಷ್ಠಿ: 11ರಿಂದ 12ರವರೆಗೆ ನಡೆಯಲಿದ್ದು ‘ಕನ್ನಡ ರಂಗಭೂಮಿ ಮತ್ತು ಅಧ್ಯಯನ’ ವಿಚಾರದ ಕುರಿತು ಹಿರಿಯ ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ ಮಾತನಾಡಲಿದ್ದಾರೆ. 
ಮೂರನೇ ಗೋಷ್ಠಿ: 12ರಿಂದ 1ರವರೆಗೆ ನಡೆಯಲಿದ್ದು, ‘ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನ’ ವಿಚಾರದ ಕುರಿತು ಇ-ಜ್ಞಾನ ಸಂಪಾದಕರಾದ ಟಿ.ಜಿ. ಶ್ರೀನಿಧಿ ಮಾತನಾಡಲಿದ್ದಾರೆ. 
ನಾಲ್ಕನೇ ಗೋಷ್ಠಿ: ಮಧ್ಯಾಹ್ನ 2ರಿಂದ 3ರವೆಗೆ ನಡೆಯಲಿದ್ದು, ‘ಬಂಡಾಯ ಚಳವಳಿಯ ವಿವಿಧ ಸಂವೇದನೆಗಳು’ ವಿಚಾರದ ಕುರಿತು ಕವಿ ಮತ್ತು ಸಂಸ್ಕೃತಿ ಚಿಂತಕರಾದ ಡಾ. ವಡ್ಡಗೆರೆ ನಾಗರಾಜಯ್ಯನವರು ಮಾತನಾಡಲಿದ್ದಾರೆ. 

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕವಿ ಮತ್ತು ನಾಟಕಕಾರ ಡಾ.ಎಚ್.ಎಸ್. ಶಿವಪ್ರಕಾಶ್ ಭಾಗಿಯಾಗಲಿದ್ದಾರೆ.  

ಈ ಕಾರ್ಯಕ್ರದಲ್ಲಿ ಸುರಾನಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಭಾಹವಹಿಸುವವರಿಗೆ ನೋಂದಣಿಯಾಗುವುದು ಕಡ್ಡಾಯವಾಗಿದ್ದು ನೋಂದಣಿಯ ಲಿಂಕ್ - https://forms.gle/vP85ny78KDSFZELXA

ನೋಂದಣಿ ಶುಲ್ಕದ ವಿವರ: ಪ್ರಾಧ್ಯಾಪಕರಿಗೆ/ಉಪನ್ಯಾಸಕರಿಗೆ / ಶಿಕ್ಷಕರಿಗೆ-ರೂ.200/-
ಸಂಶೋಧನಾ ವಿದ್ಯಾರ್ಥಿಗಳಿಗೆ ರೂ.100/- 

ಹೆಚ್ಚಿನ ಮಾಹಿತಿಗಾಗಿ:  
ಸೂರ್ಯಕೀರ್ತಿ: 9483165038, 8310547540

ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More events