Start Date: 14-05-2022 10:00 AM
Venue: ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ, ಗೋಕಾಕ.
ಗೋಕಾವಿ ಗೆಳೆಯರ ಬಳಗ ಮತ್ತು ತಿರುಪತಿಯ ಬಹುಜನ ಸಾಹಿತ್ಯ ಅಕಾಡೆಮಿ ಜಂಟಿ ಆಶ್ರಯದಲ್ಲಿ ಕಲಾರತ್ನ ನ್ಯಾಷನಲ್ ಅವಾರ್ಡ ಪಡೆದ ಪ್ರಾ. ಜಯಾನಂದ ಮಾದರ ಅವರಿಗೆ ಸನ್ಮಾನ ಮತ್ತು ಜಾನಪದ ಕಲಾವಿದ ಈಶ್ವರಚಂದ್ರ ಎಸ್. ಬೆಟಗೇರಿ 19ನೇ ಸಾಹಿತ್ಯ ಕೃತಿ ʼವಿಷ್ಣು ಭಕ್ತ ಚಂದ್ರಹಾಸʼ ಪುಸ್ತಕದ ಬಿಡುಗಡೆ ಸಮಾರಂಭ ಹಾಗೂ ಬೆಳಗಾವಿ ಸಾಹಿತ್ಯ ಬಳಗದ ಗೋಕಾಕ ತಾಲೂಕು ಘಟಕದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮವು 2022 ಮೇ 14 ಶನಿವಾರದಂದು ಪೂರ್ವಾಹ್ನ 10.00 ಗಂಟೆಗೆ ಬೆಳಗಾವಿಯ ಗೋಕಾಕದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಸಾನಿಧ್ಯ: ಸದ್ಗುರು ಡಾ. ಬಸವರಾಜ ಚೌಗಲಾ (ಶ್ರೀಕೈವಲ್ಯಾಶ್ರಮ, ಮರಡಿಮಠ-ಕೊಣ್ಣೂರ).
ನೇತೃತ್ವ: ವೇದಮೂರ್ತಿ ಬಸವರಾಜ ಹಿರೇಮಠ (ಶ್ರೀಗುರು ಮಹಾದೇವಾಶ್ರಮ, ಕಪರ̧ಟ್ಟಿ ಕಳ್ಳಿಗುದ್ದಿ).
ಅಧ್ಯಕ್ಷತೆ: ಡಾ. ಲಕ್ಷ್ಮಣ ಎಸ್. ಚೌರಿ (ಹಿರಿಯ ಸಾಹಿತಿ, ಕುಡಚಿ).
ಕೃತಿ ಬಿಡುಗಡೆ: ಬಸವರಾಜ ಹಿರೇಮಠ (ಉಪನಿರ್ದೇಶಕ ಹಾಗೂ ನಗರಯೋಜನಾಧಿಕಾರಿ, ಮಹಾನಗರ ಪಾಲಿಕೆ, ಬೆಳಗಾವಿ).
ಪುಸ್ತಕಾವಲೋಕನ: ಪ್ರಾ. ಜಯಾನಂದ ಎಸ್. ಮಾದರ (ಕರ್ನಾಟಕ ಲಲಿತಕಲಾ ಅಕಾಡೆಮಿ, ಸದಸ್ಯ, ಬೆಂಗಳೂರು).
ಲೇಖಕರ ಮಾತು: ಈಶ್ವರಚಂದ್ರ ಎಸ್. ಬೆಟಗೇರಿ (ಹಿರಿಯ ರಂಗಕರ್ಮಿ, ಕರ್ನಾಟಕ ಆಚೀವರ್ ಬುಕ್ಕ ಆಫ್ ರೀಕಾರ್ಡ್ಸ್).
ಮುಖ್ಯ ಅತಿಥಿಗಳು: ಸಂತೋಷ ಯಕ್ಕುಂಡಿ (ಸಂಸ್ಥಾಪಕ, ಅಧ್ಯಕ್ಷ ಭಾರತೀಯ, ಸಂಸ್ಕೃತಿ ವಿದ್ಯಾ ಕೇಂದ್ರ, ಬೆಳವಡಿ – ಸಾಹಿತಿ ಬಳಗ, ಬೆಳಗಾವಿ).
ಡಾ. ಅರುಣ ವಾಸುದೇವ, ಸವತಿಕಾಯಿ (ಯುವ ಚಿಂತಕ, ಬೆಟಗೇರಿ).
ಬಲದೇವ ಸಣ್ಣಕ್ಕಿ (ಅಧ್ಯಕ್ಷ, ಜಾನಪದ ತಜ್ಞ ಡಾ. ನಿಂಗಣ್ಣ ಸಣ್ಣಕ್ಕಿ ಪ್ರತಿಷ್ಠಾನ, ಗೋಕಾಕ).
ಉದ್ದಣ್ಣಾ ಗೋಡೇರ (ಅಧ್ಯಕ್ಷ, ಕನ್ನಡ ಜಾನಪದ ಸಂಸ್ಥೆ, ಗೋಕಾಕ).
ಭಾರತಿ ಬ. ಮದಬಾವಿ (ಅಧ್ಯಕ್ಷ, ಕ.ಸಾ.ಪ, ಗೋಕಾಕ).
ವಿದ್ಯಾ ರೆಡ್ಡಿ (ಯುವ ಲೇಖಕಿ, ಗೋಕಾಕ).
ಬೆಂಗಳೂರಿನ ಸುಚಿತ್ರ ಮತ್ತು ಲಹರಿ ಮ್ಯೂಸಿಕ್ ಅವರ ಜಂಟಿ ಆಶ್ರಯದಲ್ಲಿ ಸುನೀತ ಅನಂತಸ್ವಾಮಿ ಅವರಿಂದ ʼಸುನೀತ ಸಂಜೆʼ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವು ...
ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗದ ಮತ್ತು ದಾವಣಗೆರೆಯ ಮೇ ಸಾಹಿತ್ಯ ಮೇಳ ಬಳಗದ ಸಂಯುಕ್ತಾಶ್ರಯದಲ್ಲಿ 08ನೇ ಮೇ ಸಾಹಿತ್ಯ ಮೇಳ ನಡೆಯಲಿದ್ದ...
©2022 Book Brahma Private Limited.