19ನೇ ಶತಮಾನದ ಶ್ರೇಷ್ಟ ವರ್ಣಚಿತ್ರಕಾರ ‘ವಿನ್ಸೆಂಟ್ ವಾನ್ ಗೋ’

Date: 28-11-2020

Location: .


ಡಚ್ ಚಿತ್ರಕಾರರು ಮಾತ್ರವಲ್ಲ; ವಿಶ್ವ ಚಿತ್ರಕಾರರ ಇತಿಹಾಸದಲ್ಲಿ ವಿನ್ಸೆಂಟ್ ವಾನ್ ಗೋ ಹೆಸರು ಅಜರಾಮರ. ಸಾಧನೆಯ ಹಾದಿಯಲ್ಲಿ ಕೈಚೆಲ್ಲುವ ಮಾತೇ ಇಲ್ಲ ಎಂಬಂತೆ ತಮ್ಮ ಜೀವನದುದ್ದಕ್ಕೂ ಸಂಕಲ್ಪ ತೊಟ್ಟವರಂತೆ ಬದುಕಿ ತೋರಿದ ಶ್ರೇಷ್ಠ ಚಿತ್ರಕಲೆಯ ಸಂತ. ಈತನ ಜೀವನ ಚರಿತ್ರೆಯ ಬಿಂಬವೇ ಎನ್ನಬಹುದಾದ ಹಾಗೂ ಇರ್ವಿಂಗ್ ಸ್ಟೋನ್ ಬರೆದ ಕಾದಂಬರಿ- ‘ಲಸ್ಟ್ ಫಾರ್ ಲೈಫ್’. ವಿನ್ಸೆಂಟ್ ವಾನ್ ಗೋ ಅವರ ಪ್ರಸಿದ್ಧಿಯು ಈ ಕಾದಂಬರಿಯನ್ನು ಶ್ರೇಷ್ಠ ಕೃತಿಗಳಲ್ಲಿ ಒಂದಾಗಿಸಿತು. ವಿನ್ಸೆಂಟ್ ವಾನ್ ಗೋ ಅವರ ಬದುಕು, ಪ್ರೇಮ ವೈಫಲ್ಯ, ವಿಕ್ಷಿಪ್ತ ಮನಸ್ಸು, ದಾರುಣವಾಗಿ ಕೊನೆಗೊಂಡ ಆತನ ಬದುಕು ...ಹೀಗೆ ಲೇಖಕ ಪ್ರಶಾಂತ ಆಡೂರು ಅವರು ತಮ್ಮ e-ಸಂಭಾಷಣೆ ಅಂಕಣದಲ್ಲಿ ಚಿತ್ರಿಸಿದ್ದಾರೆ.

ಏನನ್ನೋ ಸಾಧಿಸುವ ಹಂಬಲದಲ್ಲಿ ಆತುರತೆ ತೋರಿಸಿದಾಗ ಮತ್ತೊಂದು ಧ್ವನಿ, ಮನಸ್ಸು Vincent Van-gogh -

'If you hear a voice within you say ‘you cannot paint,’ then by all means paint, and that voice will be silenced'

'ನಿಮಗೆ ನಿಮ್ಮೊಳಗಿನ ಧ್ವನಿ ನಿನಗೆ ಚಿತ್ರಕಲೆ ಬರುವದಿಲ್ಲ’ ಎಂದು ಹೇಳಿದರೆ, ನೀವು ಖಂಡಿತವಾಗಿಯೂ ಚಿತ್ರಕಲೆ ಮಾಡಲೇ ಬೇಕು, ಆಗ ಆ ಧ್ವನಿ ನಿಶಬ್ದಗೊಳ್ಳುತ್ತದೆ, ಸುಮ್ಮನಾಗುತ್ತದೆ.’

ಈ ಮಾತನ್ನು ಹೇಳಿದವರು ಹತ್ತೊಂಬತ್ತನೇ ಶತಮಾನದ ಅತ್ಯಂತ ಶ್ರೇಷ್ಟ ವರ್ಣಚಿತ್ರಕಾರ ’ವಿನ್ಸೆಂಟ್ ವಾನ್ ಗೋ’

ಬಹುಶಃ ಇದು ಕೇವಲ ಚಿತ್ರಕಲೆಗೆ ಮಾತ್ರ ಸೀಮಿತವಾಗುವ ಉಲ್ಲೇಖವಲ್ಲ, ನಮ್ಮೊಳೊಗಿನ ಮನಸ್ಸು ಏನನ್ನೋ ಸಾಧಿಸುವ, ಮಾಡುವ ಹಂಬಲ, ಆತುರತೆ ತೋರಿಸಿದಾಗ ಮತ್ತೊಂದು ಧ್ವನಿ, ಮನಸ್ಸು ’ಅದು ನಿನಗೆ ಬರುವದಿಲ್ಲ, it is not your cup of tea’ ಎಂದು ಹೇಳುವದು ಸಹಜ. ಆವಾಗ ನಾವು ನಮಗೆ ಬರುವದಿಲ್ಲ ಎನ್ನುವ ಧ್ವನಿಯನ್ನು ಆಲಿಸಿ ನಮ್ಮ ಸೃಜನಶೀಲತೆಯನ್ನು, ನಮ್ಮಲ್ಲಿರುವ ಆ ಅನುರಾಗತೆಯನ್ನು, ಹುಮ್ಮಸ್ಸನ್ನು ಹತ್ತಿಕ್ಕುವ ಪ್ರಯತ್ನ ಪಡುತ್ತವೆ. ಆದರೆ ಮುಂದೊಂದು ದಿನ ನಾನು ಇದನ್ನ ಮಾಡಬಹುದಿತ್ತು, ಇದನ್ನು ನಾನೂ ಸಾಧಿಸ ಬಹುದಾಗಿತ್ತು, ನನ್ನಲ್ಲಿ ಈ ಕಲೆ ಇತ್ತು ಅದನ್ನು ಬೆಳೆಸಲಿಲ್ಲಾ ಎಂಬ ಕೊರಗು ಖಂಡಿತವಾಗಿ ಬರುತ್ತದೆ. ಆವಾಗ ಬಹುಶಃ ಸಮಯ ಮೀರಿರುತ್ತೆ, ನಮ್ಮಲ್ಲಿರುವ ಯಾವುದೇ ಕಲೆಗಳಿಗೆ, ಅದು ಚಿತ್ರಕಲೆಯಾಗಿರಬಹುದು, ಸಂಗೀತದ ಹುಚ್ಚಾಗಿರಬಹುದು, ಛಾಯಾಗ್ರಹಣದ ಹಂಬಲ, ಬರೆಯುವ ಮನಸ್ಸಾಗಿರಬಹುದು ಇವುಗಳು ನಮ್ಮ ಮನಸ್ಸಿನಲ್ಲಿ ಬಡಿಯುತ್ತಿರುವಾಗ ಅವುಗಳ ಧ್ವನಿಗಳಿಗೆ ಓ ಗೊಟ್ಟು ಆ ಹವ್ಯಾಸವನ್ನು ಬೆಳೆಸುವ ಪ್ರಯತ್ನ ಮಾಡಬೇಕು ಎಂಬುದು ನನ್ನ ಅನಿಸಿಕೆ.

ನಮ್ಮೊಳಗಿನ ಒಂದು ಮನಸ್ಸು ’you cant do that’ ಅನ್ನುವದನ್ನು ತಡೆದು, ಹತ್ತಿಕ್ಕಿ ನಾವು ಪ್ರಯತ್ನಿಸುವದರಲ್ಲಿ ತಪ್ಪೇನಿಲ್ಲಾ. It is better to attempt now than regret later. ಮುಂದೊಂದು ದಿನ ನಾನು ಮನಸ್ಸು ಮಾಡಿದ್ದರೆ ಇದನ್ನು ಮಾಡಬಹುದಿತ್ತು ಎಂದು ಪಶ್ಚಾತಾಪ ಪಡುವುದಕ್ಕಿಂತ ಪ್ರಯತ್ನ ಮಾಡುವುದು ಲೇಸು. ಎಷ್ಟೋ ಬಾರಿ ನಮ್ಮ ಒಳಗಿನ ಮನಸ್ಸು ಮಾಡಬಹುದು ಎಂದು ಅನಿಸಿದರೂ ಹೊರಗಿನ ಧ್ವನಿ ಅಂದರೆ ಸಮಾಜ, ನಮ್ಮ ಒಡನಾಡಿಗಳು ’ಇದು ನಿನ್ನ ಕೈಲಾಗುವ ಕೆಲಸವಲ್ಲ’ ಎಂದಾಗ, ಒಮ್ಮೊಮ್ಮೆ ನಮಗೆ ನಾವೇ ಮತ್ತೊಬ್ಬರನ್ನು ಹೋಲಿಸಿ ನಾನು ಅವನಿಗಿಂತ ಚೆನ್ನಾಗಿ ಮಾಡಲಾರೆ, ಬರೆಯಲಾರೆ, ಹಾಡಲಾರೆ ಎಂದು ಅಂದು ಕೊಂಡು, ಆ ಕೆಲಸವನ್ನು ಪ್ರಾರಂಭವೇ ಮಾಡುವುದಿಲ್ಲ. ಇದು ಸಹ ತಪ್ಪು ಎಂದು ನನ್ನ ಅನಿಸಿಕೆ. ನಾವು ನಮಗಾಗಿ, ನಮ್ಮ ವಯಕ್ತಿಕ ಸಂತೋಷಕ್ಕಾಗಿ ಯಾವುದನ್ನು ಮಾಡುವದರಿಂದ ನಮ್ಮ ಮನಸ್ಸಿಗೆ ಖುಷಿ ಸಿಗುತ್ತದೆ ಅದನ್ನು ನಮಗೋಸ್ಕರ ಮಾಡಬೇಕೆ ವಿನಹ ಸಮಾಜಕ್ಕಾಗಿ ಅಲ್ಲ. It is for our own individual happiness, what others think is secondary, primary is 'I think I can do it and I will do it’.

ಇದು ವಿನ್ಸೆಂಟ್ ವಾನ್ ಗೋ ನ ಆ ಒಂದು quote (ಹೇಳಿಕೆ ) ಎಂದು ನನಗೆ ಅನಿಸಿದೆ ವಿಚಾರವನ್ನು ನಿಮ್ಮೊಂದಿಗೆ ಹಂಚಿಗೊಂಡಿದ್ದೇನೆ ಇಷ್ಟೆ. ಇಂದಿನ ನನ್ನ e-ಸಂಭಾಷಣೆಯ ಲೇಖನದ ವಿಷಯ ನಾ ಓದಿದ ಒಂದು ಪುಸ್ತಕ Lust for Life, ಇದು ವಿನ್ಸೆಂಟ್ ವಾನ್ ಗೋ ನ ಜೀವನ ಚರಿತ್ರೆಗೆ ಸಂಬಂಧ ಪಟ್ಟಿದ್ದರಿಂದ ಅವನ ಒಂದು ಉಲ್ಲೇಖದಿಂದ ಈ ಲೇಖನ ಪ್ರಾರಂಭವಾಗಿದೆ.

ಈ Lust for Life ಪುಸ್ತಕವನ್ನು ಬರೆದವರು ಇರ್ವಿಂಗ್ ಸ್ಟೋನ್. ಈ ಪುಸ್ತಕ ವಿನ್ಸೆಂಟ್ ವಾನ್ ಗೋ ನ ಜೀವನ ಚರಿತ್ರೆಯ ಒಂದು ಕಾಲ್ಪನಿಕ ಕಾದಂಬರಿ. ವಿನ್ಸೆಂಟ್ ವಾನ್ ಗೋ ಚಿತ್ರಕಲೆಗಳ ವ್ಯಾಪಾರಸ್ಥನಾಗಿದ್ದ ತನ್ನ ತಮ್ಮ ಥಿಯೋ ವಾನ್ ಗೊ ನಿಗೆ ಬರೆದ ನೂರಾರು ಪತ್ರಗಳೇ ಅವರ ಈ ಕಾದಂಬರಿಗೆ ಮೂಲ ಆಧಾರ, ಆ ಪತ್ರಗಳ ಆಧಾರದ ಮೇಲೆ ಬರೆದ ಈ ಕಾದಂಬರಿ ವಿನ್ಸೆಂಟ್ ವಾನ್ ಗೋ ನ ಸಂಪೂರ್ಣ ಬದುಕನ್ನು ನಮ್ಮ ಕಣ್ಣಿನ ಮುಂದೆ ಕಟ್ಟುವಂತೆ ವರ್ಣಿಸುತ್ತದೆ.

ಪುಸ್ತಕದ ಬಗ್ಗೆ ಮತ್ತು ವಾನ್ ಗೊ ಬಗ್ಗೆ ಮುಂದೆ ಹೋಗುವುದಕ್ಕಿಂತ ಮೊದಲು Lust for Life ಇದರ ಅರ್ಥವನ್ನು ಸ್ವಲ್ಪ ಅವಲೋಕಿಸುವುದು ಸೂಕ್ತ ಎನಿಸುತ್ತದೆ. Lust for Life ಅಂದರೆ A strong desire to live a full and rich life. ಜೀವನವನ್ನು ಅತ್ಯಂತ ಪ್ರೀತಿಯಿಂದ, ಆಶೆಯಿಂದ ಸಂಪೂರ್ಣವಾಗಿ ಬದುಕುವುದು ಮತ್ತು ಜೀವನವನ್ನು ಶ್ರೀಮಂತವಾಗಿ ಬದುಕುವುದು. rich life ಅಂದರೆ ಶ್ರೀಮಂತರ ಬದುಕನ್ನು ಬದುಕುವುದಲ್ಲ, ಇದ್ದ ಜೀವನಕ್ಕೆ ಅರ್ಥತುಂಬಿ, ಪ್ರೀತಿಯಿಂದ ಶ್ರೀಮಂತಗೊಳಿಸುವುದು.

ವಿನ್ಸೆಂಟ್ ವಾನ್ ಗೋ ಒಬ್ಬ ಡಚ್ ಚಿತ್ರಕಾರ. ಜೀವನದಲ್ಲಿ ಹೋರಾಡುತ್ತ, ಜೀವನ ಪರ್ಯಂತ ಹೃದಯ ಭಂಗವನ್ನು ಅನುಭವಿಸುತ್ತ, ಕೌಟುಂಬಿಕ ಅನಿವಾರ್ಯತೆ, ಬದ್ಧತೆಗಳೊಂದಿಗೆ ಜೂಜಾಡುತ್ತ ತನ್ನ ಸೃಜನಶೀಲತೆಯಿಂದ ತಾನೇ ಪೀಡಿತನಾಗಿ plagued by his own creative urge ಕೊನೆಗೆ ಪೇಂಟ್ ಬ್ರಶ್ ಹಿಡಿದ ಮೇಲೆ ಜೀವನದ ಒಂದು ದಿಕ್ಸೂಚಿಯೇ ಬದಲಾಗಿ, ಒಬ್ಬ ವಿಶ್ವ ವಿಖ್ಯಾತ ಕಲಾವಿದನಾಗಿ, ಇಂದಿಗೂ ಅವನ ಚಿತ್ರಗಳು ಪ್ರಸ್ತುತ ಎನ್ನುವ ಮಟ್ಟಿಗೆ ಅಜರಾಮರ ಆದ ವ್ಯಕ್ತಿ. ಅವನೊಬ್ಬ ತತ್ವಜ್ಞಾನಿಯೂ ಹೌದು, ತನ್ನ ಕಲೆಯ ಪ್ರೀತಿಗೆ ಹುತಾತ್ಮನಾದವನು ಹೌದು.

ಜೀವನದ ವಿವಿಧ ಹಂತದಲ್ಲಿ ಅವನಿಗೆ ದೊರೆತ ನಿರಾಶೆ, ನಿರುತ್ಸಾಹ, ಜೀವನದಲ್ಲಿ ಸಹಿಸಿದ ಪೀಡೆ, ಮಾನಸಿಕ ಯಾತನೆ ಇವೆಲ್ಲವನ್ನು ಮೆಟ್ಟಿ ಒಬ್ಬ ಹೆಣಗಾಡುವ struggling ಕಲಾವಿದನಾಗಿ ಪ್ರಾರಂಭಮಾಡಿ ವಿಶ್ವವಿಖ್ಯಾತ ಕಲಾವಿದನಾಗುವವರೆಗೆ ಇರುವ ಕಥೆಯೇ ಲಸ್ಟ ಫಾರ್ ಲೈಫ್.

ಲಸ್ಟ ಫಾರ್ ಲೈಫ್ ಪುಸ್ತಕದಲ್ಲಿ ಇರ್ವಿಂಗ್ ಸ್ಟೋನ್ ಅವರು ಒಟ್ಟಾರೆ ವಾನ್ ಗೋ ಜೀವನದಲ್ಲಿ ಅನುಭವಿಸಿದ ಕಷ್ಟ, ಅವನು ಕಲಾವಿದನಾಗಿ ಹುಟ್ಟಿ ಬೆಳೆದು ಹೇಗೆ ಒಬ್ಬ ಪ್ರಖ್ಯಾತ ಕಲಾವಿದನಾಗಿ ನಿಧನನಾದ ಎಂಬುದನ್ನು ಅತ್ಯಂತ ವರ್ಣನೀಯವಾಗಿ ಬರೆದಿದ್ದಾರೆ. ಆ ಕಾಲದ ಪ್ರಸಿದ್ಧ ಚಿತ್ರಕಾರರಾದ ಪಾಲ್ ಗಾಗಿನ್ ನಂತಹ ಅನೇಕ ಕಲಾವಿದರು ಈ ಕಾದಂಬರಿಯ ಪಾತ್ರದಲ್ಲಿದ್ದಾರೆ. ವಾನ್ ಗೊ ನ ಪ್ರಸಿದ್ದ ಪೇಂಟಿಂಗಗಳಾದ ’ಪೋಟಾಟೊ ಇಟರ್ಸ್’ ’ಸನ್ ಫ್ಲಾವರ್’ ನಂತಹ ಕೃತಿಗಳ ಉಲ್ಲೇಖವು ಇದರಲ್ಲಿದೆ. ಲಸ್ಟ್ ಫಾರ್ ಲೈಫ್ ದಲ್ಲಿ ವಾನ್ ಗೊ ನ ಜೀವನಕ್ಕೆ ಸಂಬಂಧ ಪಟ್ಟ, ಅವನೊಂದಿಗೆ ನೆಂಟಸ್ಥನ ಹೊಂದಿದ ಒಂಬತ್ತು ನಗರಗಳನ್ನು ಭಾಗಗಳಲ್ಲಿ ವರ್ಗೀಕರಿಸಿ ಇಡೀ ಜೀವನ ಚರಿತ್ರೆಯನ್ನು ನಿರೂಪಣೆ ಮಾಡಲಾಗಿದೆ.

ವಿನ್ಸೆಂಟ್ ವಿಲ್ಲೆಮ್ ವಾನ್ ಗೋ (1853-1890) ಒಬ್ಬ ಚಿತ್ರ ಕಲಾವಿದ. ಅವನ ಕಲೆ ವಿಶಿಷ್ಟತೆ ಅವನು ಬಳಸುವ ಗಾಢ ಬಣ್ಣ, ಅದು ಆಧುನಿಕ ಚಿತ್ರಕಲೆಗೆ ಕೊಡುಗೆ ಎಂದರು ತಪ್ಪಾಗಲಾರದು. ಅವನ ಕಲೆಯನ್ನು ಇಂಪ್ರೆಷನಿಸ್ಟ್ ಕಲೆ ಎಂದು ಕರೆಯಲಾಯಿತು. ಯಥಾದೃಷ್ಟಿ ರೂಪಣದಲ್ಲೂ (ಪರ್ಸ್ಪೆಕ್ಟಿವ್) ಅಂಗರಚನಾಶಾಸ್ತ್ರದಲ್ಲೂ (ಅನಾಟಮಿ) ವಾನ್ ಗೊ ಕಲೆಯನ್ನು ರಚಿಸಿದ.

ಕೇವಲ ಒಂದು ದಶಕದಲ್ಲಿ ಎರಡೂ ಸಾವಿರಕ್ಕೂ ಅದರಲ್ಲು ಸಾವಿರಷ್ಟು ಕೃತಿಗಳನ್ನು ಕೇವಲ ಎರಡು ವರ್ಷದಲ್ಲಿ ರಚಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ. ಈತನ ಪ್ರಖ್ಯಾತ ಕಲಾಕೃತಿಗಳು ಸಾರೋ (1882) ಮತ್ತು ಸೀನ್ ಪೋಸಿಂಗ್ಗಳಲ್ಲಿ (1883) ದಿ ಪೊಟಾಟೋ ಈಟರ್ಸ್ (1885) ಸನ್‍ಫ್ಲವರ್ (1888), ದಿ ಚೇರ್ ಅಂಡ್ ದಿ ಪೈಪ್ (1888) ರವೀನ್ (1889) ಬೂಟ್ಸ್‌....ಹೀಗೆ ಅನೇಕ ವಿಶ್ವ ವಿಖ್ಯಾತ ಕೃತಿ ರಚಿಸಿದ ಕೀರ್ತಿ ವಿನ್ಸೆಂಟ್ ವಾನ್ ಗೊ ಗೇ ಸಲ್ಲುತ್ತದೆ.

ಇನ್ನು ವಾನ್ ಗೊ ನ ವೈಯಕ್ತಿಕ ಜೀವನ ವರ್ಣಮಯವಾಗಿರಲಿಲ್ಲ. ಅವನು ಜೀವನದಲ್ಲಿ ಮದುವೆ ಆಗಲಿಲ್ಲ ಮಕ್ಕಳು ಇರಲಿಲ್ಲ. (ಮಕ್ಕಳು ಆಗಬೇಕೆಂದರೆ ಮದುವೆ ಕಡ್ಡಾಯವಲ್ಲ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಬರದಿದ್ದು) ಅನೇಕ ಪ್ರೇಮ ಪಾಶಗಳಲ್ಲಿ, ವ್ಯಾಮೋಹಗಳಲ್ಲಿ ಸಿಕ್ಕು ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ವಾನ್ ಗೊ.

ಸೋದರ ಸಂಬಂಧಿಯೊಬ್ಬಳಲ್ಲಿ ವ್ಯಾಮೋಹಗೊಂಡು ವಿಫಲನಾದ. ದಿ ಹೇಗ್ ಪಟ್ಟಣಕ್ಕೆ ಬಂದು ಕ್ರಿಶ್ಚನ್ ಎಂಬ ವೇಶ್ಯೆಯ ಸಂಗ ಮಾಡಿ ಮದುವೆಯಾಗಲು ಬಯಸಿ ಕೊನೆಗೆ ಆಕೆಯ ಶೀಲದ ಬಗ್ಗೆ ಶಂಕೆಗೊಂಡು ಅವಳನ್ನು ತ್ಯಜಿಸಿದ. ಅವ್ಯವಸ್ಥಿತ ಕಾಮುಕ ಜೀವನದಿಂದಾಗಿ ಈತನ ದೇಹಸ್ಥಿತಿ ಕ್ರಮೇಣ ಕ್ಷೀಣಿಸುತ್ತಿತ್ತು. ಔಷಧೋಪಚಾರಗಳು ನಡೆದು ಚೇತರಿಸಿಕೊಳ್ಳುವ ಸಮಯದಲ್ಲೇ ಮತ್ತೊಬ್ಬ ಮಹಿಳೆಯ ಪ್ರೇಮಪಾಶ ಈತನ ಕೊರಳಿಗೆ ಬಿತ್ತು. ಆದರೆ ಆಕೆಯನ್ನು ಈತ ಪರಿಗ್ರಹಿಸಲಿಲ್ಲ. ಇಷ್ಟಾದರೂ ಈತನ ಚಿತ್ರಕಲಾ ಹವ್ಯಾಸ ಒಂದು ಕಡೆ ಅವ್ಯಾಹತವಾಗಿ ಮುಂದುವರಿದಿತ್ತು.ವಿಶ್ವದ ಇನ್ನೊಬ್ಬ ಪ್ರಖ್ಯಾತ ಕಲಾಕಾರ ಪಾಲ್ ಗಾಗಿನ್ ಜೊತೆಗೆ ಇವನ ಸ್ನೇಹವಿತ್ತು, ಇಬ್ಬರು ಕಲೆಗೆ ಸಂಬಂಧ ಪಟ್ಟ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಲ್ಲಿ ಆಗಾಗ ವೈಮನಸ್ಸು ಸಹಿತ ಬರುತ್ತಿತು.

ಒಂದು ಮೂಲದ ಪ್ರಕಾರ, ಅವರಿಬ್ಬರ ಸ್ನೇಹ ಯಾವ ಮಟ್ಟಿಗೆ ಬೆಳೆದಿತ್ತು ಮತ್ತು ವೈಮನಸ್ಸು ಬಂದಾಗ ಯಾವ ವಿಕೋಪಕ್ಕೆ ಹೋಗುತ್ತಿತ್ತು ಎಂದು ಹೇಳಬೇಕೆಂದರೆ ಒಮ್ಮೆ ಪಾಲ್ ಗಾಗಿನ್ ಜೊತೆ ಜಗಳವಾದಾಗ ಉನ್ಮಾದದಲ್ಲಿ ವಿನ್ಸೆಂಟ್ ವಾನ್ ಗೊ ತನ್ನ ಕಿವಿಯನ್ನೇ ಕತ್ತರಿಸಿದನೆಂದು ಮುಂದೆ ಅದನ್ನು ರಾಚೆಲ್ ಎಂಬ ವೈಶ್ಯೆಗೆ ತನ್ನ ಪ್ರೀತಿಯ ಕುರುಹಾಗಿ ಕ್ರಿಸ್ಮಸ್ ಹಬ್ಬಕ್ಕೆ ಕಾಣಿಕೆ ಕೊಟ್ಟನೆಂದು ಹೇಳಲಾಗುತ್ತದೆ.

ಇನ್ನೊಂದು ಮೂಲದ ಪ್ರಕಾರ, ತರುಣಿಯೊಬ್ಬಳು ಇವನನ್ನು ಚಹದ ಅಂಗಡಿಯಲ್ಲಿ ಭೇಟಿಯಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿ ತನಗೇನಾದರೂ ಬಹುಮಾನವನ್ನು ಕೊಡಲೇಬೇಕೆಂದು ಇವನನ್ನು ಆಗಾಗ ಒತ್ತಾಯ ಮಾಡುತ್ತಿದ್ದು, ಏನೂ ಇಲ್ಲದಿದ್ದರೆ ನಿನ್ನ ಕಿವಿಯನ್ನಾದರೂ ಕೊಡಬೇಕೆಂದು ಚೇಷ್ಟೆ ಮಾಡುತ್ತಿದ್ದಳು. ಮುಂದೆ ಅವಳು ಕ್ರಿಸ್ಮಸ್ ಹಬ್ಬಕ್ಕೆ ತನಗೆ ಬಂದ ಉಡುಗೊರೆಯೊಂದನ್ನು ತೆಗೆದು ನೋಡಿದಾಗ ಅದರಲ್ಲಿ ವಾನ್ ಗೊ ನ ಕಿವಿ ಇತ್ತು.

ಇದರಲ್ಲಿ ಯಾವ ಕಥೆ ನಿಜ ಎಂಬುದು ಮುಖ್ಯವಲ್ಲ. ಉನ್ಮಾದದಲ್ಲಿ, ಹುಚ್ಚುತನದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಈ ರೀತಿ ವರ್ತಿಸುವದು ವಾನ್ ಗೊ ನ ಸ್ವಭಾವವಾಗಿತ್ತು.ಕಿವಿ ಕತ್ತರಿಸಿ ಕೊಟ್ಟು ನಂತರ ತಾನೇ ಸ್ವತಃ ತನ್ನ ಎರಡು ಚಿತ್ರಣಗಳನ್ನು ರೂಪಿಸಿ, ಕತ್ತರಿಸಿಹೋದ ಕಿವಿಯ ಜಾಗದಲ್ಲಿ ಕಟ್ಟುಕಟ್ಟಿ, ತಲೆಯ ಮೇಲೆ ಟೋಪಿ, ಬಾಯಲ್ಲಿ ಸಿಗರೇಟ್ ಇಟ್ಟ ಕಲಾವಿದ ವಾನ್ ಗೊ.

ಬುದ್ಧಿಭ್ರಮಣೆ ಮತ್ತು ಮನೋವಿಕಾರಗಳಿಂದ ನರಳುತ್ತಿದ್ದ ವಾನ್ ಗೊ ಕೊನೆಗೆ ಮಾನಸಿಕರೋಗಿಗಳ ಆಸ್ಪತ್ರೆಯಲ್ಲಿಯೂ ಕಾಲ ಕಳೆದ, ಅಲ್ಲಿಯೂ ಅನೇಕ ಚಿತ್ರಕೃತಿಯನ್ನು ಸೃಷ್ಟಿಸಿದ. ಸತತ ಮಾನಸಿಕ ಯಾತನೆಯಿಂದ ಬಳಲುತ್ತಿದ್ದ ವಾನ್ ಗೊ, ಕೊನೆಗೆ ಒಂದು ದಿನ ತನ್ನ ಮೂವತ್ತೇಳನೇ ವಯಸ್ಸಿನಲ್ಲಿ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ. ಪ್ರಾಣಹತ್ಯೆ ಮಾಡಿಕೊಂಡದ್ದು ತಾನೇ ರಚಿಸಿದ ಕೃತಿಯೊಂದರ ಎದುರಿನಲ್ಲಿ.

ಲಸ್ಟ ಫಾರ್ ಲೈಫ್ ನಲ್ಲಿ ವಿನ್ಸೆಂಟ್ ನ ಸಾವಿನ ಬಗ್ಗೆ; "Vincent is not dead. He will never die. His love, his genius, the great beauty he has created will go on forever, enriching the world... He was a colossus... a great painter... a great philosopher... a martyr to his love of art "

'ವಿನ್ಸೆಂಟ್ ಸತ್ತಿಲ್ಲ, ಸಾಯುವುದು ಇಲ್ಲ, ಅವನ ಪ್ರೀತಿ, ಅವನ ಪ್ರತಿಭೆ ಅವನು ರಚಿಸಿದ ಸುಂದರ ಕೃತಿಗಳು ಎಂದೆಂದಿಗೂ ಇರುತ್ತವೆ ಮತ್ತು ಜಗತ್ತನ್ನು ಉತ್ಕೃಷ್ಟಗೊಳಿಸುತ್ತವೆ. ಅವನೊಬ್ಬ ಅಪಾರ ಗಾತ್ರದ ಕಲಾವಿದ, ತತ್ವಜ್ಞಾನಿ, ತನ್ನ ಕಲೆಯ ಪ್ರೀತಿಗೆ ಹುತಾತ್ಮನಾದವನು’ ಎಂದು ಬಣ್ಣಿಸಿದ್ದಾರೆ.

ಇದು ವಿನ್ಸೆಂಟ್ ವಾನ್ ಗೊ ಎಂಬ ಮಹಾಕಲಾವಿದನ ಕುರಿತು ಲಸ್ಟ್ ಫಾರ್ ಲೈಫ್ ಪುಸ್ತಕದ ಮೂಲದಿಂದ ಆಯ್ದ ಸಂಕ್ಷಿಪ್ತ ಜೀವನ ಚರಿತ್ರೆ. ವಾನ್ ಗೊ ನ ಹೇಳಿಕೆಗಳಲ್ಲಿ ಒಂದಾಗ ’Exaggerate the essential, leave the obvious vague’ ಅಂದರೆ ಯಾವುದು ಅವಶ್ಯ ಇದೆಯೋ ಅದನ್ನು ಉತ್ಪ್ರೇಕ್ಷಿಸು, ಸುಲಭವಾಗಿ ಕಾಣುವ ಅಸ್ಪಷ್ಟತೆಯನ್ನ, ಸಂದಿಗ್ಢತೆಯನ್ನು ಬಿಟ್ಟು ಬಿಡು ಎಂಬಂತೆ ನಾವು ಅವನ ಜೀವನದ ಸಾರಭೂತವಾದ, ಅವಶ್ಯವಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನಮ್ಮ ಬದುಕನ್ನು ವರ್ಣರಂಜಿತ ಮಾಡಬೇಕು ಎಂಬುದು ನನ್ನ ಅಭಿಪ್ರಾಯ.

ಈ ಅಂಕಣದ ಹಿಂದಿನ ಬರೆಹ

ವ್ಯಾಸೋಚಿಷ್ಟಮ್ ಜಗತ್ ಸರ್ವಂ....

ರಮಣ ಮಹರ್ಷಿಗಳೊಂದಿಗೆ ಸಂಭಾಷಣೆ....

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...