ಬೊಗಸೆಯಲ್ಲಿನ ಈ ಕಥೆಗಳು, ಆಗಸವನ್ನು ಆವರಿಸಬಲ್ಲುದು


ಆಶಾ ರಘು ಅವರ ಇಲ್ಲಿನ ರಚನೆಗಳು ತಾತ್ವಿಕವಾದ ಸಣ್ಣ ಸಣ್ಣ ಟಿಪ್ಪಣಿಗಳ ಹಾಗೆ ಇದೆ. ಕಾದಂಬರಿಗಾರ್ತಿಯಾದ ಆಶಾರವರು ತಮ್ಮ ನಾಳಿನ ದೀರ್ಘ ಕಥನಗಳಿಗೆ ಡೈರಿಯಲ್ಲಿ ಬರೆದಿಟ್ಟುಕೊಂಡ ಅಕ್ಷರ ರೇಖೆಗಳ ಹಾಗಿವೆ. ಎನ್ನುತ್ತಾರೆ ಲೇಖಕ ವಾಸುದೇವ ನಾಡಿಗ್. ಅವರು ಲೇಖಕಿ ಆಶಾ ರಘು ಬರೆದ 'ಬೊಗಸೆಯಲ್ಲಿ ಕಥೆಗಳು' ಕಥಾಸಂಕಲನಕ್ಕೆ ಬರೆದ ಬೆನ್ನುಡಿ..

ಕಥೆಗಳ ಹೀಗೆ ಕಲಾವಿದ ಒಂದು ಪಾರ್ಶ್ವದ ಮುಖವನ್ನು ಮಾತ್ರ ಚಿತ್ರಿಸಿದ ಹಾಗೆ. ಇನ್ನು ಉಳಿದ ಹತ್ತಾರು ಪಾರ್ಶ್ವಗಳು ಕಲ್ಪನೆ, ಚಿಂತನೆ, ಅನುಭವಗಳ ಮೂಲಕ ಪೂರ್ಣಗೊಳಿಸಿಕೊಳ್ಳಲು ಸಹೃದಯ ಪ್ರಯತ್ನ ಮಾಡಬೇಕು. ಇದೊಂದು ಸವಾಲು ಮತ್ತು ರೋಮಾಂಚಕ ಕೂಡಾ. ಕಥೆಗಳ ಗೆಲುವೂ ಕೂಡಾ ಇದೇ ಆಗಿದೆ. ಆಶಾ ರಘು ಅವರ ಇಲ್ಲಿನ ರಚನೆಗಳು ತಾತ್ವಿಕವಾದ ಸಣ್ಣ ಸಣ್ಣ ಟಿಪ್ಪಣಿಗಳ ಹಾಗೆ ಇದೆ. ಕಾದಂಬರಿಗಾರ್ತಿಯಾದ ಆಶಾರವರು ತಮ್ಮ ನಾಳಿನ ದೀರ್ಘ ಕಥನಗಳಿಗೆ ಡೈರಿಯಲ್ಲಿ ಬರೆದಿಟ್ಟುಕೊಂಡ ಅಕ್ಷರ ರೇಖೆಗಳ ಹಾಗಿವೆ.

ಹೊಗೆಯ ಮೂಲ, ಗುಜರಿಗೆ ಬಿದ್ದ ಗಡಿಯಾರ. ಮುದುಕನ ನಶ್ಯದ ಡಬ್ಬಿ, ತತ್ವಜ್ಞಾನಿಯ ತಣ್ಣನೆಯ ಸಾವು ಟೀಚರ್ ಒಬ್ಬಳ ತುಂಡು ಯೂನಿಫಾರ್ಮ, ರಗ್ಗು ಮತ್ತೆ ಮರಳಲಿಲ್ಲ ಇತ್ಯಾದಿ ಎಲ್ಲವೂ ತಾತ್ವಿಕತೆಯಲ್ಲಿ ಭಾರವಾಗಿದೆ. ಬವಾಸುದೇವನಾಡಿಗ್ಹುತೇಕ ಕಥೆಗಳಲ್ಲಿ ತಣ್ಣನೆಯ ವಿಷಾದ ಮತ್ತು ಗೆರೆಯೆಳೆಯಲಾಗದ ನೋವಿನ ತಂತು ಮಿಡಿಯುತ್ತದೆ. ಈ ಇಂಥ ಸ್ಥಾಯಿಭಾವವೇ ಎಲ್ಲ ಬಹುತೇಕರ ಸೃಜನಶೀಲಬರಹಗಳ ಮೂಲವಾಗಿದೆ.

ಬೊಗಸೆಯಲ್ಲಿನ ಈ ಕಥೆಗಳು ಬೊಗಸೆ ಗಾತ್ರದಲ್ಲೇ ಮುದುಡಿ ಕೂತಿದ್ದರೂ ಕೂಡಾ ಬಿಡಿಸಿ ರೆಕ್ಕೆ ಹಚ್ಚಲಿಕ್ಕೆ ಹೋದರೆ ಆಗಸವನ್ನು ಆವರಿಸಬಲ್ಲುದು. ಇದೇ ಇದರ ಶಕ್ತಿ ಕೂಡಾ. 'ಆವರ್ತ ದಂತಹ ಅವಿಸ್ಮರಣೀಯ ಮಹತ್ಕೃತಿ ಕೊಟ್ಟ ಆಶಾ ರಘು ಅವರ ಸೃಜನಶೀಲ ಬರಹದ ಮುನ್ನೋಟದ ಹಾಗೆ ಹತ್ತು ಹಲವು ಬಿಂಬಗಳು ಇಲ್ಲಿ ಇವೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...