ಕಾಶಿಯಷ್ಟೇ ವಿವರವಾಗಿ ಕುಂದಾಪುರವನ್ನು ಕೊಂಚ ವಿಶ್ಲೇಷಿಸಿದ್ದರೆ ಚೆಂದವಿರುತ್ತಿತ್ತು


"ತಾಯಿ ಹಾಗೂ ಪ್ರೀತಿಸಿದ ಹುಡುಗಿ ಅಚಾನಕ್ ಮಾಯವಾದ ನೋವಿನಲ್ಲಿ ಬೆಂದ ನಾಯಕ, ಸಾವಿನ ಸುಳಿಗೆ ಒಡ್ಡಿಕೊಳ್ಳುವ ತೀರ್ಮಾನ ಮಾಡಿ ಕುಂದಾಪುರದ ಫ್ಲೈ ಓವರ್ ಬಳಿ ಶುರು ಆಗುವ ಕಥೆ ಹೇಗೆ ತಿರುವು ತೆಗೆದುಕೊಳ್ಳುತ್ತಾ ಜೊತೆಗೆ ಹಳೆಯ ನೆನಪು ಬಿಚ್ಚಿಕೊಳ್ಳುತ್ತಾ ಕಾಶಿಯನ್ನು ತಲುಪುತ್ತದೆ ಎನ್ನುವುದು ಕಥೆಯ ಎಳೆ," ಎನ್ನುತ್ತಾರೆ ಕಾವ್ಯ ವನಗೂರು. ಅವರು ರವೀಂದ್ರ ಮುದ್ದಿ ಅವರ "ಗಾಡ್ is not ರೀಚಬಲ್" ಕೃತಿ ಕುರಿತು ಬರೆದ ಅನಿಸಿಕೆ.

ದೇವರು ಮತ್ತು ಸಂಬಂಧಗಳ ನಡುವಿನ ಮೌಲ್ಯಗಳನ್ನು ಬೆರೆಸಿ ಹೆಣೆದ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿ.

ಮೊದಲಿಗೆ ಸೆಳೆದದ್ದು ಚೆಂದನೆಯ ಮುಖಪುಟ ಹಾಗೂ ಅಚ್ಚುಕಟ್ಟಾಗಿ ಪುಸ್ತಕ ಪ್ರಿಂಟಾದ ರೀತಿ. ಒಂದೆರಡು ಪುಟಗಳ ತೆರೆದರೆ ಸಿಗುವ 'ಲೇಖಕರ ವರಸೆ' ಎನ್ನುವ ಲೇಖಕರ ಕವಿತೆಯಂತೆನಿಸುವ ಮಾತುಗಳು.

ತಾಯಿ ಹಾಗೂ ಪ್ರೀತಿಸಿದ ಹುಡುಗಿ ಅಚಾನಕ್ ಮಾಯವಾದ ನೋವಿನಲ್ಲಿ ಬೆಂದ ನಾಯಕ, ಸಾವಿನ ಸುಳಿಗೆ ಒಡ್ಡಿಕೊಳ್ಳುವ ತೀರ್ಮಾನ ಮಾಡಿ ಕುಂದಾಪುರದ ಫ್ಲೈ ಓವರ್ ಬಳಿ ಶುರು ಆಗುವ ಕಥೆ ಹೇಗೆ ತಿರುವು ತೆಗೆದುಕೊಳ್ಳುತ್ತಾ ಜೊತೆಗೆ ಹಳೆಯ ನೆನಪು ಬಿಚ್ಚಿಕೊಳ್ಳುತ್ತಾ ಕಾಶಿಯನ್ನು ತಲುಪುತ್ತದೆ ಎನ್ನುವುದು ಕಥೆಯ ಎಳೆ.

ಕಷ್ಟಗಳು ಹೆಗಲೇರಿದಾಗ ದೇವರಲ್ಲಿ ಮೊರೆಯಿಡದವರಿಲ್ಲ. ದೇವರೆನ್ನುವವನೆ ಇಲ್ಲ ಎನ್ನುವ ನಾಸ್ತಿಕ ಕೂಡ ಒಂದಲ್ಲ ಒಂದು ಗಳಿಗೆಗೆ ಯಾವ ರೂಪದಲ್ಲಾದರೂ ಬೇಡಿಯೇ ಇರುತ್ತಾನೆ ಹಾಗೂ ದೇವರಲ್ಲದ ಯಾರೋ ದೇವರಂತೆ ಬಂದು ನೆರವಿಗೂ ನಿಂತಿರುತ್ತಾರೆ. ಇಲ್ಲಿನ ಕಥಾನಾಯಕ ಕೂಡ ತಾನು ದೇವರೆಂದು ನಂಬುವ ತಾಯಿಯನ್ನು ಹುಡುಕುತ್ತಾ ಕೊನೆಗೆ ಕಾಶಿಗೆ ಹೋಗಿ ತಾಯಿಯಂತಹ ಅಹಲ್ಯೆ ಜೊತೆಗೆ ಹಿಂದಿರುಗುತ್ತಾನೆ.

ಕುಂದಾಪುರದಿಂದ ಕಾಶಿಯವರೆಗೂ ವಿವರಿಸುವ ರೀತಿಯಲ್ಲಿ ಅಲ್ಲಿನ ಊರು ಅಂಗಡಿ, ಜಾಗಗಳ ಹೆಸರುಗಳನ್ನು ಗುರುತು ಮಾಡಿಕೊಂಡು ಕಥೆ ಹೆಣೆದಿರುವುದು ರೋಚಕವೆನಿಸುತ್ತದೆ. ಜೊತೆಗೆ ಲೇಖಕರ ಶ್ರಮ ಎದ್ದು ಕಾಣುತ್ತದೆ. ಕಾಶಿಯಷ್ಟೇ ವಿವರವಾಗಿ ಕುಂದಾಪುರವನ್ನು ಕೊಂಚ ವಿಶ್ಲೇಷಿಸಿದ್ದರೆ ಇನ್ನೂ ಚೆಂದವಿರುತ್ತಿತ್ತು ಎನ್ನುವುದು ನನ್ನನಿಸಿಕೆ.

ಮುಕ್ತಿ ಭವನ/ಸಾವಿನ ಬಂಗಲೆ ಬಗೆಗೆ ಇನ್ನೊಂದಷ್ಟು ಮಾಹಿತಿ ಓದುಗನಿಗೆ ಬೇಕಿತ್ತು ಅನಿಸಿತು. ಆ ಸ್ಥಳಕ್ಕೆ ಹೇಗೆ ಸೇರಿಸಿಕೊಳ್ಳಲಾಗುತ್ತದೆ, ಸೇರಿಕೊಂಡ ನಂತರದಲ್ಲಿ ಅಲ್ಲಾಗುವ ಕ್ರಮಗಳೇನು. ಹದಿನೈದು ದಿನದಲ್ಲಿ ಸಾಯದಿದ್ದರೆ ಅನ್ನುವ ಕಡೆ ಆ ಹದಿನೈದು ದಿನಗಳ ಅವರ ದಿನಚರಿ ಏನು, ಊಟ ನಿದ್ದೆ ಇರುವುದಿಲ್ಲವೋ ಇರುವವೋ ಎನ್ನುವ ಪ್ರಶ್ನೆಗಳೆಲ್ಲ ಆ ಪುಟಗಳನ್ನು ಓದುವಾಗ ಹಾದು ಹೋದವು.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...