ಎಂ. ವ್ಯಾಸರ ಜೀವನ ಚಿತ್ರವನ್ನು ಕಟ್ಟಿಕೊಟ್ಟಿರುವ ಕೃತಿ ಅರ್ಧ ಕಥಾನಕ


‘ಅರ್ಧ ಕಥಾನಕ’ ಓದಿದೆ. ತುಂಬ ಚೆನ್ನಾಗಿದೆ. ಇಷ್ಟು ಒಳ್ಳೆಯ ಜೀವನ ಚಿತ್ರ ಕನ್ನಡದಲ್ಲಿ ಓದಿ ಬಹಳ ಕಾಲವಾಗಿತ್ತು. ವ್ಯಾಸರ ವ್ಯಕ್ತಿತ್ವ ಹೀಗೆ ಗೊತ್ತಿರಲಿಲ್ಲ. ಓದುತ್ತ ನಾನೂ ವ್ಯಾಸರ ಮನೆಯೊಳಗೇ ಅವರು ಯಾರಿಗೂ ಕಾಣದ ಹಾಗೆ ಅದೃಶ್ಯವಾಗಿದ್ದುಕೊಂಡು ಎಲ್ಲ ನೋಡುತ್ತಿದ್ದೇನೆ, ಕೇಳುತ್ತಿದ್ದೇನೆ ಅನ್ನಿಸಿತು. ನಿಮ್ಮ ನಿರೂಪಣೆ ಕಾದಂಬರಿಯನ್ನು ಓದಿದ ಅನುಭವ ನೀಡುತ್ತದೆ. ವ್ಯಾಸರು ಮಾತ್ರವಲ್ಲದೇ ಅಜ್ಜ, ಅಜ್ಜಿ ಇಂಥ ಪಾತ್ರಗಳೂ, ಕಾಸರಗೋಡಿನ ಪ್ರದೇಶದ ದಿನ ನಿತ್ಯದ ಬದುಕಿನ ಚಿತ್ರಣವೂ, ಅಲ್ಲಿನ ಬೇಸಾಯದ ಕ್ರಮದಂಥ ವಿವರಗಳೂ ಒಳ್ಳೆಯ ಕಾದಂಬರಿಯೊಂದರಲ್ಲಿ ಬರುವμÉ್ಟೀ ಶಕ್ತವಾಗಿವೆ. ‘ಅರ್ಧ ಕಥಾನಕ’ ಓದುತ್ತ, ವಿಶೇಷವಾಗಿ ಅಲ್ಲಿ ಬರುವ ಪಾಶ್ಚಾತ್ಯ ಲೇಖಕರ, ಸಿನಿಮಾಗಳ, ರೇಡಿಯೋದ ಪ್ರಸ್ತಾಪ ಓದುತ್ತ, ನನ್ನ ಎಳೆ ಹರೆಯದ 1960ರ ದಶಕದಲ್ಲಿ ಹೈಸ್ಕೂಲು ಓದುತ್ತ ಬದುಕಿದ್ದ ಕಾಲ, ಊರು ಬೇರೆಯಾದರೂ ಕಾಲ ಅದೇ, ಮತ್ತೆ ಮನಸ್ಸಿನಲ್ಲೇ ರೂಪು ತಳೆಯಿತು. 

ನಾವು ಏನನ್ನು ವ್ಯಕ್ತ ಮಾಡುತ್ತೇವೋ ಅμÉ್ಟೀ ನಮ್ಮ ವ್ಯಕ್ತಿತ್ವ ಅಲ್ಲವೇ. ವ್ಯಾಸರು ಕೂಡ ಅವರ ಕಥೆಗಳಲ್ಲಿ ವ್ಯಕ್ತ ಪಡಿಸಿದ್ದಕ್ಕಿಂತ ಬೇರೆಯಾಗಿದ್ದರು ಅನ್ನುವುದು ಗೊತ್ತಾಗುತ್ತದೆ. ಹಾಗೆಯೇ ಅವರು ತಮ್ಮ ಪತ್ನಿ, ಮಕ್ಕಳು, ಬಂಧು, ನಂಟರ ಜೊತೆಯ ಒಡನಾಟದಲ್ಲಿ ‘ವ್ಯಕ್ತ’ಗೊಂಡದ್ದಕ್ಕಿಂತ ವ್ಯಕ್ತವಾಗದೇ ಉಳಿದದ್ದೇ ಹೆಚ್ಚು ಅಂತಲೇ ಅನ್ನಿಸುತ್ತದೆ. 

ವ್ಯಾಸರ ಮಗ ತೇಜಸ್ವಿಯವರು ಕಂಡದ್ದನ್ನು ಅವರ ಮಾತಿನಲ್ಲೆ ಅನ್ನುವ ಹಾಗೆ ನೀವು ನಿರೂಪಿಸಿರುವುದು ತುಂಬ ಕುತೂಹಲದ ಪ್ರಯೋಗವಾಗಿಯೂ ಕಾಣುತ್ತದೆ. ಇದು ವ್ಯಕ್ತಿತ್ವದ ನಿರೂಪಣೆಯ ನಿರೂಪಣೆ. ಮಗಳು ಕಂಡ ಕುವೆಂಪು ರಚನೆಯμÉ್ಟೀ ಮುಖ್ಯವಾದ ರಚನೆ. ಇಲ್ಲವಾದ ವ್ಯಕ್ತಿಯ ನೆನಪಿನ ನಿರೂಪಣೆಯ ನಿರೂಪಣೆ. ಅಂದರೆ ತುಂಬ ಸೂಕ್ಷ್ಮವಾಗಿ ಮನುಷ್ಯ ಗ್ರಹಿಕೆಗೆ ಇರುವ ಫಿಲ್ಟರ್‍ಗಳನ್ನು ಈ ಕೃತಿ ಸೂಚಿಸುತ್ತಿದೆ. 


ಓ.ಎಲ್.ನಾಗಭೂಷಣಸ್ವಾಮಿ

MORE FEATURES

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...