ಮಕ್ಕಳಿಗೆಂದು ಕವಿತೆಗಳನ್ನು ಬರೆಯುವುದೊಂದು ಉಲ್ಲಾಸದ ಸಂಗತಿ


ಕಾರ್ಯಕ್ರಮವೊಂದರಲ್ಲಿ ಸಿಕ್ಕ ಹಿರಿಯರು ತಮ್ಮ ಮೊಮ್ಮಗನಿಂದ ನನ್ನ ಹಿಂದಿನ ಸಂಕಲನದ ಕೆಲವು ಪದ್ಯಗಳನ್ನು ಹೇಳಿಸಿದ್ದರು. ರಾಗ ಹಚ್ಚಿ ದೂರವಾಣಿಯಲ್ಲಿ ಹಾಡಿ ಹೇಳಿದ, ಮಕ್ಕಳಿಗೂ ಕಲಿಸುವುದಾಗಿ ಅನುಮತಿ ಪಡೆದ ಬೇರೆ ಬೇರೆ ಊರುಗಳ ಶಿಕ್ಷಕಿಯರಿದ್ದಾರೆ” ಎನ್ನುತ್ತಾರೆ ಕವಿ ಚಿಂತಾಮಣಿ ಕೊಡ್ಲೆಕೆರೆ ಇವರು ತಮ್ಮ ʻಓಕೆ ಮೇಕೆ ಪುಸ್ತಕʼ ದಲ್ಲಿ ಮೊದಲ ಮಾತು ಶೀರ್ಷಿರ್ಷೆಕೆಯಡಿ ಬರೆದ ಸಾಲುಗಳು ನಿಮ್ಮ ಓದಿಗಾಗಿ...

ಮಕ್ಕಳಿಗೆಂದು ಕವಿತೆಗಳನ್ನು ಬರೆಯುವುದೊಂದು ಉಲ್ಲಾಸದ ಸಂಗತಿ. ಕಳೆದ ಅನೇಕ ವರ್ಷಗಳಿಂದ ಇದನ್ನು ನಡೆಸಿಕೊಂಡು ಬಂದಿದ್ದೇನೆ. ಈ ಪದ್ಯಗಳನ್ನು ಕಿರಿಯರೂ, ಹಿರಿಯರೂ ಮೆಚ್ಚಿ ಮಾತಾಡಿರುವುದು ಇನ್ನಷ್ಟು ಸಂತಸದ ಸಮಾಚಾರ. ಕಾರ್ಯಕ್ರಮವೊಂದರಲ್ಲಿ ಸಿಕ್ಕ ಹಿರಿಯರು ತಮ್ಮ ಮೊಮ್ಮಗನಿಂದ ನನ್ನ ಹಿಂದಿನ ಸಂಕಲನದ ಕೆಲವು ಪದ್ಯಗಳನ್ನು ಹೇಳಿಸಿದ್ದರು. ರಾಗ ಹಚ್ಚಿ ದೂರವಾಣಿಯಲ್ಲಿ ಹಾಡಿ ಹೇಳಿದ, ಮಕ್ಕಳಿಗೂ ಕಲಿಸುವುದಾಗಿ ಅನುಮತಿ ಪಡೆದ ಬೇರೆ ಬೇರೆ ಊರುಗಳ ಶಿಕ್ಷಕಿಯರಿದ್ದಾರೆ. ಇಂಥವರ ಸಂತತಿ ಹೆಚ್ಚಲಿ ಮತ್ತು ಅವರು ಎಲ್ಲರ ಮಕ್ಕಳ ಪದ್ಯಗಳನ್ನು ಮೆಚ್ಚಲಿ! ಮಕ್ಕಳ ಬಾಯಲ್ಲಿ ಕನ್ನಡ ನಲಿಯಿತಾದರೆ, ಉಳಿಯಿತಾದರೆ ನಾಡು ನುಡಿಗಳ ಭಾಗ್ಯವೇ ಸರಿ.

ಈ ಸಂಕಲನದ ಕವಿತೆಗಳನ್ನು ಜೋಡಿಸುವುದು ಪ್ರಯಾಸದ ಕೆಲಸವೇ ಆಯಿತು. ಬರೆದು ಎಲ್ಲೆಲ್ಲೋ ಇಟ್ಟುಬಿಟ್ಟಿದ್ದೆ.

- ಚಿಂತಾಮಣಿ ಕೊಡ್ಲೆಕೆರೆ

ಪುಸ್ತಕದ ಆಯ್ದ ಕವನಗಳು...

ಅಕ್ಕ ಪಕ್ಕ
ಪಕ್ಕದಲ್ಲಿ ಅಕ್ಕ
ತಲೆಗೆ ಹಕ್ಕಿ ಪುಕ್ಕ
ಅದನು ನೋಡಿ ಚಿಕ್ಕ
ಪಕ್ಕೆ ಹಿಡಿದು ನಕ್ಕ

ಓಕೆ ಮೇಕೆ
ಗುಡ್ಡದ ಮೇಲೆ ಮೇಕೆ
ಏರಿ ಹೋದದ್ದು ಯಾಕೆ?
ಮೇಕೆ ತಾಯಿ ಕೂಗ್ತಾ ಇದೆ
ಹುಷಾರು ಕಂದಾ ಜೋಕೆ
ಮೇಕೆಮರಿ ಕುಣಿತಾ ಇದೆ
ಓಕೆ ಅಮ್ಮಾ ಓಕೆ

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...