ನನ್ನ ನೆಚ್ಚಿನ ‘ನನ್ನದೆ ರೆಕ್ಕೆ ನನ್ನದೆ ಆಕಾಶ’ -ಕೆ.ರಘುನಾಥ್


ಪುರಾಣ ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ಸಮೀಕರಿಸಿ ಬರೆದ ಕವಿತೆಗಳಲ್ಲಿ ಕನಕ- ಕೃಷ್ಣ ಮುಖ್ಯ. ಇದು ಸವಿತಾ ನಾಗಭೂಷಣ ಅವರ ಇದೆ ಹೆಸರಿನ ಕವಿತೆಯನ್ನು ನೆನಪಿಸುವಷ್ಟು ಸಶಕ್ತವಾಗಿದೆ. ಇಬ್ಬರಿಗೂ ಇರುವ ಸಾಮ್ಯ ಮತ್ತು ವೈಶಿಷ್ಟ್ಯಗಳನ್ನು ಏಕಕಾಲದಲ್ಲಿ ಎತ್ತಿಹಿಡಿಯುವಲ್ಲಿ ಸಫಲವಾಗಿದೆ ಎನ್ನುತ್ತಾರೆ ಲೇಖಕ ಕೆ.ರಘುನಾಥ. ಅವರು ಉದಯಕುಮಾರ್ ಹಬ್ಬು ಅವರ `ನನ್ನದೇ ರೆಕ್ಕೆ ನನ್ನದೇ ಆಕಾಶ' ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಒದಿಗಾಗಿ..

ಕೃತಿ: ನನ್ನದೇ ರೆಕ್ಕೆ ನನ್ನದೇ ಆಕಾಶ
ಲೇಖಕರು: ಉದಯಕುಮಾರ್ ಹಬ್ಬು
ಪುಟ: 108
ಬೆಲೆ: 80
ಮುದ್ರಣ:2021
ಪ್ರಕಾಶಕರು: ಸ್ನೇಹ ಎಂಟರ್ ಪ್ರೈಸೆಸ್

ಉದಯಕುಮಾರ್ ಹಬ್ಬು ಅವರ ಈ ಸಂಕಲನ 59 ಕವಿತೆಗಳನ್ನು ಒಳಗೊಂಡಿದೆ. ಇವನ್ನು ಅಭ್ಯಾಸದ ಅನುಕೂಲಕ್ಕೆ ನಾಲ್ಕು ವಿನ್ಯಾಸಗಳಲ್ಲಿ ಪರಿಶೀಲಿಸಬಹುದು. ಅವುಗಳನ್ನು ಚಿಂತನಮುಖಿ, ಅಂತರ್ಮುಖಿ, ಬಹಿರ್ಮುಖಿ ,ಹಾಗೂ ಸಮಕಾಲೀನ ಎಂದು ಅವುಗಳ ವಸ್ತುವನ್ನು ಆಧರಿಸಿ ವಿಂಗಡಿಸಬಹುದು.

1 ಚಿಂತನಮುಖಿಯಲ್ಲಿ ಅವರ ವಿವಿಧ ತತ್ವಜ್ಞಾನ ತಿಳಿವಳಿಕೆಯ ಅಭಿವ್ಯಕ್ತಿಗೆ ಮೀಸಲು.ಉದಾಹರಣೆಗೆ ಅವರ ತತ್ವಜ್ಞಾನದ ತಿಳಿವಿಗೆ ಅವರು ಬಳಸಿರುವ '' ಒಂಬತ್ತು ಹುಲ್ಲೆ, ಆರು ಹುಲಿ' ಇತ್ಯಾದಿ ಪಾರಿಭಾಷಿಕ ಪದಗಳು ನಿದರ್ಶನವಾಗಿವೆ.ಇಂತಹ ಕವಿತೆಗಳು ಅದರಲ್ಲಿ ‌ಪ್ರವೇಶವಿಲ್ಲದ ಓದುಗರ ಸಂವಹನ ಶೀಲತೆಗೆ ತೊಡಕುಗಳನ್ನು ಉಂಟು ಮಾಡುತ್ತವೆ. ಅವುಗಳ ಕುರಿತು ಟಿಪ್ಪಣಿ ಪುಸ್ತಕದ ಕೊನೆಯಲ್ಲಿ ನೀಡಿದ್ದರೆ ಓದುಗರ ಗ್ರಹಿಕೆಗೆ ಸುಲಭವಾಗುತ್ತಿತ್ತು. ಇದೆ ರೀತಿಯಲ್ಲಿ ಇಂಗ್ಲಿಷ್ ಕವಿತೆಗಳ ಸಾಲುಗಳ ಉಲ್ಲೇಖ 'ಹಿಪೊಕ್ರೈಟ್' ಮುಂತಾದುವುಗಳ ಬಳಕೆ ಕೂಡ .ಇದು ಕವಿತೆಯ ರಸಗ್ರಹಣಕ್ಕೆ ಅನಿವಾರ್ಯವೆ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ಬೇಂದ್ರೆಯವರ ಕಾವ್ಯದ ಕೊನೆಯ ಘಟ್ಟದಲ್ಲಿ ಅವರು ಬಳಸಿದ ಸಂಖ್ಯಾಶಾಸ್ತ್ರದ ಪರಿಕಲ್ಪನೆಗಳು ಇದೆ ಬಗೆಯ ಸಂವಹನ ಶೀಲತೆಯ ತೊಡಕುಗಳನ್ನು ‌ಉಂಟುಮಾಡಿದ್ದು ‌ಈಗ ಕೂಡ ಅದರ ಸಮಸ್ಯೆ ಬಗೆ ಹರಿದಿಲ್ಲ. ಕಾವ್ಯ ಎನ್ನುವುದು ಮೂಲಭೂತವಾಗಿ ರಸಾನುಭೂತಿಗೆ ಕಾರಣವಾಗುವ ಸಾಧನ.ಅದಕ್ಕೆ ತಕ್ಕಂತೆ ಭಾಷೆಯನ್ನು ಬಳಸುವ ಜವಾಬ್ದಾರಿ ಕವಿಯದು.

2. ಅಂತರ್ಮುಖಿ ಕವಿತೆಗಳು: ತಮ್ಮ ‌ಆಂತರಿಕ‌ ದೌರ್ಬಲ್ಯ ಗಳ ಅನಾವರಣ ಮಾಡುತ್ತವೆ. ' ಯಮನ ಸನಿಹದಲ್ಲಿ ಕೂಡ ಬದಲಾಗುವುದಿಲ್ಲ' ಎನ್ನುವ ಮಾತುಗಳು ಮನುಷ್ಯ ಸ್ವಭಾವದ ಮಿತಿಯನ್ನು ಮನಗಾಣಿಸುವಲ್ಲಿ ಯಶಸ್ವಿಯಾಗಿದೆ.ಅದೆ ರೀತಿಯಲ್ಲಿ ವೈಯಕ್ತಿಕವಾಗಿ ತಾವು ಋಣಿಗಳಾದ, ತಮ್ಮ ಅಣ್ಣ, ಹೆಂಡತಿ ಕುರಿತು ಬರೆದ ಕವಿತೆಗಳು ಅವುಗಳ ಭಾವ ಪ್ರಾಮಾಣಿಕತೆ ಯಿಂದ ಆರ್ದ್ರ ಪರಿಣಾಮ ಬೀರುತ್ತವೆ. 'ಮನೆಯಲ್ಲಿ ಇರಲು ಯಾರೂ ಇಲ್ಲದಾಗ ಮನೆಕಟ್ಟುವ ಮೂರ್ಖತನ ಯಾಕೆ' ಎಂದು ಪ್ರಶ್ನಿಸುವ ಕವಿತೆ' ಅನಿಕೇತನ ಪ್ರಜ್ಞೆಯ ಅನಾವರಣವಾಗಿದೆ.

3. ಬಹಿರ್ಮುಖಿ ಕವಿತೆಗಳು ಹೊರಗಿನ ಸಂಗತಿಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತವೆ. ಉದಾಹರಣೆಗೆ ಕೊರೊನಾ ತಂದಿಟ್ಟ ನಿಸ್ಸಾಂಗತ್ಯದ ಸಮಸ್ಯೆ. ಹತ್ತಿರದವರನ್ನು ಕೂಡ ಸೇರಿಸಲಾಗದ ಅಸಹಾಯಕತೆ ಇದರಲ್ಲಿ ‌ಪ್ರಕಟವಾಗಿದೆ.

4. ಸಮಕಾಲೀನ ಕವಿತೆಗಳು ನಮ್ಮ ಸಮಕಾಲೀನ ಬದುಕನ್ನು ವ್ಯಾಪಕವಾಗಿ ಹಬ್ಬಿದ ಋಣಾತ್ಮಕ ಬೆಳವಣಿಗೆಗಳ ಕುರಿತು ಕಳಕಳಿಯಿಂದ ಮೂಡಿಬಂದಿದೆ. ಅನಾವಶ್ಯಕವಾಗಿ ವಿಷದ ಮಾತುಗಳನ್ನು ‌ಆಡಿ ನೋಯಿಸುವವರು, ಕಾಲೆಳೆಯುವವರು ಇವರನ್ನು ಕುರಿತ ವಿಡಂಬನೆ, ಮನುಷ್ಯ ಮನುಷ್ಯರ ನಡುವಿನ ಆರೋಗ್ಯಕರ ಸಂಬಂಧಗಳಿಗಾಗಿ ಹಾತೊರೆಯುತ್ತವೆ.

5:ಕನ್ನಡ ಕಾವ್ಯ ಪರಂಪರೆಯ ಪ್ರೇರಣೆ:'ಕಾವ್ಯ ಅರ್ಥವಿರುವಂತೆ ಅರ್ಥವಾಗುವಂತೆ ಬರೆಯಬೇಕು' ಅಡಿಗರ ಕವಿತೆಯ ಪ್ರೇರಣೆ ಪಡೆದಿದೆ. ಅಲ್ಲಿನ ವ್ಯಂಗ್ಯ ಇಲ್ಲಿ ಇಲ್ಲ. ಅದೆ ರೀತಿ ಕನಕದಾಸರ' ರಾಮಧಾನ್ಯ ಚರಿತೆಯಿಂದ ಪ್ರೇರಣೆ ಪಡೆದ ಕವಿತೆ ಕೂಡ ಇದೆ :

" ಲಚಿನ್ನ-ಕಬ್ಬಿಣ". ಕನಕನ ಕಾವ್ಯದಲ್ಲಿ ವಿತ್ತ ಮತ್ತು ರಾಗಿಗಳ ನಡುವೆ ವಿವಾದ ನಡೆದರೆ ಇಲ್ಲಿ ಚಿನ್ನ ಮತ್ತು ಕಬ್ಬಿಣಗಳ ನಡುವೆ ನಡೆಯುತ್ತದೆ. ಅಲ್ಲಿ ರಾಮ ರಾಗಿಯ ಪರ ತೀರ್ಪು ಕೊಟ್ಟರೆ ಇಲ್ಲಿ ಮಾತ್ರ ತೀರ್ಪು ಇಲ್ಲ.

ಮೂಲತಃ ಒಬ್ಬ ಶಿಕ್ಷಕರಾದ ಉದಯಕುಮಾರ್ ಹಬ್ಬು ಅವರು ಮಕ್ಕಳ ಸರ್ವಾಂಗೀಣ ಪ್ರಗತಿಯ ಕುರಿತು ಕಾಳಜಿ ಹೊಂದಿರುವವರು. ಇಂದಿನ ಶಿಕ್ಷಣ ಪದ್ದತಿ ಪಾಠ ಕೇಂದ್ರಿತವಾಗಿದ್ದು, ಅಲ್ಲಿ ಅವರ ದೈಹಿಕ ಬೆಳವಣಿಗೆಗೆ ಕಾರಣವಾದ ಆಟಕ್ಕೆ ಅವಕಾಶವೆ ಇಲ್ಲದಿರುವುದನ್ನು ಅವರ 'ಬೊನ್ಸೈ ಮಕ್ಕಳು' ಕವಿತೆ ವಿಷಾದದಿಂದ ದಾಖಲಿಸುತ್ತದೆ.

ಪುರಾಣ ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ಸಮೀಕರಿಸಿ ಬರೆದ ಕವಿತೆಗಳಲ್ಲಿ ಕನಕ- ಕೃಷ್ಣ ಮುಖ್ಯ. ಇದು ಸವಿತಾ ನಾಗಭೂಷಣ ಅವರ ಇದೆ ಹೆಸರಿನ ಕವಿತೆಯನ್ನು ನೆನಪಿಸುವಷ್ಟು ಸಶಕ್ತವಾಗಿದೆ. ಇಬ್ಬರಿಗೂ ಇರುವ ಸಾಮ್ಯ ಮತ್ತು ವೈಶಿಷ್ಟ್ಯಗಳನ್ನು ಏಕಕಾಲದಲ್ಲಿ ಎತ್ತಿಹಿಡಿಯುವಲ್ಲಿ ಸಫಲವಾಗಿದೆ.

ಹೀಗೆ ಉದಯಕುಮಾರ್ ಹಬ್ಬು ಅವರ ಕವಿತೆಗಳು ಏಕಕಾಲಕ್ಕೆ ಅವರ ಅಪಾರವಾದ ತಾತ್ವಿಕ ತಿಳಿವಳಿಕೆ ಮತ್ತು ಅವರಿಗೆ ಬದುಕಿನ ಬಗ್ಗೆ ಇರುವ ಬದ್ದತೆಗೆ ಸಾಕ್ಷಿ ನುಡಿಯುತ್ತವೆ. ಇದಕ್ಕೆ ಚಂದದ ‌ಮುನ್ನಡಿ ಬರೆದು ಅವರ ಕವಿತೆಗಳ ಪ್ರವೇಶಕ್ಕೆ ತಕ್ಕ ವೇದಿಕೆ ನಿರ್ಮಿಸಿದ ನಮ್ಮ ‌ನಡುವಿನ ಸಂವೇದನಾ ಶೀಲ ‌ಕವಿ ವಾಸುದೇವ ನಾಡಿಗರಿಗೆ ಮತ್ತು ಇದನ್ನು ಕಳಿಸಿ ಕೊಟ್ಟು ,ಬರೆಯಲು ‌ಪ್ರೇರೇಪಿಸಿದ ಗೆಳೆಯರಾದ ಉದಯಕುಮಾರ್ ಹಬ್ಬು ಅವರಿಗೆ ಕೃತಜ್ಞತೆ

ಉದಯ್ ಕುಮಾರ್ ಹಬ್ಬು ಅವರ ಲೇಖಕ ಪರಿಚಯ
ನನ್ನದೇ ಆಕಾಶ ನನ್ನದೇ ರೆಕ್ಕೆ ಕೃತಿ ಪರಿಚಯ

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...