ಸಾಮಾನ್ಯವಾಗಿ ಸಾಹಿತ್ಯ ಲೋಕಕ್ಕೆ ಲೇಖಕರ ಪ್ರವೇಶ ಕವಿತೆಯಿಂದ ಶುರುವಾಗಿರುತ್ತದೆ..


"ಮಹಾಭಾರತದ ಒಂದು ಸಣ್ಣ ಘಟನೆಯ ಎಳೆ ಹಿಡಿದು ಸಾಗುವ ಈ ನಾಟಕ ಮೇಲು ನೋಟಕ್ಕೆ ಹುಡುಕಾಟದ ಕುದುರೆಯೇರಿ ಹೊರಟ ಜರತ್ಕಾರುವಿನ ಕಥೆ ಎನಿಸಿದರೂ ಬದುಕಿನ ಭಿನ್ನ ಸಹಜ ಪೂರ್ವ ನಿರ್ಧರಿತ ಚಲನೆಗಳನ್ನು ಅನಾವರಣಗೊಳಿಸುತ್ತದೆ," ಎನ್ನುತ್ತಾರೆ ಲಕ್ಷ್ಮಣ ವಿ.ಎ. ಅವರು ಮಂಗಳ ಟಿ.ಎಸ್.‌ ಅವರ ʻಆರೋಹಿʼ ನಾಟಕದ ಕುರಿತು ಬರೆದ ಅನಿಸಿಕೆ.

'ಆಡಿದರೇನೆ ಅದು ನಾಟಕ' ಅಂತ ಜಯಂತ್ ಕಾಯ್ಕಿಣಿ ಹೇಳುತ್ತಾರೆ. ಆದರೆ ನಾಟಕ ಆಡದೇನೂ ಅದನ್ನು ಓದಿ ಸುಖಿಸಬಹುದೆಂಬುದನ್ನು ಶ್ರೀಮತಿ ಮಂಗಳಾ ಟಿ.ಎಸ್.ರವರು ಬರೆದ 'ಆರೋಹಿ' ನಾಟಕ ಓದಿದ ಮೇಲೆ ಮನವರಿಕೆಯಾಯ್ತು.

ಮಹಾಭಾರತದ ಒಂದು ಸಣ್ಣ ಘಟನೆಯ ಎಳೆ ಹಿಡಿದು ಸಾಗುವ ಈ ನಾಟಕ ಮೇಲು ನೋಟಕ್ಕೆ ಹುಡುಕಾಟದ ಕುದುರೆಯೇರಿ ಹೊರಟ ಜರತ್ಕಾರುವಿನ ಕಥೆ ಎನಿಸಿದರೂ ಬದುಕಿನ ಭಿನ್ನ ಸಹಜ ಪೂರ್ವ ನಿರ್ಧರಿತ ಚಲನೆಗಳನ್ನು ಅನಾವರಣಗೊಳಿಸುತ್ತದೆ.

ಪೌರಾಣಿಕ ಕಥೆಗಳಲ್ಲಿ ಆಧುನಿಕ ಮೌಲ್ಯಗಳ ಹುಡುಕಾಟದಿಂದ ರಂಗಭೂಮಿ ಸದಾ ಚಲನಶೀಲವೆನಿಸುತ್ತದೆ. ಸಮಯಕ್ಕೆ ತಕ್ಕ ಹಾಗೆ ತನ್ನನ್ನು ತಾನು ಅಪ್ಡೇಟ್ ಮಾಡಿಕೊಳ್ಳುವ ಗುಣ ಹೊಂದಿರುವ ಈ ಕಲಾ ಪ್ರಕಾರ ಅಂದಿನ ಮತ್ತು ಇಂದಿನ ಜಗತ್ತಿನೊಂದಿಗೆ ಕೆಲವೊಮ್ಮೆ ಸಮನಾಂತರವಾಗಿ ಚಲಿಸುತ್ತ ಮತ್ತೊಮ್ಮೆ ಆಧುನಿಕ ವಿಕಾರಗಳಿಗೂ ಕನ್ನಡಿ ಹಿಡಿದಿಡುತ್ತ ಸದಾ ಹೊಸ ಹರಿವುಗಳನ್ನೊಳಗೊಳ್ಳುವ ನದಿಯ ಹಾಗೆ.

ಮಂಗಳಾ ಮೇಡಮ್ ರು ಬಲು ಸೊಗಸಾಗಿ ಕಥಾ ಕೀರ್ತನ ಮಾಡುತ್ತಾರೆ. ಹೀಗಾಗಿ ಅವರಿಗೆ ಈ ಪೌರಾಣಿಕ ಪಾತ್ರಗಳೊಂದಿಗೆ ಒಡನಾಡುವ ಅವಕಾಶವೂ ವಿಫುಲ.ಹೀಗೊಂದು ಆಯಾಚಿತವಾಗಿ ದಕ್ಕಿದ ಪಾತ್ರದ ಎಳೆಯೊಂದನ್ನು ಹಿಡಿದು ಅದು ಅವರೊಳಗೊಳಗೇ ಬೆಳೆದು ಹೀಗೊಂದು ಅದ್ಭುತವಾದ ನಾಟಕ ಮೈ ತಳೆದು ನಿಂತಿರುವುದು ಅವರ ಸೃಜನ ಶೀಲ ಸಾಮರ್ಥ್ಯ ಕ್ಕೊಂದು ಉದಾಹರಣೆ.ಕಥೆಗಳನ್ನು ಕೂಡ ಚೆನ್ನಾಗಿ ಬರೆಯುತ್ತಾರೆ.

ಸಾಮಾನ್ಯವಾಗಿ ಸಾಹಿತ್ಯ ಲೋಕಕ್ಕೆ ಲೇಖಕರ ಪ್ರವೇಶ ಕವಿತೆಯಿಂದ ಶುರುವಾಗಿರುತ್ತದೆ, ಆದರೆ ಮಂಗಳಾರವರು ನಾಟಕ ರಚನೆಯ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಆರೋಹಿ ನಾಟಕ ಸಾಹಿತ್ಯ ಅಕಾಡೆಮಿ ಗೌರವ ಲಭಿಸಿದ್ದೇ ಈ ಮಾತಿಗೆ ಸಾಕ್ಷಿ. ಅವರು ಇನ್ನೂ ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಂಡು ಒಳ್ಳೆಯ ಕೃತಿಗಳನ್ನು ನೀಡಲು ಈ ಪ್ರಶಸ್ತಿ ಪ್ರೇರಣೆಯಾಗಲಿ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...