ಸಮಯಕ್ಕೂ ಹಣಕ್ಕೂ ಅದ್ಯಾವ ನಂಟು ಎಂದಿರಾ? 


"ಹಣ ಹೋದರೆ ಮತ್ತೆ ಹಣ ಗಳಿಸಬಹುದು. ಸಮಯ ಮಿಂಚಿದರೆ ಅದನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ ಎಂಬ ಸರಳವಾದ ಜೀವನ್ಮೌಲ್ಯದ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ಈ ಕೃತಿ ನಿಮಗೆ...," ಎನ್ನುತ್ತಾರೆ ಸತ್ಯೇಶ್‌ ಎನ್‌. ಬೆಳ್ಳೂರ್‌. ಅವರ ʻಸಮಯ = ಹಣʼ ಕೃತಿಯ ಬೆನ್ನುಡಿ ನಿಮ್ಮ ಓದಿಗಾಗಿ..

ನಿಮಗೆಲ್ಲ ಹಣ ಮಾಡಬೇಕು ಎಂಬ ಬಯಕೆ ಇದೆಯೆ? ಹಾಗಿದ್ದರೆ, ನೀವೆಲ್ಲ ಸಮಯವನ್ನು ಗೌರವಿಸುತ್ತ ಅದನ್ನು ಪಾಲಿಸಿದರೆ ಸಾಕು. ಏನಿದು? ಸಮಯಕ್ಕೂ ಹಣಕ್ಕೂ ಅದ್ಯಾವ ನಂಟು ಎಂದಿರಾ? ಹಾಗಿದ್ದರೆ, ಈ ಕೃತಿ ನಿಮಗೆ...

ಜೀವನದಲ್ಲಿ ಯಶಸ್ಸನ್ನು, ಅಪಾರ ಹಣವನ್ನು ಕಂಡಿರುವ ಯಾವುದೇ ಸಾಧಕರನ್ನು ನೋಡಿ. ಅವರೆಲ್ಲರೂ ಸಮಯದ ಪರಿಪಾಲನೆಯಲ್ಲಿ ಯಾವುದೇ ರಾಜಿ ಮಾಡಿಕೊಂಡವರಲ್ಲ. ಅವರೆಲ್ಲರ ಯಶಸ್ಸಿನ ಹಿಂದೆ ಕಂಡೂ ಕಾಣದಂತೆ ಇರುವ ಅವರ ವ್ಯಕ್ತಿತ್ವದ ಗುಣವಿಶೇಷವೇ ಅವರಿಗೆ ಸಮಯದ ಬಗ್ಗೆ ಇರುವ ಅಪಾರ ಕಾಳಜಿ ಎಂದು ನಿಮಗನ್ನಿಸದ್ದರೆ, ಈ ಕೃತಿ ನಿಮಗೆ...

ಹಣ ಹೋದರೆ ಮತ್ತೆ ಹಣ ಗಳಿಸಬಹುದು. ಸಮಯ ಮಿಂಚಿದರೆ ಅದನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ ಎಂಬ ಸರಳವಾದ ಜೀವನ್ಮೌಲ್ಯದ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ಈ ಕೃತಿ ನಿಮಗೆ...

ಸಮಯದ ಮಹತ್ವವೇನು? ಸಮಯದ ನಿರ್ವಹಣೆ ಹೇಗೆ ಸಾಧ್ಯ? ಸಮಯವನ್ನು ಸಾಧನೆಯ ಪಥದಲ್ಲಿ ಬಳಸಿಕೊಳ್ಳುವುದು ಹೇಗೆ? ಸಮಯದ ಪರಿಪಾಲನೆಯಲ್ಲಿ ನಮಗೆ ನೆರವಾಗಬಲ್ಲ ಸರಳವಾದ ವಿಧಿವಿಧಾನಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತದ್ದರೆ, ಈ ಕೃತಿ ನಿಮಗೆ...

ಈ ಕೃತಿಯಲ್ಲಿ ಸಮಯದ ಪರಿಪಾಲನೆಗಾಗಿ ಇರುವ ಸುಲಭವಾದ ಕ್ರಮವನ್ನು ನೀವು ಅರ್ಥ ಮಾಡಿಕೊಂಡು ಅದನ್ನು ನಿಮ್ಮ ಜೀವನದಲ್ಲಿ ತಂದುಕೊಂಡರೆ, ನಿಮ್ಮ ಬದುಕಿನಲ್ಲಿ ಯಶಸ್ಸು ಖಂಡಿತ. ಅಂದಹಾಗೆ, ತನ್ಮೂಲಕ ಹಣವನ್ನೂ ಗಳಿಸುತ್ತೀರಿ ಎಂಬುದರಲ್ಲಿಯಂತೂ ಎಳ್ಳಷ್ಟೂ ಸಂಶಯ ಬೇಡ.

ಏಕೆಂದರೆ, ಸಮಯ = ಹಣ...

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...