ಶಿಕ್ಷಣ ಕ್ಷೇತ್ರದ ಧನಾತ್ಮಕ ಅನುಭವಗಳ ನಿರೂಪಣೆ


ಲೇಖಕರ ಶಿಕ್ಷಣ ಕ್ಷೇತ್ರದ ಅನುಭವಗಳು ಶಾಲಾಹಂತದಿಂದ ಆಡಳಿತ ಹಂತದವರೆಗಿನ ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ. ಶಾಲಾ ವಾತಾವರಣ, ತರಗತಿ ಕೋಣೆಯೊಳಗಿನ ಪ್ರಕ್ರಿಯೆಗಳು ಇವುಗಳ ಬಗ್ಗೆ ಲೇಖಕರು ತಮ್ಮ ನಿಲುವನ್ನು ಉಲ್ಲೇಖಿಸುತ್ತಾ ಶಿಶುಕೇಂದ್ರಿತ ಶಿಕ್ಷಣವನ್ನು ಒತ್ತಿ ಹೇಳುತ್ತಾರೆ. ಪ್ರತಿ ಲೇಖನವು ಮಕ್ಕಳ ಕೇಂದ್ರಿತ, ಶಿಕ್ಷಕ ಕೇಂದ್ರಿತ ಹಾಗೂ ಶಿಕ್ಷಣದ ಗುಣಮಟ್ಟ ಕೇಂದ್ರಿತವಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಐ.ಎ.ಎಸ್ ಅಧಿಕಾರಿ ಶಾಲಿನಿ ರಜನೀಶ್ . ಅವರು ಕೆ.ಎಂ.ವಿಶ್ವನಾಥ ಮರತೂರ ಅವರ ‘ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?’ ಕೃತಿಯಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಕೃತಿ: ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?
ಲೇಖಕ: ಕೆ.ಎಂ.ವಿಶ್ವನಾಥ ಮರತೂರ
ಬೆಲೆ: 200
ಮುದ್ರಣ: 2021
ಪ್ರಕಾಶಕರು: ಸ್ನೇಹ ಬುಕ್ ಹೌಸ್ 

ಪ್ರಸ್ತುತ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿ ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅನ್ವಯ ಶಿಶುಕೇಂದ್ರಿತ ಶಿಕ್ಷಣ ಅನುಷ್ಠಾನಗೊಳ್ಳುತ್ತಿದೆ. ಭಾರತದಂತಹ ಬೃಹತ್ ದೇಶದಲ್ಲಿ, ಶಿಕ್ಷಣ ಒಂದು ಮಹತ್ವದ ಘಟ್ಟವಾಗಿದೆ. ಗ್ರಾಮೀಣ ಭೂ ಪ್ರದೇಶವನ್ನು ಹೆಚ್ಚು ಹೊಂದಿರುವ ನಾವು ಶಿಕ್ಷಣದಲ್ಲಿ ಅನೇಕ ಹೊಸ ಹೊಸ ಯೋಜನೆಗಳ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಲೇ ಬಂದಿದ್ದೇವೆ. ಶಿಕ್ಷಣ ಕ್ಷೇತ್ರದ ಅನುಭವಗಳ ಅತ್ಯಂತ ಆಳವಾಗಿದ್ದು ಅರ್ಥಮಾಡಿಕೊಂಡಷ್ಟು ವಿಸ್ತರಿಸುತ್ತಾ ಹೋಗುತ್ತವೆ. ಮಗುವಿನ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಮೂಲ ಉದ್ದೇಶವೆಂದು ಶಿಕ್ಷಣ ತಜ್ಷರು ಹೇಳಿದ್ದಾರೆ. ಅದೇ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ. ಮಾರ್ಗ ಬದಲಾದರು ಗುರಿಯೊಂದೆಯಿದೆ ಅದೇ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ಉಚಿತ ಮತ್ತು ಕಡ್ಡಾಯವಾಗಿದೆ. 

“ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ?”  ಪುಸ್ತಕವು ಶಿಕ್ಷಣ ಕ್ಷೇತ್ರದಲ್ಲಿನ ಶಿಕ್ಷಕರು, ಮಕ್ಕಳು ಮತ್ತು ಪಾಲಕರನ್ನು ಪ್ರತಿಬಿಂಬಿಸುತ್ತದೆ. ಈ ಪುಸ್ತಕದಲ್ಲಿ ಲೇಖಕರು ಮನೆಯಂಬ ಪಾಠಶಾಲೆ, ಸರಕಾರಿ ಶಾಲೆಗಳ ಸಬಲೀಕರಣ, ಮಕ್ಕಳ ಪರೀಕ್ಷೆ ಮತ್ತು ಭಯ, ಸರಕಾರದ ಮದ್ಯಾನದ ಬಿಸಿಯೂಟ, ಮಕ್ಕಳಿಗೆ ಚಾರಣದ ಅವಶ್ಯಕತೆ, ಮಕ್ಕಳು ಮೆಚ್ಚುವ ಶಿಕ್ಷಕರಾಗಲು ಅರ್ಹತೆಗಳು, ಮಕ್ಕಳ ಗ್ರಂಥಾಲಯ, ಪಾಲಕರ ಕರ್ತವ್ಯಗಳನ್ನು ಹೀಗೆ ಶಿಕ್ಷಣದ ವಿವಿಧ ಪ್ರಕಾರಗಳಲ್ಲಿ ಧನಾತ್ಮಕ ದೃಷ್ಠಿ ಹಾಯಿಸುತ್ತಾರೆ. ಆದರ್ಶ ವಿದ್ಯಾರ್ಥಿಯಾಗಲು ಇರಬೇಕಾದ ಗುಣಗಳು. ದೈವ ದೇಗುಲದ ಜೊತೆಗೆ, ಜ್ಞಾನ ದೇಗುಲ ಕಟ್ಟೋಣವೇ? ಸಮಕಾಲೀನ ಸಂದರ್ಭದಲ್ಲಿ ಶಿಕ್ಷಕರಾಗುವುದೆಂದರೇನು? ನಮ್ಮ ಮಕ್ಕಳಿಗೆ ಪುಸ್ತಕಗಳನ್ನು ಮರು ಪರಿಚಯಿಸಲು ಇದು ಸಕಾಲ. ತೆರೆದ ಪುಸ್ತಕ ಪರೀಕ್ಷೆಗಳು, ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ? ಈ ಲೇಖನಗಳ ಮೂಲಕ ಶಿಕ್ಷಣ ಇಲಾಖೆಯ ಆಳ ಅಗಲಗಳನ್ನು ಲೇಖಕರು ತಮ್ಮ ಸ್ವಂತ ಅನುಭವದ ಮೂಲಕ ಪರಿಚಯಿಸುತ್ತಾರೆ.  

ಲೇಖಕರ ಶಿಕ್ಷಣ ಕ್ಷೇತ್ರದ ಅನುಭವಗಳು ಶಾಲಾಹಂತದಿಂದ ಆಡಳಿತ ಹಂತದವರೆಗಿನ ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ. ಶಾಲಾ ವಾತಾವರಣ, ತರಗತಿ ಕೋಣೆಯೊಳಗಿನ ಪ್ರಕ್ರಿಯೆಗಳು ಇವುಗಳ ಬಗ್ಗೆ ಲೇಖಕರು ತಮ್ಮ ನಿಲುವನ್ನು ಉಲ್ಲೇಖಿಸುತ್ತಾ ಶಿಶುಕೇಂದ್ರಿತ ಶಿಕ್ಷಣವನ್ನು ಒತ್ತಿ ಹೇಳುತ್ತಾರೆ. ಪ್ರತಿ ಲೇಖನವು ಮಕ್ಕಳ ಕೇಂದ್ರಿತ, ಶಿಕ್ಷಕ ಕೇಂದ್ರಿತ ಹಾಗೂ ಶಿಕ್ಷಣದ ಗುಣಮಟ್ಟ ಕೇಂದ್ರಿತವಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ. 

ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಮರತೂರ ಗ್ರಾಮದವರಾದ ಕೆ.ಎಂ.ವಿಶ್ವನಾಥ ಮರತೂರ ಅವರು ತಮ್ಮ ಶೈಕ್ಷಣಿಕ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ, ಅವರ ಹಲವು ವರ್ಷಗಳು ಮಕ್ಕಳು, ಶಿಕ್ಷಕರು ಮತ್ತು ಸಮುದಾಯದೊಂದಿಗೆ ಅತ್ಯಂತ ಹತ್ತಿರದಿಂದ ಶಿಕ್ಷಣದ ಗುಣಮಟ್ಟಕ್ಕಾಗಿ ಕೆಲಸ ಮಾಡಿದ್ದಾರೆ. ಆ ನೈಜವಾದ ಅನುಭವಗಳನ್ನೆ ಇಲ್ಲಿ ವಿಸ್ತರಿಸಿ ಬರೆಯುವುದರ ಜೊತೆಗೆ ಓದುಗರನ್ನು ಹಿದಿಟ್ಟುಕೊಳ್ಳುವ ಗುಣವನ್ನು ಹೊಂದಿದ್ದಾರೆ.  ಈ ಪುಸ್ತಕವು ಸಮಾಜದ ಪ್ರತಿಯೊಬ್ಬರಿಗೂ ಅವಶ್ಯಕವೆಂದು ಎನಿಸುತ್ತದೆ. ಈ ಅನುಭವಗಳ ಸರಳ ನಿರೂಪಣೆ ಮಾಡಿರುವ ಕೆ.ಎಂ.ವಿಶ್ವನಾಥ ಮರತೂರ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

ಕೆ.ಎಂ.ವಿಶ್ವನಾಥ ಮರತೂರ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೇ? ಕೃತಿ ಪರಿಚಯ ಇಲ್ಲಿದೆ...



 

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...