"ಸಹಜ ಅನುಭವದಿಂದಲೇ ಮಾಗಿದ ವೈವಿಧ್ಯಪೂರ್ಣ ಪಾತ್ರಗಳ ಮೂಲಕ ವಿಶಿಷ್ಟ ತಿಳಿವಿನ ವಿನ್ಯಾಸವೊಂದನ್ನು ಈ ನಾಟಕ ಕಟ್ಟಿಕೊಡುತ್ತದೆ. ಅದರ ಜೊತೆಗೇ ರಂಗಭೂಮಿಯ ಕುರಿತ ಜಿಜ್ಞಾಸೆಯೂ ಈ ಹುಡುಕಾಟದ ಮುಖ್ಯ ಚಡಪಡಿಕೆಯಾಗುತ್ತದೆ. ಹೀಗೆ ವಾಸ್ತವದ ನೆರಳು ಬೆಳಕಿನ ಜೊತೆ ರಂಗಭೂಮಿಯ ನೆರಳು ಬೆಳಕೂ ಇಲ್ಲಿ ಒಂದಾಗುತ್ತ ಜೀವನ್ಮುಖಿ ಯಾಗಿ ಚಲಿಸುತ್ತದೆ". ಎನ್ನುತ್ತಾರೆ ಜಯಂತ ಕಾಯ್ಕಿಣಿ. ಅವರು ತಮ್ಮ 'ಅಂಕದ ಪರದೆ' ನಾಟಕ ಕೃತಿಗೆ ಬರೆದ ಲೇಖಕರ ಮಾತು ಹೀಗಿದೆ...
ನೀನಾಂಸ ತಿರುಗಾಟಕ್ಕೂ ನನ್ನ ಭಾಷಾಂತರ ನಾಟಕ ಬರವಣಿಗೆಗೂ ಇರುವ ನಂಟಿನ ವಿಸ್ತರಣೆ ಇದು. 1992ರಲ್ಲಿ 'ಸೇವಂತಿ ಪ್ರಸಂಗ'. 1998ರಲ್ಲಿ 'ಜತೆಗಿರುವನು ಚಂದಿರ', ಈಗ 'ಅಂಕದ ಪರದೆ'. ಇದು ಮರಾಠಿಯ ಜೊತೆಗಿನ ನನ್ನ ಸಂವೇದನಾಶೀಲ ಬಾಂಧವ್ಯದ ಆಚರಣೆಯೂ ಹೌದು. ಹೀಗಾಗಿ, ಹೋದ ವರ್ಷ ಕೆ.ವಿ. ಅಕ್ಷರ "ಈ ಬಾರಿಯ ತಿರುಗಾಟಕ್ಕೆ ಅಭಿರಾಮ್ ಭಡ್ಕರ್ ಅವರ ಮರಾಠಿ ನಾಟಕವನ್ನು ಕನ್ನಡಿಸಿ ಕೊಡಿ" ಎಂದಾಗ, "ಹೂಂ" ಎನ್ನುವ ಮೊದಲೇ ತಯಾರಾಗಿ ಬಿಟ್ಟೆ. ನಾಟಕದ ಮಾಂತ್ರಿಕತೆಯೇ ಹಾಗೆ.
ಸಹಜ ಅನುಭವದಿಂದಲೇ ಮಾಗಿದ ವೈವಿಧ್ಯಪೂರ್ಣ ಪಾತ್ರಗಳ ಮೂಲಕ ವಿಶಿಷ್ಟ ತಿಳಿವಿನ ವಿನ್ಯಾಸವೊಂದನ್ನು ಈ ನಾಟಕ ಕಟ್ಟಿಕೊಡುತ್ತದೆ. ಅದರ ಜೊತೆಗೇ ರಂಗಭೂಮಿಯ ಕುರಿತ ಜಿಜ್ಞಾಸೆಯೂ ಈ ಹುಡುಕಾಟದ ಮುಖ್ಯ ಚಡಪಡಿಕೆಯಾಗುತ್ತದೆ. ಹೀಗೆ ವಾಸ್ತವದ ನೆರಳು ಬೆಳಕಿನ ಜೊತೆ ರಂಗಭೂಮಿಯ ನೆರಳು ಬೆಳಕೂ ಇಲ್ಲಿ ಒಂದಾಗುತ್ತ ಜೀವನ್ಮುಖಿ ಯಾಗಿ ಚಲಿಸುತ್ತದೆ.
ನಾಟಕದ ಮೊದಲ ಪ್ರಯೋಗವನ್ನು ಆಸ್ವಾದಿಸುತ್ತ ನೋಡಿದ ಅಭಿರಾಮ್ ಭಡ್ಕಟ್ಕರ್ (ಆಗ ನಾನು ಅವರನ್ನೇ ನೋಡುತ್ತಿದ್ದೆ) ಈ ಪ್ರಕಟಣೆಗೆ ಸಂತಸದಿಂದ ಸಮ್ಮತಿಸಿದ್ದಾರೆ. ತಿರುಗಾಟದ ಕೈಪಿಡಿಗೆ ತಾವು ಬರೆದ ಟಿಪ್ಪಣಿಯನ್ನು ಹಿನ್ನುಡಿಯಾಗಿ ಬಳಸಲು ಅಕ್ಷರ ಒಪ್ಪಿಗೆ ನೀಡಿದ್ದಾರೆ. ವಿದ್ಯಾನಿಧಿ ವನಾರಸೆ (ಪ್ರಸಾದ್) ಅವರು ನಿರ್ದೇಶಿಸಿದ ಈ ನಾಟಕವನ್ನು 2024-25ರಲ್ಲಿ ನೀನಾಸಂ ತಿರುಗಾಟ ಬಳಗದವರು ಊರೂರಿಗೆ ಒಯ್ದು ಆಡಿದ್ದಾರೆ ಮತ್ತು ಈಗ ತಮ್ಮ ಪ್ರಕಾಶನದ ಮೂವತ್ತನೇ ವರುಷದ ಸಂಭ್ರಮದಲ್ಲಿ ಇದನ್ನು ಬೆಳಕಿಗೆ ತರುತ್ತಿದ್ದಾರೆ ಆಪ್ತ ಅಂಕಿತ, ಅಂಕಿತೆಯರಾದ ಪ್ರಕಾಶ್, ಪ್ರಭಾ ಕಂಬತ್ತಳ್ಳಿ ಎಂದಿನಂತೆ ರಾವ್ ಬೈಲ್‌ರ ರೇಖಾಚಿತ್ರಗಳ ಮೂಲಕ ಓರಣವನ್ನು ಕಲ್ಪಿಸಿದ್ದಾನೆ ಅಪಾರ. ಪುಸ್ತಕದ ಈ ನೆಂಟರಿಗೆ, ರಂಗಭೂಮಿಯನ್ನು ಹಚ್ಚಿಕೊಂಡಿರುವ ಎಲ್ಲರಿಗೆ, ಎದುರೇ ಇರುವ ನಿಮಗೆ, ಮನಸಾರೆ ಮುಜುರೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.