ವರ್ತಮಾನದ ಬಿಕ್ಕಟುಗಳ ಕುರಿತು ವಿಶ್ಲೇಷಣೆ ನೀಡಿರುವ ಅಂಕಣಗಳ ಸಂಕಲನ ‘ಬಯಲ ಜೋಳಿಗೆ


ಬಯಲ ಜೋಳಿಗೆ ಅಂಕಣಗಳ ಸಂಕಲನದ ಕುರಿತು ಎಚ್.ಎಸ್. ಶಿವಪ್ರಕಾಶ್‌ ಅವರು ಬರೆದ ಲೇಖಕರ ಮಾತು ಇಲ್ಲಿದೆ. 

ಇದು ನನ್ನ ಅಂಕಣ ಬರಹಗಳ ಮೂರನೆಯ ಕಟ್ಟು. ಕಳೆದೆರಡು ವರ್ಷಗಳಿಂದ ‘ವಿಜಯ ಕರ್ನಾಟಕ’ದಲ್ಲಿ ಅಚ್ಚಾದ ಬರಹಗಳಿವು. 

ನಾನು ಅಂಕಣ ಬರಹಕ್ಕೆ ಕೈ ಹಾಕಿದ್ದು ಅನಿರೀಕ್ಷಿತವಾಗಿ. ಆದದ್ದೆಲ್ಲಾ ಒಳಿತೇ ಆಯಿತು ಅಂದ ಹಾಗೆ ನಾನು ಕವಿತೆ, ನಾಟಕಗಳಲ್ಲಿ ತೆರೆಯಲಾಗದ ಬಾಗಿಲುಗಳನ್ನು ಅಂಕಣ ಬರಹ ತೆರೆದುಕೊಟ್ಟಿತು. ಆ ಮೂಲಕ ನನ್ನ ಇತರ ಬರಹಗಳಿಂದ ಮುಟ್ಟಲಾಗದ ಓದುಗ ವಲಯವನ್ನು ಮುಟ್ಟಲು ಸಾಧ್ಯವಾಯಿತು. ಈ ಬರವಣ ಗೆಗೆ ನನ್ನನ್ನು ಮೊದಲು ಹಚ್ಚಿದ್ದು ಹಿಂದೆ ಪ್ರಜಾವಾಣಿಯಲ್ಲಿ ಉಪಸಂಪಾದಕನಾಗಿದ್ದ ಗೆಳೆಯ ಲಕ್ಷ್ಮಣ ಕೊಡಸೆ. ಅವನಿಗೆ ನಾನು ತುಂಬಾ ಋಣ.  ಒಂದೆರಡು ವರ್ಷಗಳ ನಂತರ ‘ಪ್ರಜಾವಾಣಿ ’ ಪ್ರಭುಗಳಿಗೆ ನನ್ನ ಬರಹದ ಸಹವಾಸ ಸಾಕೆನಿಸಿತು. ಏಕದಂ ಪ್ರಕಟಿಸುವುದನ್ನು ನಿಲ್ಲಿಸಿಬಿಟ್ಟರು. ಆಗ ಗೆಳೆಯ ಉಮಾಪತಿ ನನಗೊದಗಿ ಬಂದು ‘ವಿಜಯ ಕರ್ನಾಟಕ’ಕ್ಕೆ ನನ್ನನ್ನು ಪರಿಚಯಿಸಿ ಉಪಕರಿಸಿದರು. ಅವರಿಗೂ ನಾನು ಋಣ .

ಈ ಪುಸ್ತಕ ಹೊರತರುತ್ತಿರುವ ಕತೆಗಾರ, ಪ್ರಕಾಶಕ ಟಿ.ಎಸ್.ಗೊರವರ ಅವರಿಗೂ ನಾನು ಆಬಾರಿ. 

ಈ ಬರಹಗಳು ಹೆಚ್ಚು ಹೆಚ್ಚು ಓದುಗರ ಮನ-ಹೃದಯಗಳನ್ನು ಮುಟ್ಟುತ್ತವೆಂಬ ಹಂಬಲಿಕೆಯಿಂದ ನನ್ನ ಒಂದೆರಡು ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

 


ಎಚ್.ಎಸ್.ಶಿವಪ್ರಕಾಶ್

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ನೆಲದಲ್ಲ, ಮಿಲರೇಪ, ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ. ಅವರ ಅನುವಾದಿತ ಕೃತಿ- ಕಿಂಗ ಲಿಯರ್ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 


 

MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...