2019ನೇಸಾಲಿನ ಮಾನವಿಕ ಪುರಸ್ಕಾರಕ್ಕೆ ಮನು ದೇವದೇವನ್ ಆಯ್ಕೆ

Date: 08-11-2019

Location: ಬೆಂಗಳೂರು


ಇನ್ಫೋಸಿಸ್ ಸಂಸ್ಥೆಯು ನೀಡುವ ಮಾನವಿಕ ವಿಭಾಗದ 2019ನೇ ಸಾಲಿನ ಪುರಸ್ಕಾರಕ್ಕೆ ಇತಿಹಾಸಕಾರ ಸಂಶೋಧಕ ಮನು ವಿ. ದೇವದೇವನ್‌ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ಅಮೆರಿಕನ್‌ ಡಾಲರ್‌ (70 ಲಕ್ಷ ರೂಪಾಯಿ) ಮೊತ್ತದ್ದಾಗಿದೆ. ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 

ಅವರು ಮಂಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯ ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ಮನು ದೇವದೇವನ್‌ ಅವರು ದಕ್ಷಿಣ ಭಾರತದ ಆಧುನಿಕ ಪೂರ್ವ ಇತಿಹಾಸಕ್ಕೆ ಸಂಬಂಧಿಸಿದಂತೆ ಅನನ್ಯ ಹಾಗೂ ವ್ಯಾಪಕ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಅವರ ’A Pre-History of Hinduism’ ಕೃತಿಯು ಭಾರತದ ಸಾಂಸ್ಕೃತಿಕ ಇತಿಹಾಸ ಅಧ್ಯಯನ ಕ್ಷೇತದಲ್ಲಿ ವಿಭಿನ್ನ ನೋಟ ಹಾಗೂ ಆಲೋಚನಾ ಕ್ರಮದಿಂದ ವಿಶಿಷ್ಟ ಸ್ಥಾನ ಪಡೆದಿದೆ. ಹಲವು ಭಾಷೆಗಳ ಆಕರಗಳನ್ನು ಬಳಸಿ ತಮ್ಮ ಅಪೂರ್ವ ಒಳನೋಟವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಅವರು ಪರಿಚಿತರಾಗಿದ್ದಾರೆ. ಪ್ರಶಸ್ತಿಯು 2020 ಜನವರಿ 7ರಂದು ನಗರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಭಾಗವಹಿಸಲಿದ್ದಾರೆ. ಕನ್ನಡ ಚಿಂತನಾಲೋಕಕ್ಕೆ ತಮ್ಮ ಅಪೂರ್ವ ಒಳನೋಟಗಳನ್ನು ನೀಡಿದ ಮನು ದೇವದೇವನ್‌ ಅವರಿಗೆ ’ಬುಕ್ ಬ್ರಹ್ಮ’ದ ಅಭಿನಂದನೆಗಳು.

ಮನು ದೇವದೇವನ್‌ ಅವರ ’ಜನ ಮರುಳೋ ಜಾತ್ರೆ ಮರುಳೋ’ ಲೇಖನ ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ

http://aakarabharati.in/php/bookreader/templates/book.php?journalid=003&volume=023&part=01&pagenum=0028#page/28/mode/1up

MORE NEWS

ಸಾಹಿತಿ ಬಸವರಾಜ ಸಾದರ ಅವರಿಗೆ ಕಾವ್...

20-11-2019 ಬೆಂಗಳೂರು

ಕವಿ, ಕಥೆಗಾರ ಡಾ.ಬಸವರಾಜ ಸಾದರ ಅವರು 2018ನೇ ಸಾಲಿನ ಕಾವ್ಯಾನಂದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕವಿ, ವಿಮರ್...

ವಿಭಾ ಸಾಹಿತ್ಯ ಪ್ರಶಸ್ತಿಗೆ ಕವಿ ಲಕ...

20-11-2019 ಹುಬ್ಬಳ್ಳಿ

ಬೆಳಗಾವಿಯ ಕವಿ ಡಾ.ಲಕ್ಷ್ಮಣ ವಿ.ಎ. ಅವರ "ಅಪ್ಪನ ಅಂಗಿ" ಕವನ ಸಂಕಲನದ ಹಸ್ತಪ್ರತಿಗೆ  2019ನೇ ಸಾ...

ಪಂಜಾಬಿ ಸಾಹಿತಿಗಳಿಗೆ ಕುವೆಂಪು ರಾಷ...

18-11-2019 ಬೆಂಗಳೂರು

ಪಂಜಾಬಿ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಜೀತ್‌ ಕೌರ್‌ ಹಾಗೂ ಗುರುಬಚನ್‌ ಸಿಂಗ್‌&...

Top News
Top Events