Date: 29-11-2024
Location: ಬೆಂಗಳೂರು
ಬೆಂಗಳೂರು: ಕಳೆದ ಹದಿನೆಂಟು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.
ಇದುವರೆಗೂ ಒಂದೂ ಕಥಾಸಂಕಲನ ಹೊರ ತಂದಿರದ ಕತೆಗಾರರಿಗೆ ಮಾತ್ರ ಅವಕಾಶವಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು ಎಂಟರಿಂದ ಹತ್ತು ಸ್ವಂತ ಕತೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಮುದ್ರಿತ ಪುಟಗಳನ್ನು ಕೊರಿಯರ್ ಮೂಲಕ ಕಳುಹಿಸಬೇಕು. ಮುದ್ರಿತ ಪುಟಗಳು A4 ನಲ್ಲಿ ಕನಿಷ್ಠ 50 ಪುಟಗಳಿರಲಿ. ಇ-ಮೇಲ್ ಮುಖಾಂತರ ಕತೆಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಯತಕಾಲಿಕಗಳಲ್ಲಿ ಪ್ರಕಟವಾದ ಅಥವಾ ಅಪ್ರಕಟಿತ ಕತೆಗಳೆರಡನ್ನೂ ಪರಿಗಣಿಸಿದರೂ, ಅಪ್ರಕಟಿತ ಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಯ್ಕೆಯಾದ ಒಬ್ಬ ಕತೆಗಾರನಿಗೆ/ಳಿಗೆ ನಲವತ್ತು ಸಾವಿರ ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಇದಲ್ಲದೆ ಉತ್ತಮವೆನಿಸಿದ ಇನ್ನೂ ಐದು ಕಥಾಸಂಕಲನಗಳನ್ನು ಗುರುತಿಸಿ, ಅವುಗಳ ಪುಸ್ತಕ ಪ್ರಕಟಿಸದಿದ್ದರೂ, ಎರಡು ಸಾವಿರ ರೂಪಾಯಿ ಬಹುಮಾನ ನೀಡಿ ಮೆಚ್ಚುಗೆಯ ಪತ್ರವನ್ನು ನೀಡಲಾಗುತ್ತದೆ. ಸುಂದರವಾದ ಸಮಾರಂಭದಲ್ಲಿ ಫಲಿತಾಂಶವನ್ನು ಘೋಷಿಸಲಾಗುವುದು. ಅನಂತರ ಪ್ರಥಮ ಬಹುಮಾನಿತ ಪುಸ್ತಕವನ್ನು ಮುದ್ರಿಸಲಾಗುವುದು. ಯಾರ ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಆದ್ದರಿಂದ ಮೂಲಪ್ರತಿಯನ್ನು ಕಳುಹಿಸಕೂಡದೆಂದು ಕೋರುತ್ತೇವೆ. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರವಾಗಿರುತ್ತದೆ.
ಕತೆಗಳನ್ನು ಕಳಿಸಬೇಕಾದ ವಿಳಾಸ:
ಛಂದ ಪುಸ್ತಕ, C/O ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು–560 076 (ವಾಟ್ಸಾಪ್. 98444 22782)
ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2024
ನಿಯಮಗಳು ಮತ್ತು ಹೆಚ್ಚಿನ ವಿವರಗಳಿಗೆ: me@vasudhendra.com / 98444 22782
ಸ್ಪರ್ಧೆಯಲ್ಲಿ ಭಾಗವಹಿಸುವವರು ಪಾಲಿಸಬೇಕಾದ ನಿಯಮಗಳು:
ಬೆಂಗಳೂರು: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ "...
ಬೆಂಗಳೂರು: ಮಕ್ಕಳನ್ನು ಸಾಹಿತ್ಯಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಮಕ್ಕಳಿಗೋಸ್ಕರ ವೇದಿಕೆಗಳನ್...
ಕೊಟ್ಟಿಗೆಹಾರ: ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ 7ರಂದು ಪುಸ್ತಕ ಪರಿಶೆ ಕಾರ್ಯಕ್ರಮ ನ...
©2024 Book Brahma Private Limited.