6 ಮಂದಿಗೆ ಕಸಾಪ ಪ್ರೊ. ಮರಿದೇವರು ಪ್ರತಿಷ್ಠಾನದ ದತ್ತಿ ಪ್ರಶಸ್ತಿ

Date: 22-10-2020

Location: ಬೆಂಗಳೂರು


ಕನ್ನಡ ಸಾಹಿತ್ಯ ಪರಿಷತ್‍ ಕೊಡಮಾಡುವ ಪ್ರೊ.ಸಿ.ಎಚ್.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿಗೆ ಹಿರಿಯ ನಟ ಎಚ್.ಜಿ.ದತ್ತಾತ್ರೇಯ, ಶಿಕ್ಷಣ ತಜ್ಞ ತೇಜಸ್ವಿ ವಿ.ಕಟ್ಟಿಮನಿ, ಕವಯತ್ರಿ ಡಾ.ಕೆ.ಎನ್.ಲಾವಣ್ಯ ಪ್ರಭಾ, ಕೃಷಿ ತಜ್ಞ ಬಸವರಾಜ ಸಂತೇಶಿವರ, ಲೇಖಕಿ ಶೈಲಾ ನಾಗರಾಜ್ ಹಾಗೂ ಕ್ರೀಡಾಪಟು ಜಿ.ಕೆ.ವಿಜಯಕುಮಾರಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 20 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ರಂಗಭೂಮಿ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿ, ‘ದತ್ತಣ್ಣ’ ಎಂದೇ ಖ್ಯಾತಿ ಪಡೆದ ಎಸ್.ಜಿ. ದತ್ತಾತ್ರೇಯ ಅವರು ಮೂಲತಃ ಚಿತ್ರದುರ್ಗದವರು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಸಂಸ್ಥೆಯಲ್ಲಿ ಎಂ.ಇ ಪದವೀಧರರು. ಭಾರತೀಯ ವಾಯುಪಡೆಯ ವಿಂಗ್‌ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶರವೇಗದ ಸರದಾರ, ಮಾಧುರಿ, ವೈದ್ಯೋ ನಾರಾಯಣೋ ಹರಿಃ ಸೇರಿದಂತೆ ಹಲವಾರು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಪ್ರೊ. ತೇಜಸ್ವಿ ಕಟ್ಟೀಮನಿ ಅವರು ಮೂಲತಃ ಕೊಪ್ಪಳ ಜಿಲ್ಲೆ ಅಳವಂಡಿಯವರು. ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದು, ಇತ್ತೀಚೆಗಷ್ಟೆ, ಅವರನ್ನು ಆಂಧ್ರಪ್ರದೇಶದ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಿಸಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸ,ಮಿತಿಯ ಸದಸ್ಯರೂ ಆಗಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಆಯೋಜಿಸಿದ್ದ ರಾಜ್ಯ ಸೀನಿಯರ್‍ ಅಥ್ಲೆಟಿಕ್ ಕೂಟದಲ್ಲಿ ಜಿ.ಕೆ. ವಿಜಯಕುಮಾರಿ ಅವರು ಚಿನ್ನದಪದಕ ವಿಜೇತೆ. ಕೇಂದ್ರ ಕ್ರೀಡಾ ಇಲಾಖೆಯ ಟಾರ್ಗೆಟ್ ಓಲಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಕರ್ನಾಟಕದ ಅಥ್ಲಿಟ್ ಆಗಿದ್ದರು. ಬಸವರಾಜ ಸಂತೇಶಿವರ ಅವರು ಕರ್ನಾಟಕದ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ, ಸಾಂಪ್ರದಾಯಿಕ ಕೃಷಿಯ ಕುರಿತು ರೈತ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ನಾಡೋಜ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಸದಸ್ಯರಾದ ಎಸ್.ಎಸ್. ರಾಜಶೇಖರ್‌ ಮತ್ತು ಎಂ.ಎಸ್. ರವಿಕುಮಾರ್‌, ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಹತಗುಂದಿ, ವ.ಚ. ಚನ್ನೇಗೌಡ ಹಾಗೂ ಪ್ರಕಟಣಾ ಸಮಿತಿಯ ರಾಜ್ಯ ಸಂಚಾಲಕ ಪದ್ಮರಾಜ ದಂಡಾವತಿ ಉಪಸ್ಥಿತರಿದ್ದರು.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...