ಆಧುನಿಕತೆಗೆ ಒಗ್ಗುವಂತೆ ಜಾನಪದೀಯ ಕಲೆಗಳ ಪರಿಷ್ಕರಣೆ ಅಗತ್ಯ: ಶ್ರೀರಾಮ ಇಟ್ಟಣ್ಣವರ

Date: 01-08-2021

Location: ವರ್ಚುವಲ್ ವೇದಿಕೆ


ಆಧುನಿಕತೆಗೆ ಒಗ್ಗುವ ಹಾಗೆ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜಾನಪದೀಯ ಕಲೆಗಳನ್ನು ಪರಿಷ್ಕರಣೆ ಒಳಪಡಿಸಬೇಕಿದೆ ಎಂದು ಜಾನಪದ ತಜ್ಞ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಶ್ರೀರಾಮ ಇಟ್ಟಣ್ಣವರ ಅಭಿಪ್ರಾಯಪಟ್ಟರು.

ಬಾಗಲಕೋಟೆಯ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ‘ಪ್ರಜ್ವಲನ’ ಕಾರ್ಯಕ್ರಮದ ಅಂಗವಾಗಿ ವರ್ಚುವಲ್ ವೇದಿಕೆಯಡಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ‘ ಸಣ್ಣಾಟ ರಂಗಗೀತೆಗಳ ಸಂಭ್ರಮ -17’ ವಿಷಯವಾಗಿ ಮಾತನಾಡಿದರು.

ಸಣ್ಣಾಟ, ದೊಡ್ಡಾಟ, ಕೃಷ್ಣಪಾರಿಜಾತ, ಸೂತ್ರದ ಗೊಂಬೆಯಾಟ, ತೊಗಲು ಗೊಂಬೆಯಾಟ ಕಣ್ಮರೆಯಾಗುತ್ತಿವೆ. ಮೂಲ ಆಶಯಕ್ಕೆ ಧಕ್ಕೆ ಬರದ ಹಾಗೆ ಆಧುನಿಕತೆಗೆ ಒಗ್ಗುವ ಹಾಗೆ ಪರಿಷ್ಕರಣೆ ಮಾಡುವುದು ಇಂದಿನ ಕಾಲಘಟ್ಟಕ್ಕೆ ತುಂಬಾ ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ‘ಜನಪದ ರಂಗಭೂಮಿ ವಿಶೇಷವಾಗಿ ಪರಿಷ್ಕರಣೆ ಆಗುವುದರ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಬೇಕಿದೆ. ಈ ಸವಾಲುನ್ನು ಸ್ವೀಕರಿಸುವುದು ಅಗತ್ಯ ಹಾಗೂ ಅನಿವಾರ್ಯ ಎಂದರು.

ಗಮನ ಸೆಳೆದ ಹಾಡುಗಳ ಗಾಯನ: ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಮಲ್ಲಪ್ಪ ಗಣಿ ಹಾಗೂ ಸಂಗಡಿಗರಿಂದ ಸಂಗ್ಯಾಬಾಳ್ಯಾ ಸಣ್ಣಾಟದ ವಿವಿಧ ರಾಗಗಳ ಹಾಡುಗಳನ್ನು ಪೋಷಾಕಿನೊಂದಿಗೆ ಹಾಡಿ ರಂಜಿಸಿದರು. ಶಿರೋಳದ ರಾಮಾರೂಢ ಮಠದ ಶ್ರೀ ಶಂಕರಾರೂಢ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ವಿಠ್ಠಲ ಕೊಪ್ಪದ ಎಂ ಎಂ ವಿರಕ್ತಮಠ ವಿ ಬಿ ಮಾಳಿ ಅತಿಥಿಗಳಾಗಿ ಉಪಸ್ಥಿತರಿದ್ದರು.

ಡಾ.ಸಿದ್ದು ದಿವಾನ್, ಎಸ್ ಆರ್ ಮನಹಳ್ಳಿ , ಎಂ ಜಿ ದಾಸರ, ಉಮೇಶ ಶಿರಹಟ್ಟಿಮಠ, ಮಹಾಂತೇಶ ನರಸನಗೌಡರ, ಶಿವಾನಂದ ಶೆಲ್ಲಿಕೇರಿ, ಸುರೇಶ್ ಪುರವರ, ಮ.ಕೃ. ಮೇಗಾಡಿ, ಮಲ್ಲಿಕಾರ್ಜುನ ಅರಬಿ, ಜಿಎಂ ಮೋಪಗಾರ, ಸಂಗಮೇಶ ನೀಲಗುಂದ, ಡಾ ಪ್ರಕಾಶ ಖಾಡೆ, ಆನಂದ್ ಪೂಜಾರಿ, ಎಸ್ ಎಂ ನದಾಫ್, ಬಸಲಿಂಗಯ್ಯ ಮಠಪತಿ ಇತರರು ಉಪಸ್ಥಿತರಿದ್ದರು

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...