ಆತ್ಮಚಿಂತನೆಯ ಸಾರವತ್ತಾದ ಕೃತಿ ’ಉತ್ತರಯಾನ’: ಪ್ರಶಂಸೆ

Date: 18-01-2020

Location: ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರ, ಚಾಮರಾಜಪೇಟೆ, ಬೆಂಗಳೂರು.


ಉದಯ ಪ್ರಕಾಶನದಿಂದ ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಉತ್ತರಯಾನ’ ಕೃತಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋಕಾರ್ಪಣೆಗೊಂಡಿತು. ಕಾಳಿದಾಸ ವಿಶ್ವವಿದ್ಯಾನಿಲಯದ ಕುಲಪತಿ ಶ್ರೀನಿವಾಸ ವರಕೇಡಿ  ಪುಸ್ತಕ ಬಿಡುಗಡೆ ಮಾಡಿ, ಆಧ್ಯಾತ್ಮ ಜೀವನದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಮಲ್ಲೇಪುರಂ ಅತ್ಯತ್ತಮರೆನಿಸಿದ್ದಾರೆ. ಸಂಸ್ಕೃತದ ಘನವಾದ ಚಿಂತನೆಗಳನ್ನು ಕನ್ನಡದಲ್ಲಿ ಸರಳ ಅಂಕಣ ಬರಹಗಳ ಮೂಲಕ ಎಲ್ಲರಿಗೂ ತಲುಪಿಸಿದ್ದು ಅವರ ವಿಶೇಷತೆಯಾಗಿದೆ” ಎಂದರು.

ಲೇಖಕ ಲೋಕೇಶ ಅಗಸನಕಟ್ಟೆ ಮಾತನಾಡಿ, “ಮಹಾಲಿಂಗರಂಗನ ಅನುಭವಾಮೃತದ ಆಧ್ಯಾತ್ಮ ಚಿಂತನೆಯನ್ನು ಮಲ್ಲೇಪುರಂ ಅವರು ಉತ್ತರಯಾವ ಕೃತಿಯ ಮೂಲಕ ಈ ಕಾಲಘಟ್ಟಕ್ಕೆ ಅವಶ್ಯವಾದ, ಸಾರವತ್ತಾದ ಆತ್ಮಚಿಂತನೆಯನ್ನು ಕೊಟ್ಟಿದ್ಧಾರೆ” ಎಂದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ. ಎನ್‌. ವೆಂಕಟಾಚಲಯ್ಯ, ಪತ್ರಕರ್ತ ಡಿ.ಕೃಷ್ಣಯ್ಯ, ಲೇಖಕ ಮಲ್ಲೇಪುರಂ ಜಿ. ವೆಂಕಟೇಶ, ಪತ್ರಕರ್ತ ಎಚ್. ಎಸ್. ಕುಮಾರಸ್ವಾಮಿ, ಸಿದ್ಧಣ್ಣ ಉತ್ನಾಳ್ ಉಪಸ್ಥಿತರಿದ್ದರು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...