ಆತ್ಮನಿರ್ಭರತೆಯ ಚಿಂತನೆಗೆ ಅವಕಾಶ ಕಲ್ಪಿಸಿದ ಲಾಕ್‌ಡೌನ್ 

Date: 07-06-2020

Location: ಬೆಂಗಳೂರು


‘ಲಾಕ್‌ಡೌನ್’ - ದಿಗ್ಬಂಧನ ಕಲಿಸಿದ ಪಾಠಗಳು  ಕೃತಿ ಬಿಡುಗಡೆ ಮಾಡಿದ ಅವರು “ಸರ್ವರಿಗೂ ಸಮಪಾಲೆಂದು ನಾವು ಸರ್ವಸ್ವವನ್ನು ಸರ್ಕಾರದ ಅಧೀನದಲ್ಲಿ ಅನುಭವಿಸುವಾಗ ಮನುಷ್ಯ ಜೀವನದಿಂದ ವಿಮುಕ್ತನಾಗುತ್ತಾನೆ ಹಾಗೂ ಬಂಡವಾಳಶಾಹಿಗಳು ಕೊಳ್ಳುಬಾಕ ಸಂಸ್ಕೃತಿಯನ್ನು ಬಿತ್ತುತ್ತಾ ಸಾಲದ ಖೆಡ್ಡಕ್ಕೆ ದೂಡುತ್ತಿವೆ. ಪ್ರಸ್ತುತ ಈ ಲಾಕ್‌ಡೌನ್ ಸಮಯದಲ್ಲಿ ಇವೆಲ್ಲಕ್ಕಿಂತ ಭಿನ್ನವಾಗಿ ಸಶಕ್ತವಾಗಿ ಭಾರತೀಯ ಮೂಲದ ಉಳಿತಾಯ ಸಂಸ್ಕೃತಿ ನಿಲ್ಲುತ್ತದೆ. ನಮ್ಮನ್ನು ನಾವು ಸ್ವಾವಲಂಬನೆಯ ಆತ್ಮನಿರ್ಭರತೆಯ ಚಿಂತನೆಗೆ ಲಾಕ್‌ಡೌನ್ ಅವಕಾಶ ಕಲ್ಪಿಸಿದೆ” ಎಂದು ಪ್ರಸ್ತುತ ಲಾಕ್‌ಡೌನ್ ನಿಂದ ಆದ ಬದಲಾವಣೆ ಕುರಿತು ತಿಳಿಸಿದರು.

“ಇಂತಹ ಲಾಕ್‌ಡೌನ್‌ ಸಮಯದಲ್ಲಿ ಆದ ತಮ್ಮ ಅನುಭವಗಳನ್ನು ಹಾಗೂ ತಾವು ಮರಳಿ ವಿಭಿನ್ನತೆಯತ್ತ ಮುಖಮಾಡಿದ ಧನಾತ್ಮಕ ಅಂಶಗಳ ಲೇಖನ ಸಂಗ್ರಹ ಈ ಕೃತಿಯಾಗಿದ್ದು ಈ ಕಾಲಘಟ್ಟದಲ್ಲಿ ದಾಖಲಿಸಲೇಬೇಕಾದ ಲೇಖನಗಳಿವು” ಎಂದು ಕೃತಿಯ ಮಹತ್ವವನ್ನು ವಿವರಿಸಿದರು. ಪಲ್ಲವಿ ರಾವ್, ಕೃತಿಯ ಸಂಪಾದಕರಾದ ರಾಧಾಕೃಷ್ಣ, ರಂಗಸ್ವಾಮಿ ಮೂಕನಹಳ್ಳಿ ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...