ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್

Date: 06-12-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ನ್ಯೂಯಾರ್ಕ್ ಮೂಲದ ಪೇಂಟಿಂಗ್, ಮಲ್ಟಿ ಮೀಡಿಯಾ, ನಿಯಾನ್, ಫೊಟೋಗ್ರಫಿ ಆಧಾರಿತ ಕಲಾಕೃತಿಗಳು, ಹಾಗೂ ವೀಡಿಯೊ ಕಲಾವಿದ ಗ್ಲೆನ್ ಲೈಗನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ. 

ಕಲಾವಿದ: ಗ್ಲೆನ್ ಲೈಗನ್ (Glenn Ligon)
ಜನನ: 1961
ಶಿಕ್ಷಣ: ವೆಸ್ಲಿಯಾನ್ ಯೂನಿವರ್ಸಿಟಿ, ಅಮೆರಿಕ
ವಾಸ: ತ್ರಿಬೆಕಾ, ನ್ಯೂಯಾರ್ಕ್
ಕವಲು: ಸಮಕಾಲೀನ ಕಲೆ
ವ್ಯವಸಾಯ: ಪೇಂಟಿಂಗ್, ಮಲ್ಟಿ ಮೀಡಿಯಾ, ನಿಯಾನ್, ವೀಡಿಯೊ, ಫೊಟೋಗ್ರಫಿ ಆಧಾರಿತ ಕಲಾಕೃತಿಗಳು

ಗ್ಲೆನ್ ಲೈಗನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಗ್ಲೆನ್ ಲೈಗನ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

“I feel most coloured over when I am thrown against a sharp white background” ಎಂಬ ಝೋರಾ ನೀಲ್ ಹರ್ಸ್ಟನ್ (ಆಫ್ರಿಕನ್ ಮೂಲದ ಅಮೆರಿಕನ್ ಲೇಖಕ)ವರ 1928ರ ಪ್ರಬಂಧದಿಂದ ಈ ವಾಕ್ಯವನ್ನು ಆಯ್ದು, ಅದನ್ನು ಸ್ಟೆನ್ಸಿಲ್ ಮಾಡಿ, ಬಿಳಿಯ ಕ್ಯಾನ್ವಾಸಿನ ಮೇಲೆ ಇರಿಸಿ ಅದಕ್ಕೆ ಬಣ್ಣ ಹಚ್ಚುತ್ತಾ ಪುನರಾವರ್ತಿಸಿ ಮುದ್ರಿಸುತ್ತಾ ಬಂದು, ಅದು ಕೆಳಕೆಳಗೆ ಹೋಗುತ್ತಿದ್ದಂತೆ, ಕ್ರಮೇಣ ಅಸ್ಪಷ್ಟವಾಗುತ್ತಾ ಬರುವ ಚಿತ್ರಣ ಇರುವ ಕಲಾಕೃತಿಯೊಂದು 1991ರ ವಿಟ್ನಿ ಮ್ಯೂಸಿಯಂ ದ್ವೈವಾರ್ಷಿಕ ಕಲಾಪ್ರದರ್ಶನದಲ್ಲಿ ಗಮನ ಸೆಳೆದಿತ್ತು. ಅಕ್ಷರಗಳನ್ನು ಈ ರೀತಿ ಧಾರಾಳವಾಗಿ ಬಳಸಿಕೊಂಡು ಕಲಾಕೃತಿಗಳನ್ನು ರಚಿಸುವ ಗ್ಲೆನ್ ಲೈಗನ್ ಮೊದಲ ಬಾರಿಗೆ ಆ ಕಲಾಪ್ರದರ್ಶನದಲ್ಲಿ ಆಸಕ್ತರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರು. ಅಕ್ಷರಗಳನ್ನೇ ನೇರವಾಗಿ ಕಲಾಕೃತಿಗಳಲ್ಲಿ ಬಳಸಿದ್ದರೂ ಅಮೂರ್ತ ಕಲಾಕೃತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಉದ್ದೇಶಪೂರ್ವಕತೆ ಮತ್ತು ಆಕಸ್ಮಿಕಗಳ ಹದವಾದ ಮಿಶ್ರಣದ ಸಮರ್ಥ ಬಳಕೆಯ ಕಾರಣದಿಂದಾಗಿ ಅವರು ಈ ಕಲಾಕೃತಿಗಳಲ್ಲಿ ಭಾಷೆ ಮತ್ತು ಭಾಷೆಯ ಅರ್ಥೈಸುವಿಕೆಗಳಲ್ಲಿ ಎಷ್ಟೊಂದು ಅಸಂಗತತೆ ಇದೆ ಎಂಬುದನ್ನು ಹಿಡಿದಿಟ್ಟಿದ್ದರು.

ಕಳೆದೆರಡೂ ದಶಕಗಳಿಂದ ಪೇಂಟಿಂಗ್‌ಗಳು, ಫೊಟೊಗ್ರಫಿ, ಪ್ರಿಂಟ್ ಮೇಕಿಂಗ್, ವೀಡಿಯೊ, ನಿಯಾನ್ ಲೈಟ್‌ಗಳ ಬಳಕೆಯ ಮೂಲಕ ತನ್ನ ಕಲಾಕೃತಿಗಳನ್ನು ರಚಿಸುತ್ತಿರುವ ಗ್ಲೆನ್, ಭಾಷೆಯನ್ನೇ ವಸ್ತುವಾಗಿರಿಸಿಕೊಂಡು ಕಲಾಕೃತಿಗಳನ್ನು ರಚಿಸುವುದಕ್ಕೆ ಪ್ರಸಿದ್ಧರು.

90ರ ದಶಕದಲ್ಲಿ ಆಫ್ರಿಕಾ ಮೂಲದ ಕಲಾವಿದರು ತಮ್ಮ “ಐಡೆಂಟಿಟಿ”ಯನ್ನೇ ವಸ್ತುವಾಗಿರಿಸಿಕೊಂಡು ಕಲಾಕೃತಿಗಳನ್ನು ರಚಿಸುವ ಮೂಲಕ ಮೊದಲ ಬಾರಿಗೆ ಅಮೆರಿಕದ ಮುಖ್ಯವಾಹಿನಿ ಕಲಾಜಗತ್ತಿನಲ್ಲಿ ತಮ್ಮ ಜಾಗವನ್ನು ಕಂಡುಕೊಳ್ಳತೊಡಗಿದ್ದರು. ಆ ಹಂತದಲ್ಲಿ ಮೂಡಿದ ಸಮರ್ಥ ಕಲಾವಿದರಲ್ಲಿ ಗ್ಲೆನ್ ಕೂಡ ಒಬ್ಬರೆಂದು ಪರಿಗಣಿತರಾಗಿದ್ದಾರೆ.

ಅಮೆರಿಕದ ಬ್ರಾಂಕ್ಸ್‌ನಲ್ಲಿ ಜನಿಸಿದ ಗ್ಲೆನ್ ತಂದೆ-ತಾಯಿ, ಗ್ಲೆನ್‌ಗೆ ಏಳು ವರ್ಷ ಪ್ರಾಯ ಆಗುವ ಹೊತ್ತಿಗೆ ವಿಚ್ಛೇದನ ಪಡೆದಿದ್ದರು. ನರ್ಸಿಂಗ್ ಸಹಾಯಕಿಯಾಗಿ ದುಡಿದು ಮಗನನ್ನು ಸಾಕುತ್ತಿದ್ದ ಗ್ಲೆನ್ ತಾಯಿಗೆ, ಆತ ಕಲಿಯುತ್ತಿದ್ದ ಸ್ಥಳೀಯ ಶಾಲೆಯ ಪ್ರಾಂಶುಪಾಲರು, ಈ ಹುಡುಗ ಪ್ರತಿಭಾವಂತ, ಒಳ್ಳೆಯ ಶಾಲೆಗೆ ಆತನನ್ನು ಸೇರಿಸಿ ಎಂದು ಹೇಳಿ, ಆತನ ಕಲಿಕೆ ಸ್ಕಾಲರ್‌ಶಿಪ್‌ಗೆ ವ್ಯವಸ್ಥೆ ಮಾಡುತ್ತಾರೆ.

ಹಾಗೆ ನ್ಯೂಯಾರ್ಕಿನ ಪ್ರತಿಷ್ಠಿತ ವಾಲ್ಡೆನ್ ಶಾಲೆಯಲ್ಲಿ ಕಲಿತ ಗ್ಲೆನ್, ಆ ಬಳಿಕ ರೋಡ್ ಐಲಂಡ್ ಸ್ಕೂಲ್ ಆಫ್ ಡಿಸೈನ್ ಮತ್ತು ವೆಸ್ಲಿಯಾನ್ ವಿವಿಗಳಿಂದ ಪದವಿ ಪಡೆಯುತ್ತಾರೆ. ಆದರೆ, 2003ರ ಒಂದು ಕಲಾಪ್ರದರ್ಶನದಲ್ಲಿ ಅವರು ತನ್ನ ವಾಲ್ಡೆನ್ ಶಾಲೆಯ ಮೇಷ್ಟ್ರುಗಳು ತಾನು ಕರಿಯ ಜನಾಂಗದವನೆಂಬ ಕಾರಣಕ್ಕೆ ಶಾಲಾ ವರದಿಗಳಲ್ಲಿ ಮಾಡಿದ್ದ ಕೆಲವು ಕಾಮೆಂಟ್‌ಗಳನ್ನು ಕಲಾಕೃತಿಗಳಾಗಿ ಬಳಸುತ್ತಾರೆ. “Glen has acid, witty sense of humour”, “He tends to be politically apathetic about being black, which is a shame” ಇಂತಹ ವಾಕ್ಯಗಳನ್ನೇ ಕ್ಯಾನ್‌ವಾಸ್ ಮೇಳೆ ಸ್ಕ್ರೀನ್‌ಪ್ರಿಂಟ್ ಮಾಡಿ ಅವರು ಪ್ರದರ್ಶಿಸಿದ್ದರು. ಈ ರೀತಿಯ ವರ್ಣಬೇಧದ ಅನುಭವಗಳು ಅವರ ವ್ಯಕ್ತಿತ್ವವನ್ನು ರೂಪಿಸುತ್ತಾ ಹೋದವು.

ತನ್ನ ಕಲಿಕೆಯ ಬಳಿಕ, ನ್ಯೂಯಾರ್ಕಿನಲ್ಲಿ ವಕೀಲರ ಕಚೇರಿಯೊಂದರಲ್ಲಿ ಕರಡು ತಿದ್ದುವ ಕೆಲಸ ಮಾಡಿಕೊಂಡಿದ್ದ ಗ್ಲೆನ್ ಕಲೆಯನ್ನೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 1989ರಲ್ಲಿ ಅವರಿಗೆ ನ್ಯಾಷನಲ್ ಎಂಡೋಮೆಂಟ್ ಆಫ್ ಆರ್ಟ್ಸ್‌ನ ಗ್ರ್ಯಾಂಟ್ ಸಿಕ್ಕಿದ ಬಳಿಕ ಅವರು ಕಲೆಯನ್ನು ಗಂಭೀರವಾಗಿ ಒಂದು ವೃತ್ತಿಯಾಗಿ ಪರಿಗಣಿಸತೊಡಗಿದರು. 1991ರಲ್ಲಿ ನ್ಯೂಯಾರ್ಕಿನ ಗ್ರೇ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಲಾಪ್ರದರ್ಶನದಲ್ಲಿ ಅವರು ಮೊದಲ ಬಾರಿಗೆ ವಿಮರ್ಶಕರ ಗಮನ ಸೆಳೆದರು.

ಆರಂಭದಲ್ಲಿ ಅವರು ಡೋರ್, ಬ್ಲ್ಯಾಕ್ ಮೇಲ್ (1993) ನಂತಹ ಅಕ್ಷರ ಸರಣಿಗಳನ್ನು ರಚಿಸುತ್ತಾ, ಆ ಮೂಲಕ ಅಮೆರಿಕದ ಕರಿಯರ ಪುರುಷಪ್ರಧಾನ ವ್ಯವಸ್ಥೆಯನ್ನು ಅಮೆರಿಕನ್ ಸಮಕಾಲೀನ ಕಲೆ ಹೇಗೆ ಬಿಂಬಿಸುತ್ತಿದೆ ಎಂಬುದನ್ನು ತನ್ನ ಕಲಾಕೃತಿಗಳ ಮೂಲಕ ವಿಮರ್ಶೆಗೆ ಒಡ್ಡುತ್ತಿದ್ದರು. 2009ರ ಹೊತ್ತಿಗೆ ನಿಯಾನ್‌ಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಿದ ಗ್ಲೆನ್ ಅವರ “ಅಮೆರಿಕ” ಎಂಬ ನಿಯಾನ್ ಬರಹದ ಕೃತಿ ಹಲವು ಆವೃತ್ತಿಗಳನ್ನು ಕಂಡಿರು ವ ಪ್ರಸಿದ್ಧ ಕಲಾಕೃತಿಯಾಗಿದೆ.

2008ರಲ್ಲಿ ಜಾಝ್ ಸಂಗೀತ ತಜ್ಞ ಜಸನ್ ಮೊರಾನ್ ಅವರ ಜೊತೆ ಸೇರಿ, “The death of Tom”ಎಂಬ ವೀಡಿಯೊ ಚಿತ್ರವನ್ನು ಅವರು ರಚಿಸಿದ್ದಾರೆ. 2009ರಲ್ಲಿ ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾದಾಗ, ಅವರ ಶ್ವೇತಭವನದ ಖಾಸಗಿ ನಿವಾಸದಲ್ಲಿ ತೂಗುಹಾಕುವುದಕ್ಕಾಗಿ ಗ್ಲೆನ್ ಅವರ ಪೇಂಟಿಂಗ್ ಒಂದನ್ನು ಒಬಾಮಾ, ವಾಷಿಂಗ್ಟನ್‌ನ ಹರ್ಷ್‌ಹಾರ್ನ್ ಮ್ಯೂಸಿಯಂನಲ್ಲಿ ಅವಧಿ ಗುತ್ತಿಗೆಯ ಮೇಲೆ ಪಡೆದಿದ್ದರು.

ಈಗ ನ್ಯೂಯಾರ್ಕಿನ ತ್ರಿಬೆಕಾದಲ್ಲಿ ವಾಸವಿರುವ ಗ್ಲೆನ್ ಹಾಲೀ ಫೌಂಡೇಷನ್ ಆಫ್ ಕಂಟೆಂಪರರಿ ಆರ್ಟ್, ಪುಲಿಟ್ಝರ್ ಫೌಂಡೇಶನ್‌ಗಳ ನಿರ್ದೇಶಕ ಮಂಡಳಿಯಲ್ಲೂ ಇದ್ದಾರೆ. Disembank (1993), Runaways (1993),  Feast of scraps (1994-98), colouring book series ಅವರ ಇತರ ಕೆಲವು ಪ್ರಮುಖ ಕಲಾಸರಣಿಗಳು. 2012ರಲ್ಲಿ ನ್ಯೂಯಾರ್ಕಿನ ನ್ಯೂಸ್ಕೂಲ್ ವಿವಿಗೆ ಅವರು 400ಅಡಿ ಗಾತ್ರದಲ್ಲಿ ಕವಿ ವಾಲ್ಟ್ ವಿಟ್ಮನ್‌ನ Leaves of grass ಕವನವನ್ನು ನಿಯಾನ್ ಬಳಸಿ ರಚಿಸಿದ್ದಾರೆ. ಅದು ವಿವಿಯ ಮೊದಲ ಮಹಡಿಯ ಕಫೆಯಲ್ಲಿ ಸಾರ್ವಜನಿಕ ಶಿಲ್ಪವಾಗಿ ಪ್ರದರ್ಶಿತವಾಗುತ್ತಿದೆ. 

ಮೆನಿಲ್ ಗ್ಯಾಲರಿಯಲ್ಲಿ ಗ್ಲೆನ್ ಲೈಗನ್ ಅವರ ಮಾತುಗಳು (2020): 

ನ್ಯೂಸ್ಕೂಲ್ ವಿವಿಯಲ್ಲಿ ತನ್ನ ಕಲಾಕೃತಿಯ ಬಗ್ಗೆ ಗ್ಲೆನ್ ಲೈಗನ್ ಮಾತುಗಳು: 

ಚಿತ್ರ ಶೀರ್ಷಿಕೆಗಳು:
ಗ್ಲೆನ್ ಲೈಗನ್ ಅವರ A small band (2015)

ಗ್ಲೆನ್ ಲೈಗನ್ ಅವರ America (2009)

ಗ್ಲೆನ್ ಲೈಗನ್ ಅವರ America (2011)

ಗ್ಲೆನ್ ಲೈಗನ್ ಅವರ Condition report (2020)

ಗ್ಲೆನ್ ಲೈಗನ್ ಅವರ Debris Field (2018)

ಗ್ಲೆನ್ ಲೈಗನ್ ಅವರ Details of notes on the margin of the black book (1993)

ಗ್ಲೆನ್ ಲೈಗನ್ ಅವರ Hands (1996)

ಗ್ಲೆನ್ ಲೈಗನ್ ಅವರ Mirror (2002)

ಗ್ಲೆನ್ ಲೈಗನ್ ಅವರ Newschool University sculpture -For Comrades and Lovers (2015)

ಗ್ಲೆನ್ ಲೈಗನ್ ಅವರ Runaways (1993)

ಗ್ಲೆನ್ ಲೈಗನ್ ಅವರ Stranger Number-77 (2014)

ಗ್ಲೆನ್ ಲೈಗನ್ ಅವರ STUDY FOR NEGRO SUNSHINE II, 31, (2011)

ಗ್ಲೆನ್ ಲೈಗನ್ ಅವರ Untitled (Malcom X) (2008) 

ಈ ಅಂಕಣದ ಹಿಂದಿನ ಬರೆಹಗಳು:
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...